ಬೆಂಗಳೂರು : ಭಗವಾನ್ ವಿಷ್ಣು ಮತ್ತು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವ ಸುಲಭವಾದ ಮಾರ್ಗವೆಂದರೆ ತುಳಸಿಯನ್ನು ಪ್ರತಿದಿನ ಪೂಜಿಸುವುದು.ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತುಳಸಿ ಗಿಡವನ್ನು ಪೂಜಿಸಿ,ನೀರನ್ನು ಅರ್ಪಿಸಿ ಮತ್ತು ತುಪ್ಪದ ದೀಪವನ್ನು ಬೆಳಗಿಸುವುದರಿಂದ ಮನೆಯು ಯಾವಾಗಲೂ ಸಂಪತ್ತಿನಿಂದ ತುಂಬಿರುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಂತೋಷ ನೆಲೆಯಾಗುತ್ತದೆ. 


COMMERCIAL BREAK
SCROLL TO CONTINUE READING

ಇಂದಿನಿಂದ ಕಾರ್ತಿಕ ಮಾಸ ಪ್ರಾರಂಭವಾಗುತ್ತದೆ. ಕಾರ್ತಿಕ ಮಾಸದಲ್ಲಿ, ಜಗತ್ತನ್ನು ಸೃಷ್ಟಿಸಿದ ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.  ಕಾರ್ತಿಕ ಮಾಸದಲ್ಲಿ ವಿಷ್ಣು ಮತ್ತು ಕೃಷ್ಣ ದೇವರನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯ ಅನುಗ್ರಹವು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಗೂ ಹೆಚ್ಚಿನ ಮಹತ್ವವಿದೆ.ತುಳಸಿ ಗಿಡ ಲಕ್ಷ್ಮಿಯ ರೂಪವಾಗಿದೆ.ಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು  ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ.  


ಇದನ್ನೂ ಓದಿ : ಈ ರಾಶಿಯವರ ಬಾಳು ಬಂಗಾರವಾಗಬೇಕಾದರೆ ಬೆರಳಲ್ಲಿ ಚಿನ್ನದ ಉಂಗುರ ಇರಲೇಬೇಕು ! ಹಳದಿ ಲೋಹವಷ್ಟೇ ಬೆಳಗುವುದು ಇವರ ಅದೃಷ್ಟ


ತುಳಸಿ ಪೂಜೆಯ ವಿಧಾನ : 
ಬೆಳಿಗ್ಗೆದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು. ಆದರೆ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಈ 2 ದಿನಗಳಲ್ಲಿ, ತುಳಸಿ ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾರೆ. ಈ ದಿನ ತುಳಸಿಗೆ ನೀರು ಅರ್ಪಿಸಿದರೆ ಉಪವಾಸವನ್ನು ಮುರಿದ ಹಾಗೆ ಆಗುತ್ತದೆ. ಈ ಎರಡು ದಿನಗಳಲ್ಲಿ ತುಳಸಿಯನ್ನು ಮುಟ್ಟಬಾರದು, ಎಲೆಗಳನ್ನು ಕೀಳಬಾರದು. ತುಳಸಿಗೆ ನೀರನ್ನು ಅರ್ಪಿಸಿದ ನಂತರ ತಪ್ಪದೇ ಕುಂಕುಮ ಅರಶಿನ ಹಚ್ಚಲೇ ಬೇಕು. ನಂತರ ತುಪ್ಪದ ದೀಪವನ್ನು ಹಚ್ಚಿ. ಆರತಿ ಮಾಡಿ. 3 ಬಾರಿ ಪ್ರದಕ್ಷಿಣೆ ಹಾಕಿ. ಸಂಜೆ ಮತ್ತೆ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚುವುದನ್ನು ಮರೆಯಬೇಡಿ. 


ತುಳಸಿ ಬಗ್ಗೆ ಅನುಸರಿಸಬೇಕಾದ  ಕೆಲವು ಪ್ರಮುಖ ನಿಯಮಗಳು : 
-ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚಿ.ತುಳಸಿ ಗಿಡದ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಿ. 
- ತುಳಸಿ ಗಿಡದ ಬಳಿ ಕತ್ತಲು ಇರಬಾರದು. ಸಂಜೆಯಾಗುತ್ತಿದ್ದಂತೆಯೇ ಅಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಿ. ದೀಪವನ್ನು ಬೆಳಗಿಸಿ. 
- ತುಳಸಿಯ ಸುತ್ತ ಮುಳ್ಳಿನ ಗಿಡಗಳನ್ನು ಇಡಬೇಡಿ. ಸ್ನಾನ ಮಾಡದೆ ಅಥವಾ ಕೊಳಕು ಕೈಗಳಿಂದ ತುಳಸಿ ಗಿಡವನ್ನು ಮುಟ್ಟಬೇಡಿ. 
- ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟಬೇಡಿ. ತುಳಸಿ ಎಲೆಗಳನ್ನು ಕೀಳಬಾರದು. 


ಇದನ್ನೂ ಓದಿ: ಆಮೆ ಉಂಗುರ ಈ ರಾಶಿಯವರಿಗೆ ಅಶುಭ.. ಬದುಕನ್ನು ನರಕವಾಗಿಸುವುದು, ಶ್ರೀಮಂತನೂ ದರಿದ್ರ ವಕ್ಕರಿಸಿ ಬಡವನಾಗುವ.. ಕಷ್ಟ ತಪ್ಪಿದ್ದೇ ಅಲ್ಲ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.