ತುಳಸಿ ಹಬ್ಬದಂದು ಈ ಕೆಲಸ ಮಾಡಿದ್ರೆ ದಾರಿದ್ರ್ಯ ದೂರವಾಗಿ, ಸಂಪತ್ತು ವೃದ್ಧಿಯಾಗುತ್ತೆ!
Tulsi Vivah: ತುಳಸಿ ಹಬ್ಬದ ದಿನ ಮನೆಗೆ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
Tulsi Vivah 2024 Upay: ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನ ವಿಷ್ಣು ಪ್ರಿಯೆ ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ತುಳಸಿ ಹಬ್ಬದಂದು ತುಳಸಿ ಕಟ್ಟೆಯನ್ನು ಬಣ್ಣ ಹಚ್ಚಿ ಅಲಂಕರಿಸಿ ಶ್ರೀ ವಿಷ್ಣುವಿನ (ಬಾಲಕೃಷ್ಣನ ಮೂರ್ತಿ) ವಿವಾಹವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನೆಲ್ಲಿಕಾಯಿ, ಹುಣಸೆಕಾಯಿಯನ್ನು ತುಳಸಿಕತ್ತೆಯೊಂದಿಗೆ ಇಡುವ ಪ್ರತೀತಿಯೂ ಇದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಹಬ್ಬದಂದು ಭಗವಾನ್ ಶ್ರೀಮನ್ ನಾರಾಯಣನನ್ನು ನಿದ್ರಾವಸ್ಥೆಯಿಂದ ಜಾಗೃತಗೊಳ್ಳುತ್ತಾನೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ, ಸಂಜೆ ಪೂಜೆ ವೇಳೆ ತುಳಸಿ ಮಾತೆಗೆ ಸೋಗಲು ತುಂಬುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕ್ಕೆ ಕೊರತೆಯಾಗುವುದಿಲ್ಲ. ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಈ ವರ್ಷ ತುಳಸಿ ಮದುವೆ ಯಾವಾಗ? ಎಲ್ಲಾ ರೀತಿಯ ಸಂಕಷ್ಟದಿಂದ ಪಾರಾಗಲು ಮಾಡುವ ಪೂಜಾ ವಿಧಾನ ತಿಳಿಯಿರಿ..
ತುಳಸಿ ಹಬ್ಬದ ದಿನ ಈ ಮೂರು ವಸ್ತುಗಳನ್ನು ತಪ್ಪದೇ ತನ್ನಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿ ಹಬ್ಬದ ದಿನ ಕೆಂಪು ಒಣ ಮೆಣಸಿನಕಾಯಿ, ತಾಜಾ ಸೊಪ್ಪು ಮತ್ತು ಬೆಲ್ಲವನ್ನು ತಂದು ಲಕ್ಷ್ಮಿ ಸ್ವರೂಪಿಣಿಯಾದ ತುಳಸಿ ಮಾತೆ ಮುಂದಿಟ್ಟು ಪೂಜಿಸಿ, ಅದರಿಂದ ಭಕ್ಷ್ಯ ತಯಾರಿಸಿ ಸೇವಿಸಿದರೆ ಅಂತಹ ಮನೆಯಲ್ಲಿ ಲಕ್ಷ್ಮಿಯ ಆಶೀರ್ವಾದ ಸದಾ ಇರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ- ಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಈ ಒಂದು ಕೆಲಸ ಮಾಡಿ.. ಕಷ್ಟವೆಲ್ಲ ಪರಿಹಾರವಾಗಿ ಹೊಳೆಯುವುದು ಅದೃಷ್ಟ!
ತುಳಸಿಗೆ ಮಡಿಲಕ್ಕಿ ತುಂಬುವುದು:
ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಗಳಿಗೆ ಸೋಗಲು/ಮಡಿಲಕ್ಕಿ ತುಂಬುವ ವಾಡಿಕೆಯಿದೆ. ಇದರರ್ಥ ಹೆಣ್ಣು ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಸದಾ ಸಮೃದ್ಧಿಯನ್ನು ತರುವಂತಹವಳಾಗಲಿ ಎಂಬುದಾಗಿದೆ.
ತುಳಸಿ ವಿವಾಹದಂದು ಸಂಜೆ ತುಳಸಿ ಪೂಜೆ ಬಳಿಕ ಒಂದು ಕಾಲು ಸೇರು ಅಕ್ಕಿ, ಬೆಲ್ಲದಚ್ಚು, ಕೊಬ್ಬರಿ, ಅರಿಶಿನ ಕುಂಕುಮ, ಬಳೆ, ಹೂವು, ಎಲೆ-ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಬಳೆ ಬಂಗಾರ, ಅರಿಶಿನದ ಕೊಂಬು, ಯಥಾಶಕ್ತಿ ಕಾಣಿಕೆ ಇಟ್ಟು ತುಳಸಿ ಮಾತೆಯ ಹೆಸರು ಹೇಳಿ ಸೋಗಿಲು ತುಂಬಿ ಅರ್ಪಿಸಿ. ಮರುದಿನ ಇವನ್ನು ನಿಮ್ಮ ಮನೆಗೆ ಬಳಸಿಕೊಳ್ಳಿ. ಅಕ್ಕಿ, ಬೆಲ್ಲ, ಕಾಯಿ-ಕೊಬ್ಬರಿ ಹಾಕಿ ಸಿಹಿ ಪೊಂಗಲ್ ತಯಾರಿಸಿ ಮನೆಯವರೆಲ್ಲಾ ಸೇವಿಸಿದರೆ ನಿಮ್ಮ ಮೇಲೆ ಲಕ್ಷ್ಮಿ ಆಶೀರ್ವಾದ ಸದಾ ಇರಲಿದೆ ಎನ್ನಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.