ಬೆಂಗಳೂರು : ಸನಾತನ ಧರ್ಮದ ನಂಬಿಕೆಗಳ ಪ್ರಕಾರ ತುಳಸಿಯಲ್ಲಿ ಮಹಾಲಕ್ಷ್ಮೀ ನೆಲೆಸಿದ್ದಾಳೆ ಎನ್ನುವುದು ನಂಬಿಕೆ. ಈ ಕಾರಣದಿಂದಲೇ ತುಳಸಿ ಗಿಡವನ್ನು ಪ್ರತಿ ಹಿಂದೂಗಳ ಮನೆಯಲ್ಲಿ ನೆಡಲಾಗುತ್ತದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ತುಳಸಿಯನ್ನು ಪೂಜಿಸಲಾಗುತ್ತದೆ. ತುಳಸಿ ಬೀಜಗಳಿಂದ ಮಾಡಿದ ಜಪಮಾಲೆಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ ಇದೆ.  ಈ ಜಪಮಾಲೆಯನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಇದನ್ನು ಭಗವಾನ್ ವಿಷ್ಣು ಮತ್ತು ಅವನ ಅವತಾರಗಳಾದ ಶ್ರೀ ಕೃಷ್ಣ ಮತ್ತು ಶ್ರೀ ರಾಮನ ಆರಾಧನೆಯಲ್ಲಿ ಬಳಸಲಾಗುತ್ತದೆ. 


COMMERCIAL BREAK
SCROLL TO CONTINUE READING

ತುಳಸಿ ಮಾಲೆ ಧರಿಸುವುದರಿಂದ ಆಗುವ ಲಾಭಗಳು :
ಧನಾತ್ಮಕ ಶಕ್ತಿಯ ಪ್ರಸರಣ : 

ತುಳಸಿ ಮಾಲೆಯನ್ನು ಧರಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ಬರುತ್ತದೆ. ಮನಸ್ಸು ಶಾಂತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಜಪಮಾಲೆಯನ್ನು ಧರಿಸುವುದರಿಂದ ಭಗವಾನ್ ವಿಷ್ಣು ಮತ್ತು ಕೃಷ್ಣನ ಕಡೆಗೆ ಭಕ್ತಿ ಮತ್ತು ಸಮರ್ಪಣೆಯ ಭಾವನೆಯನ್ನು ನೀಡುತ್ತದೆ. 


ಇದನ್ನೂ ಓದಿ : ಈ ರಾಶಿಯ ಹುಡುಗಿಯರನ್ನ ಮದುವೆಯಾದರೆ ಭಿಕ್ಷುಕನೂ ಕೋಟ್ಯಾಧಿಪತಿಯಾಗುತ್ತಾನೆ! ಬದುಕು ಬಂಗಾರವಾಗುತ್ತೆ..


ಮಂತ್ರಗಳನ್ನು ಪಠಿಸಲು ಪ್ರಯೋಜನಕಾರಿ :
ಧಾರ್ಮಿಕ ವಿದ್ವಾಂಸರ ಪ್ರಕಾರ, ತುಳಸಿ ಮಾಲೆಯನ್ನು ಧರಿಸಿದ ವ್ಯಕ್ತಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾನೆ. ಸಂತೋಷ ಮತ್ತು ಸಮೃದ್ಧಿಯ ಜೀವನ ನಡೆಸುತ್ತಾನೆ. ಈ ಮಾಲೆಯನ್ನು ಮಂತ್ರಗಳನ್ನು ಪಠಿಸಲು ಬಳಸಲಾಗುತ್ತದೆ.  


ಯಾವುದೇ ಹೊಸ ಕೆಲಸ ಮಾಡುವಾಗ ಕೈಯ್ಯಲ್ಲಿ ಈ ಮಾಲೆಯನ್ನು ಇಟ್ಟುಕೊಂಡರೆ ಸಾಕ್ಷಾತ್ ಭಗವಾನ್ ವಿಷ್ಣು ಜೊತೆ ನಿಂತು ಆ ಕಾರ್ಯವನ್ನು ನಡೆಸಿಕೊಡುತ್ತಾನೆ ಎನ್ನುವುದು ನಂಬಿಕೆ.


ತುಳಸಿ ಮಾಲೆಯ ಆಯುರ್ವೇದ ಪ್ರಯೋಜನಗಳು : 
ತುಳಸಿ ಜಪಮಾಲೆಯನ್ನು ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದರಿಂದ ಹಲವಾರು ಔಷಧೀಯ ಪ್ರಯೋಜನಗಳಿವೆ. ವಾಸ್ತವವಾಗಿ ತುಳಸಿ ಕೂಡಾ ಒಂದು ಔಷಧೀಯ ಸಸ್ಯವಾಗಿದೆ. ಅದರ ಸಂಪರ್ಕದಿಂದ ದೇಹವು ಶಕ್ತಿಯನ್ನು ಪಡೆಯುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ. ಈ ಜಪಮಾಲೆಯನ್ನು ಧರಿಸುವುದರಿಂದ ಖಿನ್ನತೆ ಮತ್ತು ಮಾನಸಿಕ ಒತ್ತಡದಿಂದ ಪರಿಹಾರ ದೊರೆಯುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


ತುಳಸಿ ಮಾಲೆಯಲ್ಲಿ ಎಷ್ಟು ವಿಧಗಳಿವೆ? :
ತುಳಸಿ ಮಾಲೆಗಳು ಸಾಮಾನ್ಯವಾಗಿ ಎರಡು ವಿಧ. ಸಣ್ಣ ಮಣಿಗಳನ್ನು ಹೊಂದಿರುವ ಮಾಲೆಗಳನ್ನು ಕುತ್ತಿಗೆಗೆ ಧರಿಸಲು ಬಳಸಲಾಗುತ್ತದೆ. 108 ಮಣಿಗಳನ್ನು ಹೊಂದಿರುವ ಜಪಮಾಲೆಯನ್ನು ಪಠಣಕ್ಕಾಗಿ ಬಳಸಲಾಗುತ್ತದೆ. 


ತುಳಸಿ ಜಪಮಾಲೆ ಧರಿಸುವ ನಿಯಮಗಳು  :
ನೀವೂ ಕೂಡ ತುಳಸಿ ಮಾಲೆಯನ್ನು ಧರಿಸಬೇಕೆಂದಿದ್ದರೆ ಅದಕ್ಕಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮೊದಲನೆಯದಾಗಿ, ತುಳಸಿ ಜಪಮಾಲೆಯನ್ನು ಯಾವಾಗಲೂ ಶುದ್ಧ ಮತ್ತು ಪವಿತ್ರ ಸ್ಥಳದಲ್ಲಿ ಇಡಬೇಕು.  ಈ ಜಪಮಾಲೆಯನ್ನು ಧರಿಸಿದ ವ್ಯಕ್ತಿಯು ಸದ್ಗುಣವನ್ನು ಅನುಸರಿಸಬೇಕು. ಮಾಂಸಾಹಾರ ಮತ್ತು ತಾಮಸಿಕ ಆಹಾರವನ್ನು ತ್ಯಜಿಸಬೇಕು. ಈ ಜಪಮಾಲೆಯನ್ನು ಧರಿಸಿದ ವ್ಯಕ್ತಿಯು ವಿಷ್ಣು ಅಥವಾ ಕೃಷ್ಣನನ್ನು ನಿಯಮಿತವಾಗಿ ಪೂಜಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.