Tulsi Puja 2023: ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ದಿನದಂದು ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಈ ಬಾರಿ ತುಳಸಿ ವಿವಾಹ ನವೆಂಬರ್ 24 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಕಾರ್ತಿಕ ಏಕಾದಶಿ ಉಪವಾಸವನ್ನು ಮಾಡಿದ ಮರುದಿನ ತುಳಸಿ ಮದುವೆ ಆಚರಿಸಲಾಗುತ್ತದೆ. ತುಳಸಿ ವಿವಾಹದ ದಿನದಂದು ತುಳಸಿ ಮತ್ತು ವಿಷ್ಣವಿನ ವಿವಾಹವನ್ನು ಮಾಡಲಾಗುತ್ತದೆ. ತುಳಸಿ ವಿವಾಹದ ಆಚರಣೆಯನ್ನು ಮಾಡುವ ವ್ಯಕ್ತಿಗೆ ಕನ್ಯಾದಾನ ಮಾಡಿದಷ್ಟು ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ತುಳಸಿ ವಿವಾಹದ ಶುಭ ಸಮಯ 


ತುಳಸಿ ವಿವಾಹದ ದಿನದಂದು ದ್ವಾದಶಿ ತಿಥಿಯು ನವೆಂಬರ್ 23 ರಂದು ರಾತ್ರಿ 9.01 ಕ್ಕೆ ಪ್ರಾರಂಭವಾಗಿ ನವೆಂಬರ್ 24 ರಂದು ಸಂಜೆ 7.06 ಕ್ಕೆ ಕೊನೆಗೊಳ್ಳುತ್ತದೆ. ತುಳಸಿ ವಿವಾಹ ನವೆಂಬರ್ 24 ರಂದು ಅಂದರೆ ಇಂದೇ ನಡೆಯಲಿದೆ.


ಇದನ್ನೂ ಓದಿ : ಈ 5 ರಾಶಿಗಳು ಸುಲಭವಾಗಿ ಪ್ರೀತಿಗೆ ಬೀಳುವರು.! 


ತುಳಸಿ ವಿವಾಹ ಶುಭ ಯೋಗ


ಇಂದು, ತುಳಸಿ ವಿವಾಹದ ಒಂದು ಮುಹೂರ್ತವು ಬೆಳಿಗ್ಗೆ 11:28 ರಿಂದ ಮಧ್ಯಾಹ್ನ 12:11 ರವರೆಗೆ ಮತ್ತು ಇನ್ನೊಂದು ಮುಹೂರ್ತವು ಮಧ್ಯಾಹ್ನ 1:37 ರಿಂದ 2:20 ರವರೆಗೆ ಇರುತ್ತದೆ. ಇದಲ್ಲದೇ ಇಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗದಲ್ಲಿ ತುಳಸಿ ವಿವಾಹವೂ ನಡೆಯುತ್ತದೆ. ಸರ್ವಾರ್ಥ ಸಿದ್ಧಿ ಯೋಗ - ಇಡೀ ದಿನ ಇರುತ್ತದೆ. ಅಮೃತ ಸಿದ್ಧಿ ಯೋಗ- ಇಂದು ಬೆಳಿಗ್ಗೆ 6.51 ರಿಂದ ಸಂಜೆ 4.01 ರವರೆಗೆ ಇರುತ್ತದೆ. 


ತುಳಸಿ ಪೂಜೆ ಮುಹೂರ್ತ


ನವೆಂಬರ್‌ 24 ರಂದು ಸಂಜೆ 5:25 ರಿಂದ 5:49 ರವರೆಗೆ ತುಳಸಿ ವಿವಾಹ ಮಾಡಬಹುದು. ಅದರ ನಂತರ ಸಂಜೆ 7:6 ರವರೆಗೆ ದ್ವಾದಶಿ ತಿಥಿ ಕೊನೆಗೊಳ್ಳಲಿದೆ.


ತುಳಸಿ ವಿವಾಹ ಪೂಜಾ ಸಾಮಗ್ರಿ 


- ತುಳಸಿ ಗಿಡ
- ಕೃಷ್ಣನ ವಿಗ್ರಹ / ಶಾಲಿಗ್ರಾಮ ಕಲ್ಲು 
- ಅರಿಶಿನ, ಕುಂಕುಮ, ಅಕ್ಷತೆ, ಮಣ್ಣಿನ ದೀಪ, ತುಪ್ಪ, ಹೂವುಗಳು
- ಪಂಚಾಮೃತ, ಕಬ್ಬು, ನೆಲ್ಲಿಕಾಯಿ, ಆಯಾ ಋತುಮಾನಕ್ಕೆ ದೊರೆಯುವ ಹಣ್ಣುಗಳು
- ತುಳಸಿ ಮದುವೆ ಕಥೆ ಪುಸ್ತಕ, ವಿಷ್ಣು ಸಹಸ್ರನಾಮ ಪುಸ್ತಕ


​ತುಳಸಿ ವಿವಾಹ 2023 ರ ಪೂಜೆ ವಿಧಾನ​


ತುಳಸಿ ವಿವಾಹದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿ ಕರ್ಮಗಳನ್ನು ಮುಗಿಸಿ. ಸಂಕಲ್ಪ ಮಾಡಿ. ಬಳಿಕ ವಿಷ್ಣುವನ್ನು ಆರಾಧಿಸಿ. ದೇವರ ಮುಂದೆ ದೀಪ ಹಚ್ಚಿ. ಹಣ್ಣುಗಳು, ಹೂವುಗಳು ಮತ್ತು ನೈವೇದ್ಯವನ್ನು ಅರ್ಪಿಸಿ. ಏಕಾದಶಿಯ ದಿನದಂದು ವಿಷ್ಣುವಿಗೆ ತುಳಸಿಯನ್ನು ಅರ್ಪಿಸುವುದು ಪವಿತ್ರ ಎಂದು ನಂಬಲಾಗಿದೆ.


ತುಳಸಿ ಪೂಜೆಯ ದಿನದಂದು ಸಂಜೆ ಪೂಜಾ ಸ್ಥಳದಲ್ಲಿ 5 ಕಬ್ಬಿನಿಂದ ಮಂಟಪವನ್ನು ಮಾಡಿ. ಇದರ ಕೆಳಗೆ ತುಳಸಿ ಗಿಡವನ್ನು ಇಡಿ (ತುಳಸಿ ಕಟ್ಟೆ ಇರುವವರು ಅಲ್ಲಿಯೇ ಈ ಮಂಟಪ ರಚಸಿ ಅಲಂಕರಿಸಬಹುದು). ಕೃಷ್ಣ/ಶಾಲಿಗ್ರಾಮ ವಿಗ್ರಹವನ್ನು ತುಳಸಿ ಗಿಡದ ಪಕ್ಕದಲ್ಲಿ ಇಡಿ. ಮುಂದೆ ರಂಗೋಲಿ ಹಾಕಿ, ದೀಪ ಹಚ್ಚಿ. ತುಳಸಿ ವಿವಾಹವನ್ನು ಸಾಮಾನ್ಯವಾಗಿ ಸಂಜೆಯ ಹೊತ್ತಲ್ಲಿ ಆಚರಿಸಲಾಗುತ್ತದೆ. ತುಳಸಿ ಮತ್ತು ಕೃಷ್ಣನನ್ನು ಆಹ್ವಾನಿಸಿ ನಂತರ, ಮಂತ್ರಗಳನ್ನು ಪಠಿಸಲಾಗುತ್ತದೆ. ಬಳಿಕ ತುಳಸಿಗೆ ಆರತಿ ಮಾಡಿ. ಪ್ರಸಾದವನ್ನು ಎಲ್ಲರಿಗೂ ನೀಡಿ. ತುಳಸಿ ಮದುವೆ ದಿನ ಸಾಮಾನ್ಯವಾಗಿ ಕರ್ನಾಟಕದಲ್ಲಿ ಮೊಸರವಲಕ್ಕಿ ಅಥವಾ ಬೆಲ್ಲ ಹಾಕಿಸ ಸಿಹಿ ಅವಲಕ್ಕಿಯನ್ನು ನೈವೇದ್ಯ ಮಾಡಲಾಗುತ್ತದೆ.


ಕಾರ್ತಿಕ ಮಾಸದ ದ್ವಾದಶಿ ತಿಥಿಯಂದು ಆಚರಿಸಲಾಗುವ ತುಳಸಿ ವಿವಾಹ ಹಬ್ಬವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ವಿಷ್ಣುಪ್ರಿಯಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.


ತುಳಸಿ ವಿವಾಹದ ಮಹತ್ವ


ತುಳಸಿ ವಿವಾಹವನ್ನು ಮಾಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಕೃಷ್ಣನ ವಿಗ್ರಹ ಅಥವಾ ವಿಷ್ಣುವಿನ ರೂಪವಾದ ಶಾಲಿಗ್ರಾಮದೊಂದಿಗೆ ತುಳಸಿಯನ್ನು ಮದುವೆ ಮಾಡುವ ವ್ಯಕ್ತಿ ಜೀವನದಲ್ಲಿ ಎಲ್ಲಾ ತೊಂದರೆಗಳಿಂದ ಮುಕ್ತನಾಗುತ್ತಾನೆ. ಶ್ರೀಹರಿಯ ವಿಶೇಷ ಅನುಗ್ರಹವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ತುಳಸಿ ವಿವಾಹದಿಂದ ಕನ್ಯಾದಾನದಷ್ಟು ಪುಣ್ಯ ಫಲಿಸುತ್ತದೆ ಎಂದು ಪರಿಗಣಿಸಲಾಗಿದೆ. ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ : ತುಳಸಿ ವಿವಾಹದ ದಿನ ಗಜಕೇಸರಿ ರಾಜಯೋಗ, ಶ್ರೀಹರಿಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.