Importance of Tulsi Pooja : ಕಾರ್ತಿಕ ಮಾಸ ಎಂದರೆ ಪೂಜೆಯ ಮಾಸ. ಈ ಅವಧಿಯಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಇದಲ್ಲದೆ ಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಂಪತ್ತು ಪಡೆಯುತ್ತೀರಿ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಅರ್ಪಿಸಬೇಕು. ಮೇಲಾಗಿ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷವು ನೆಲೆಸುತ್ತದೆ ಎಂದು ನಂಬಲಾಗಿದೆ.    


ಇದನ್ನೂ ಓದಿಬೇಸಿಗೆಯ ವಿಶೇಷ ಹಣ್ಣು... ಬಾಯಲ್ಲಿ ನೀರೂರಿಸುವ ಈ ಹಣ್ಣಿನಿಂದಿದೆ ಹಲವು ಆರೋಗ್ಯ ಲಾಭಗಳು!


ಕಾರ್ತಿಕ ಮಾಸದಲ್ಲಿ ಪ್ರತಿದಿನ ಹಸಿ ಹಸುವಿನ ಹಾಲು ಮತ್ತು ಗಂಗಾಜಲವನ್ನು ತುಳಸಿ ಗಿಡಕ್ಕೆ  ನೈವೇದ್ಯ ಮಾಡುವುದರಿಂದ ಹಣದ ಕೊರತೆ ನೀಗುತ್ತದೆ. ಸಿರಿ ಸಂಪತ್ತು ಹೆಚ್ಚಾಗುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಮಹಾವಿಷ್ಣುವಿಗೆ ತುಳಸಿ ದಳ ಏರಿಸಿ ಪೂಜಿಸಬೇಕು. ಇದರಿಂದ ಬಡತನ ಬರುವುದಿಲ್ಲ. ಮನೆಯಲ್ಲಿ ಸುಖ ಸಂತೋಷ ಹೆಚ್ಚುವುದು. 


ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪೂಜೆಯೊಂದಿಗೆ ಪ್ರದಕ್ಷಿಣೆ ಕೂಡ ಹಾಕಲಾಗುತ್ತದೆ. ಪೂಜೆಯ ಜೊತೆಗೆ 7, 11, 21, 51 ಅಥವಾ 108 ಪ್ರದಕ್ಷಿಣೆಗಳನ್ನು ಮಾಡಿ. ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ:ಶನಿ ಸೂರ್ಯ ಸಂಯೋಗದಿಂದ ರೂಪುಗೊಂಡ ನವ ಪಂಚಮ ರಾಜಯೋಗ..ಈ 3 ರಾಶಿಯವರಿಗೆ ಇನ್ನೂ ಲಕ್ಷಾಧಿಪತಿಗಳಾಗುವ ಯೋಗ..!


ತುಳಸಿಯ ವಿವಾಹವೂ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಈ ದಿನ ತುಳಸಿ ಪೂಜೆಯ ಜೊತೆಗೆ.. ತುಳಸಿ ಮದುವೆ ಆಚರಣೆ ಮಾಡಬೇಕು. ತುಳಸಿ ಗಿಡಕ್ಕೆ ಕೆಂಪು ಚುನರಿಯನ್ನೂ ಅರ್ಪಿಸಿ ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. zee kannada news ಇದನ್ನು ಖಚಿತಪಡಿಸುವುದಿಲ್ಲ.)
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.