Tulsi Upay: ಹಿಂದೂ ಧರ್ಮದಲ್ಲಿ ದೇವರ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಯಾವ ಮನೆಯಲ್ಲಿ ತುಳಸಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ,  ತುಳಸಿ ಭಗವಾನ್ ವಿಷ್ಣುವಿಗೆ ಬಹಳ ಪ್ರಿಯ ಸಸ್ಯ. ಹಾಗಾಗಿ, ತುಳಸಿ ಗಿಡವನ್ನು ಪೂಜಿಸುವುದರಿಂದ ಶ್ರೀ ಹರಿಯು ಪ್ರಸನ್ನನಾಗುತ್ತಾನೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನಲಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ, ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಸುಖ-ಸಂತೋಷದ ಜೊತೆ  ಪ್ರಗತಿಯ ಹಾದಿಯೂ ತೆರೆಯಲಿದೆ ಎನ್ನಲಾಗುವುದು. 


COMMERCIAL BREAK
SCROLL TO CONTINUE READING

ಹೌದು, ಜ್ಯೋತಿಷ್ಯ ಶಾಸ್ತ್ರದಲ್ಲಿ ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಸರಿಯಾದ ರೀತಿಯಲ್ಲಿ ಈ ಪರಿಹಾರಗಳನ್ನು ಕೈಗೊಳ್ಳುವುದರಿಂದ ಶೀಘ್ರದಲ್ಲೇ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತದೆ. 


ಏಕಾದಶಿಯಲ್ಲಿ ತುಳಸಿಗೆ ಸಂಬಂಧಿಸಿದ ಪರಿಹಾರಗಳನ್ನು ಕೈಗೊಳ್ಳುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಅದರಲ್ಲೂ ದೇವಶಯನಿ ಏಕಾದಶಿಯ ದಿನದಂದು ತುಳಸಿಯ ಕೆಲವು ಪರಿಹಾರಗಳನ್ನು ಮಾಡುವುದು ತುಂಬಾ ಪ್ರಯೋಜನಕಾರಿ ಆಗಿದ್ದು, ಇದರಿಂದ ನಿಮ್ಮ ಅದೃಷ್ಟವೇ ಬದಲಾಗಬಹುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಹಾರಗಳಲ್ಲಿ ತುಳಸಿ ಬೇರಿನ ಪರಿಹಾರವೂ ಒಂದು. 


ಇದನ್ನೂ ಓದಿ- Nag Panchami 2023: ನಾಗಪಂಚಮಿಯ ದಿನಾಂಕ ಮತ್ತು ಪೂಜೆಯ ಮುಹೂರ್ತ ತಿಳಿಯಿರಿ


ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಹುದು ತುಳಸಿ ಬೇರು: 
*  ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಶಯನಿ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಪೂಜಿಸುವುದರ ಜೊತೆಗೆ ತುಳಸಿ ಗಿಡದ ಮುಂದೆ ತುಪ್ಪಡ ದೀಪವನ್ನು ಹಚ್ಚಬೇಕು. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿಗಳು ನಾಶವಾಗಿ, ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. 


* ದೇವಶಯನಿ ಏಕಾದಶಿಯ ಈ ದಿನ ತುಳಸಿ ಗಿಡಕ್ಕೆ 11 ಬಾರಿ ಪ್ರದಕ್ಷಿಣೆ ಹಾಕಿ, ಭಕ್ತಿಯಿಂದ ನಮಿಸುವುದರಿದ್ನ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ದೂರವಾಗಿ, ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಪ್ರಗತಿಯ ಹಾದಿಗಳು ತೆರೆಯುತ್ತವೆ ಎನ್ನಲಾಗುತ್ತದೆ. 


* ಧರ್ಮ ಗ್ರಂಥಗಳ ಪ್ರಕಾರ,  ದೇವಶಯನಿ ಏಕಾದಶಿ ದಿನದಂದು ಭಗವಾನ್ ವಿಷ್ಣುವಿನ ಭೋಗದಲ್ಲಿ ತುಳಸಿಯನ್ನು ಬಳಸುವುದನ್ನು ತುಂಬಾ ಶ್ರೇಷ್ಠ ಎಂದು ನಂಬಲಾಗಿದೆ. ಇದರಿಂದ ಭಗವಾನ್ ವಿಷ್ಣುವಿನ ನಂಬಿಕೆಗೆ ಪಾತ್ರರಾಗುವುದರ ಜೊತೆಗೆ ಭಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. 


ಇದನ್ನೂ ಓದಿ- Astro Tips: ದೀಪಗಳನ್ನು ಬೆಳಗಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!


* ದೇವಶಯನಿ ಏಕಾದಶಿಯ ದಿನ ತುಳಸಿ ಮಾತೆಯನ್ನು ಪೂಜಿಸುವಾಗ ತುಳಸಿ ಸಸ್ಯಕ್ಕೆ ಕೆಂಪು ಚುನ್ರಿಯನ್ನು ಅರ್ಪಿಸಿ, ಬಳಿಕ ತುಪ್ಪದ ದೀಪ ಬೆಳಗಬೇಕು. ಇದರಿಂದ ದಾಂಪತ್ಯದಲ್ಲಿ ಮೂಡಿರುವ ವಿರಸ ಕಳೆದು ಸಂತೋಷದ ಕ್ಷಣಗಳು ನಿಮ್ಮದಾಗುತ್ತವೆ ಎನ್ನಲಾಗುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.