Tulsi Niyam: ಪ್ರತಿ ಭಾರತೀಯರ ಮನೆಯಲ್ಲೂ ತುಳಸಿ ಸಸ್ಯ ಇದ್ದೇ ಇರುತ್ತದೆ. ಹಿಂದೂ ಧರ್ಮದಲ್ಲಿ ಪೂಜ್ಯ ಸ್ಥಾನ ಗಳಿಸಿರುವ ತುಳಸಿ ಸಸ್ಯವನ್ನು ಪವಿತ್ರ ಸಸ್ಯ ಎಂತಲೂ ನಂಬಲಾಗಿದೆ. ಔಷಧೀಯ ಗುಣಗಳಿಂದ ಕೂಡಿರುವ ತುಳಸಿ ಸಸ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ಉಲ್ಲೇಖಗಳಿವೆ. 


COMMERCIAL BREAK
SCROLL TO CONTINUE READING

ಧಾರ್ಮಿಕ ನಂಬಿಕೆಗಳ ಪ್ರಕಾರ, ನಿತ್ಯ ಪೂಜಿಸುವುದರಿಂದ ಅಂತಹ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ. ಮಾತ್ರವಲ್ಲ, ಅಲ್ಲಿ ಸುಖ-ಶಾಂತಿಗೆ ಕೊರತೆಯೇ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ತುಳಸಿ ಸಸ್ಯದ ಬಳಿ ಕೆಲವು ವಸ್ತುಗಳನ್ನು ಇಡುವುದರಿಂದ ಅದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಂತಹ ಜಾಗದಲ್ಲಿ ಸದಾ ನೋವು, ಸಂಕಷ್ಟಗಳು ಹೆಚ್ಚಾಗುತ್ತವೆ ಎಂತಲೂ ಹೇಳಲಾಗುತ್ತದೆ. ಹಾಗಿದ್ದರೆ, ತುಳಸಿ ಸಸ್ಯದ ಬಳಿ ಯಾವ ವಸ್ತುಗಳನ್ನು ಇಡಲೇಬಾರದು ಎಂದು ತಿಳಿಯೋಣ... 


ತುಳಸಿ ಸಸ್ಯದ ಬಳಿ ಈ 5 ವಸ್ತುಗಳನ್ನು ಇಡಲೇಬಾರದು: 
ಪೊರಕೆ ಅಥವಾ ಕಸದ ಬುಟ್ಟಿ: 

ತುಳಸಿ ಸಸ್ಯದ ಸಮೀಪದಲ್ಲಿ ಎಂದಿಗೂ ಕೂಡ ಪೊರಕೆಯನ್ನಾಗಲಿ, ಇಲ್ಲವೇ, ಕಸದ ಬುಟ್ಟಿಯನ್ನಾಗಲಿ ಇಡಲೇಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿ ನಿಮ್ಮ ಮೇಲೆ ಮುನಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Budha Margi: ವಾರದ ಬಳಿಕ 3 ರಾಶಿಯವರ ಅದೃಷ್ಟವನ್ನೇ ಬದಲಿಸಲಿದ್ದಾನೆ ಮಾರ್ಗಿ ಬುಧ


ಗಣೇಶನ ವಿಗ್ರಹ: 
ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಘ್ನ ವಿನಾಶಕ ಗಣೇಶನೂ ಒಮ್ಮೆ ತುಳಸಿಗೆ ಅಸುರನನ್ನು ಮದುವೆ ಆಗುವಂತೆ ಶಪಿಸಿದ್ದನು ಎಂದು ನಂಬಲಾಗಿದೆ. ಅಂದಿನಿಂದ ತುಳಸಿ ದೇವಿಗೆ ಗಣೇಶನನ್ನು ಕಂಡರೆ ಕೋಪವಿರುವುದರಿಂದ ತುಳಸಿ ಸಸ್ಯದ ಬಳಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು. ಮಾತ್ರವಲ್ಲ, ಗಣೇಶನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಅರ್ಪಿಸಬಾರದು ಎನ್ನಲಾಗುತ್ತದೆ. 


ಶಿವಲಿಂಗ: 
ತುಳಸಿ ಗಿಡದ ಬಳಿ ಶಿವಲಿಂಗ ಅಥವಾ ಶಿವನ ಮೂರ್ತಿ ಇತ್ಯಾದಿಗಳನ್ನು ಇಡಬಾರದು. ಇದರ ಹಿಂದಿನ ನಂಬಿಕೆಯೆಂದರೆ ತುಳಸಿ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು. ಆಕೆಯ ಹೆಸರು ವೃಂದಾ. ಜಲಂಧರನ ಕ್ರೌರ್ಯ ಹೆಚ್ಚಾದಾಗ, ಶಿವನು ಅವನನ್ನು ಕೊಲ್ಲಬೇಕಾಯಿತು. ಶಿವನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇರಲು ಇದೇ ಪ್ರಮುಯಿಖಾ ಕಾರಣ ಎಂದು ನಂಬಲಾಗಿದೆ. 


ಇದನ್ನೂ ಓದಿ- ಸಿದ್ಧಿ ಯೋಗ : ಈ 5 ರಾಶಿಗಳ ಭವಿಷ್ಯ ಬದಲು.. ಹಣದ ಹೊಳೆ ಫಿಕ್ಸ್, ಸ್ವರ್ಗಕ್ಕೆ ಮೂರೇಗೇಣು!


ಪಾದರಕ್ಷೆ: 
ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಳಸಿ ಸಸ್ಯದ ಬಳಿ ಪಾದರಕ್ಷೆಗಳನ್ನು ಇಡಬಾರದು. ಈ ರೀತಿ ಮಾಡುವುದರಿಂದ ಅಂತಹ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. 


ಮುಳ್ಳಿನ ಗಿಡಗಳು: 
ತುಳಸಿ ಸಸ್ಯದೊಂದಿಗೆ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ಇಡಬಾರದು. ಇದರಿಂದ ಮನೆಯಲ್ಲಿ ಋಣಾತ್ಮಕತೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ತುಳಸಿ ಸಸ್ಯದ ಬಳಿ ಯಾವುದೇ ಮುಳ್ಳಿನ ಗಿಡಗಳಿದ್ದರೆ ತಕ್ಷಣ ತೆಗೆಯಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.