Ugadi Horoscope 2024: ಯುಗಾದಿ ವರ್ಷ ಭವಿಷ್ಯ, ದ್ವಾದಶ ರಾಶಿಗಳ ಫಲಾಫಲ
Ugadi Horoscope 2024: ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬ, ಹಿಂದೂಗಳ ಹೊಸ ವರ್ಷ ಎಂದು ಆಚರಿಸಲಾಗುತ್ತದೆ. ದೃಕ್ಪಂಚಾಂಗ್ ಪ್ರಕಾರ, ಯುಗಾದಿಯನ್ನು ಇಂದು ಏಪ್ರಿಲ್ 9 ರಂದು ಆಚರಿಸಲಾಗುತ್ತದೆ. ಪ್ರತಿಪದ ತಿಥಿಯು ಏಪ್ರಿಲ್ 8, 2024 ರಂದು ರಾತ್ರಿ 11:50 ಕ್ಕೆ ಪ್ರಾರಂಭವಾಗಿದ್ದು ಏಪ್ರಿಲ್ 9, 2024 ರಂದು ರಾತ್ರಿ 8:30 ಕ್ಕೆ ಕೊನೆಗೊಳ್ಳುತ್ತದೆ.
Ugadi Horoscope 2024: ಯುಗಾದಿಯನ್ನು ಸಂವತ್ಸರ ಎಂದರೆ ಹೊಸ ಸಂವತ್ ಆರಂಭ ಎಂದು ಪರಿಗಣಿಸಲಾಗಿದೆ. ಯುಗಾದಿಯು ದಕ್ಷಿಣ ಭಾರತದ ಜನಪ್ರಿಯ ಹಬ್ಬವಾಗಿದೆ. ಇದು ಸಂಪತ್ತು, ಅಭಿವೃದ್ಧಿ, ಹೊಸ ಆರಂಭಗಳು ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರು ವರ್ಷದ ಮೊದಲ ದಿನವಾಗಿ ಯುಗಾದಿಯನ್ನು ಆಚರಿಸುತ್ತಾರೆ. ಈ ದಿನ ಪೂಜೆಯ ನಂತರ ಬೇವು-ಬೆಲ್ಲವನ್ನು ಸೇವಿಸುವುದು ಪ್ರತೀತಿ. ಇದರ ಅರ್ಥ ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುದಾಗಿದೆ. ಯುಗಾದಿ ಬಳಿಕ ಹೊಸ ಹಿಂದೂ ಪಂಚಾಂಗವನ್ನು ತೆರೆಯಲಾಗುತ್ತದೆ. ಈ ವರ್ಷ ಶೋಭಕೃತ್ ಸಂವತ್ಸರ ಹೇಗಿದೆ..? ಯುಗಾದಿ ಯಾವೆಲ್ಲಾ ರಾಶಿಯವರಿಗೆ ಸಿಹಿಯನ್ನು ತರಲಿದೆ ಯಾವ ರಾಶಿಯವರ ಜೀವನದಲ್ಲಿ ಕಹಿ ಇರಲಿದೆ ಎಂದು ತಿಳಿಯೋಣ...
ಮೇಷ ರಾಶಿಯವರ ಯುಗಾದಿ ವರ್ಷ ಭವಿಷ್ಯ (Aries Ugadi Yearly Horoscope):
ಮೇಷ ರಾಶಿಯವರಿಗೆ ಈ ವರ್ಷ ಎರಡು ಪ್ರಮುಖ ಗ್ರಹಗಳ ಬದಲಾವಣೆಯಿಂದ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಯುಗಾದಿ ಬಳಿಕ ಮೇಷ ರಾಶಿಯ ಜನರಿಗೆ ರಾಹು-ಕೇತು, ಗುರು ಮತ್ತು ಶನಿಯಿಂದಾಗಿ ಈ ವರ್ಷ ಪ್ರಾರಂಭದಲ್ಲಿ ಒಳ್ಳೆಯ ಲಾಭವನ್ನು ನಿರೀಕ್ಷಿಸಬಹುದು. ವಿಶೇಷವಾಗಿ ಸ್ವಂತ ಉದ್ಯೋಗ ಮಾಡುವವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಗುರು ಬಲದಿಂದಾಗಿ ಉದ್ಯೋಗ ರಂಗದಲ್ಲಿ ಕೀರ್ತಿ, ಮನ್ನಣೆ ದೊರೆಯಲಿದೆ. ಕೌಟುಂಬಿಕ ಜೀವನದಲ್ಲಿ ಸೌಖ್ಯ. ಸುಖ-ಸಂತೋಷದ ಜೀವನವನ್ನು ಈ ವರ್ಷ ನಿರೀಕ್ಷಿಸಬಹುದು.
ವೃಷಭ ರಾಶಿಯವರ ಯುಗಾದಿ ವರ್ಷ ಭವಿಷ್ಯ (Taurus Ugadi Yearly Horoscope):
ವೃಷಭ ರಾಶಿಯ ಜನರಿಗೆ ಮೇ ತಿಂಗಳಿನಿಂದ ಒಂದು ವರ್ಷಗಳ ಕಾಲ ಜನ್ಮ ನಕ್ಷತ್ರದಲ್ಲಿ ಗುರುವಿನ ಸಂಚಾರ ಆರಂಭವಾಗಲಿದೆ. ಈ ಸಮಯದಲ್ಲಿ ಗುರು ದುಃಖವನ್ನು ಉಂಟು ಮಾಡುತ್ತಾನೆ. ಇದಲ್ಲದೆ, ಶನಿಯ ಕಾಟದಿಂದಾಗಿ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ವಾಹನ ಸಂಚಾರದ ವೇಳೆ ಸಣ್ಣಪುಟ್ಟ ಆಕ್ಸಿಡೆಂಟ್ ಸಂಭವವಿರುವುದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲಸದ ವಿಚಾರದಲ್ಲಿ ಸ್ಥಾನಪಲ್ಲಟ ಉಂಟಾಗಬಹುದು. ಕೆಲಸದ ವಿಚಾರದಲ್ಲಿ ತಾಳ್ಮೆ, ಸಮಯ ಪ್ರಜ್ಞೆಯಿಂದ ಸಮಸ್ಯೆಗಳನ್ನು ಜಯಿಸಬಹುದು. ಇದಲ್ಲದೆ, ನೀವಾಡುವ ಮಾತೇ ನಿಮಗೆ ಮುಳುವಾಗುವ ಸಾಧ್ಯತೆ ಇರುವುದರಿಂದ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಿ.
ಮಿಥುನ ರಾಶಿಯವರ ಯುಗಾದಿ ವರ್ಷ ಭವಿಷ್ಯ (Gemini Ugadi Yearly Horoscope):
ಮಿಥುನ ರಾಶಿಯವರಿಗೆ ಒಂಬತ್ತನೇ ಮನೆಯಲ್ಲಿ ಶನಿ, ವ್ಯಯ ಸ್ಥಾನದಲ್ಲಿ ಗುರು, ಸುಖ ಸ್ಥಾನದಲ್ಲಿ ಕೇತು ಸಂಚರಿಸುತ್ತಿದ್ದಾರೆ. ಈ ಎಲ್ಲದರ ಫಲವಾಗಿ ಮಿಥುನ ರಾಶಿಯ ಜನರು ಈ ವರ್ಷ ಮಿಶ್ರ ಫಲಗಳನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ಬೇರೆಯವರನ್ನು ನಂಬಿ ಹಣ ಕಳೆದುಕೊಳ್ಳಬಹುದು. ವಾಹನ ಖರೀದಿ ವೇಳೆ ಸ್ವಲ್ಪ ಅಜಾಗರೂಕರಾಗಿದ್ದರೂ ಭಾರೀ ಧನನಷ್ಟವನ್ನು ಅನುಭವಿಸಬೇಕಾಗಬಹುದು. ಕುಟುಂಬದಲ್ಲಿ ವೈಮನಸ್ಯ ಕಾಣಿಸಿಕೊಳ್ಳಬಹುದು. ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದ್ದು ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಕೇತು ಕಾಟದಿಂದ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು. ಹಾಗಾಗಿ, ಎಚ್ಚರಿಕೆಯಿಂದ ಇರಿ.
ಕರ್ಕಾಟಕ ರಾಶಿಯವರ ಯುಗಾದಿ ವರ್ಷ ಭವಿಷ್ಯ (Cancer Ugadi Yearly Horoscope):
ಕರ್ಕಾಟಕ ರಾಶಿಯವರಿಗೆ ಈ ವರ್ಷ ಅಷ್ಟಮ ಶನಿಯಿಂದ ಕಷ್ಟ-ಕಾರ್ಪಣ್ಯಗಳಿಂದ ಸಮಸ್ಯೆ ತಪ್ಪಿದ್ದಲ್ಲ. ಅನಾರೋಗ್ಯ ಸಮಸ್ಯೆಗಳೊಂದಿಗೆ ಕೌಟುಂಬಿಕ ಕಲಹವು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಹಣಕಾಸಿನ ವಿಷಯದಲ್ಲಿ ಬೇರೆಯವರಿಂದ ಮೋಸ ಹೋಗುವ ಸಂಭವವಿದೆ. ಆದಾಗ್ಯೂ, ಕೆಲವರಿಗೆ ದಶಮುಕ್ತಿಯಿಂದ ಕೊಂಚ ನೆಮ್ಮದಿಯನ್ನು ಕಾಣಬಹುದು. ಮೇ ತಿಂಗಳ ಬಳಿಕ ಗುರುವಿನ ಶುಭ ಸ್ಥಾನದಿಂದಾಗಿ ಕೆಲಸದಲ್ಲಿ ನೆಮ್ಮದಿ, ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಶನಿ ಶಾಂತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಅಷ್ಟಮ ಶನಿ ದೋಷದಿಂದ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ- Weekly Horoscope: ಈ ವಾರ ಯುಗಾದಿ ಹಬ್ಬ ಯಾರ ಜೀವನದಲ್ಲಿ ತರಲಿದೆ ಸಿಹಿ? ಯಾರಿಗೆ ಕಹಿ?
ಸಿಂಹ ರಾಶಿಯವರ ಯುಗಾದಿ ವರ್ಷ ಭವಿಷ್ಯ (Leo Ugadi Yearly Horoscope):
ಸಿಂಹ ರಾಶಿಯವರಿಗೆ ಗುರು ಹತ್ತನೇ ಸ್ಥಾನಕ್ಕೆ ಸಂಚರಿಸಲಿದ್ದು ಇದನ್ನು ಕರ್ಮನಾಶ ಎನ್ನಲಾಗುತ್ತದೆ. ಕೆಲಸದಲ್ಲಿ ಸ್ಥಾನಪಲ್ಲಟ ಸಾಧ್ಯತೆ ಇದೆ. ಸಪ್ತಮದಲ್ಲಿ ಶನಿಯೋಗದಿಂದ ವಿವಾಹಕ್ಕೆ ತಡೆಯುಂಟಾಗುವ ಸಾಧ್ಯತೆ. ಪತಿ-ಪತ್ನಿ ನಡುವೆ ವೈಮನಸ್ಸು ಕಾಣಿಸಿಕೊಳ್ಳಬಹುದು. ಹೆಂಡತಿಯ ತವರು ಮನೆಯಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಬರಬಹುದು. ಹಾಗಾಗಿ, ಈ ವರ್ಷ ಸಿಂಹ ರಾಶಿಯವರು ಗುರು ಮತ್ತು ಶನಿಯ ಮಧ್ಯಮ ಫಲವನ್ನು ಅನುಭವಿಸಬಹುದು. ಎಂಟನೇ ಮನೆಯಲ್ಲಿ ಕೇತು ಇರುವುದರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಕುಟುಂಬದಲ್ಲಿ ನಿಮ್ಮ ಮಾತಿನಿಂದ ಹಲವು ರೀತಿಯ ಗೊಂದಲಗಳು ಉಂಟಾಗಬಹುದು.
ಕನ್ಯಾ ರಾಶಿಯವರ ಯುಗಾದಿ ವರ್ಷ ಭವಿಷ್ಯ (Virgo Ugadi Yearly Horoscope):
ಕನ್ಯಾ ರಾಶಿಯವರಿಗೆ ಶನಿ, ರಾಹು, ಕೇತು ಗ್ರಹಗಳ ಪ್ರಭಾವದಿಂದಾಗಿ ಈ ವರ್ಷ ಮಾನಸಿಕ ಒತ್ತಡ ಹೆಚ್ಚಾಗಬಹುದು. ಇದರೊಂದಿಗೆ ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗಬಹುದು. ಆರರಲ್ಲಿ ಶನಿ ಇರುವುದರಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಸಪ್ತಮದಲ್ಲಿ ರಾಹುವಿನಿಂದ ಸಪ್ತಮಾಧಿಪತಿ ಯೋಗ. ಜನ್ಮದಲ್ಲಿ ಕೇತು ಇದ್ದರೂ ಚಿಂತಿಸುವ ಅಗತ್ಯವಿಲ್ಲ. ಗುರು ಸಂಚಾರದಿಂದ ಕನ್ಯಾ ರಾಶಿಯವರಿಗೆ ಗುರು ಬಲ ಬರಲಿದೆ. ಇದರಿಂದಾಗಿ ನಿಮ್ಮ ಇಷ್ಟು ದಿನಗಳ ಕಷ್ಟಗಳು ನಿವಾರಣೆಯಾಗಲಿದೆ. ಸಮಸ್ಯೆಗಳಿಂದ ಹೊರಬಂದು ಸ್ವಲ್ಪ ಸಮಾಧಾನದಿಂದ ನಿಟ್ಟುಸಿರು ಬಿಡುವಂತಹ ಸಮಯ ಇದಾಗಿದೆ. ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಫಲ ಪ್ರಾಪ್ತಿಯಾಗಲಿದೆ.
ತುಲಾ ರಾಶಿಯವರ ಯುಗಾದಿ ವರ್ಷ ಭವಿಷ್ಯ (Libra Ugadi Yearly Horoscope):
ತುಲಾ ರಾಶಿಯವರಿಗೆ ಈ ವರ್ಷ ಪಂಚಮ ಶನಿ ಯೋಗವಿದೆ. ಈ ಸಮಯದಲ್ಲಿ ಹಲವು ಏಳು-ಬೀಳುಗಳನ್ನು ಎದುರಿಸಬೇಕಾಗಬಹುದು. ನೀವು ಜೀವನದಲ್ಲಿ ನಾನಾ ಬಗೆಯ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗಬಹುದು. ಇಷ್ಟು ದಿನವಿದ್ದ ಗುರುಬಲ ಕಡಿಮೆ ಆಗುವುದರಿಂದ ಅನಾರೋಗ್ಯ, ಅಪಘಾತ, ಧನನಷ್ಟ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆ ಅಗತ್ಯವಿರುತ್ತದೆ. ನೀವು ಉನ್ನತ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ವ್ಯಾಸಂಗದಲ್ಲಿ ತೊಡಕುಂಟಾಗಬಹುದು. ವಿದ್ಯಾರ್ಥಿಗಳು ನಿಮ್ಮ ಗುರಿಯತ್ತ ಗಮನ ಕೇಂದ್ರೀಕರಿಸುವುದು ಒಳ್ಳೆಯದು. ಕಷ್ಟಪಟ್ಟು ಓದಿದರೆ ಮಾತ್ರವೇ ಉತ್ತಮ ಫಲಿತಾಂಶ ಲಭ್ಯವಾಗುವುದು.
ವೃಶ್ಚಿಕ ರಾಶಿಯವರ ಯುಗಾದಿ ವರ್ಷ ಭವಿಷ್ಯ (Scorpio Ugadi Yearly Horoscope):
ವೃಶ್ಚಿಕ ರಾಶಿಯವರಿಗೆ ಐದರಲ್ಲಿ ರಾಹುವಿನ ಯೋಗವಿದೆ. ನಾಲ್ಕರಲ್ಲಿ ಶನಿ ಯೋಗ, ಏಳನೇ ಸ್ಥಾನಕ್ಕೆ ಗುರುವಿನ ಯೋಗವಿದೆ. ವೃಶ್ಚಿಕ ರಾಶಿಯವರಿಗೆ ಇಷ್ಟು ದಿನಗಳು ಇದ್ದ ಸಮಸ್ಯೆಗಳು ದೂರವಾಗಿ ಜೀವನದಲ್ಲಿ ಶುಭ ಫಲಗಳನ್ನು ಅನುಭವಿಸಬಹುದು. ವೈವಾಹಿಕ ಜೀವನ ಅತ್ಯುತ್ತಮವಾಗಿದೆ. ಸುಖ-ಸಂಸಾರವನ್ನು ಅನುಭವಿಸುವಿರಿ. ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಬಹುದು. ಆದಾಗ್ಯೂ, ಎಲ್ಲಾ ಇದ್ದರೂ ಸಹ ನೆಮ್ಮದಿಯ ಕೊರತೆ ನಿಮ್ಮನ್ನು ಬಾಧಿಸಬಹುದು. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಶನಿ ಶಾಂತಿಯಿಂದ ನೀವು ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದು.
ಇದನ್ನೂ ಓದಿ- Shukra Gochar 2024: ಮುಂದಿನ ಎರಡು ವಾರ ಈ ರಾಶಿಯವರ ಜೀವನದಲ್ಲಿ ಹರಿಯಲಿದೆ ಪ್ರೀತಿಯ ಹೊಳೆ, ವೃದ್ಧಿಯಾಗಲಿದೆ ಸಂಪತ್ತು
ಧನು ರಾಶಿಯವರ ಯುಗಾದಿ ವರ್ಷ ಭವಿಷ್ಯ (Sagittarius Ugadi Yearly Horoscope):
ಧನು ರಾಶಿಯವರಿಗೆ ಆರನೇ ಮನೆಯಲ್ಲಿ ಗುರು ಸಂಚಾರದಿಂದ ಶತ್ರುತ್ವ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮೊಂದಿಗಿರುವವರೇ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆ ಇದೆ. ಮೂರರಲ್ಲಿ ಶನಿ ಯೋಗ, ಕೆಲಸದಲ್ಲಿ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಸ್ಥಾನಪಲ್ಲಟ ಸಂಭವವಿದೆ. ನೀವು ಮಾಡುವ ಕೆಲಸದಿಂದ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ. ಕೆಲಸದ ವಿಚಾರದಲ್ಲಿ ಮೈಯೆಲ್ಲಾ ಕಣ್ಣಾಗಿರುವುದು ಅವಶ್ಯಕ. ನಾಲ್ಕರಲ್ಲಿ ರಾಹು ಇರುವುದರಿಂದ ತಾಯಿ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು.
ಮಕರ ರಾಶಿಯವರ ಯುಗಾದಿ ವರ್ಷ ಭವಿಷ್ಯ (Capricorn Ugadi Yearly Horoscope):
ಮಕರ ರಾಶಿಯವರಿಗೆ ಎರಡನೇ ಸ್ಥಾನದಲ್ಲಿ ಕಡೆ ಹಂತದಲ್ಲಿ ಸಾಡೇ ಸಾತಿ ಶನಿ ಪ್ರಭಾವವಿದೆ. ಪಂಚಮದಲ್ಲಿ ಗುರುವಿನ ಯೋಗ ಇರಲಿದೆ. ಇದರ ಫಲವಾಗಿ ವಾಹನ ಖರೀದಿ ಯೋಗವಿದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಮನೆ ಬದಲಾವಣೆ ಯೋಗವಿದೆ. ಗುರು ಅನುಗ್ರಹದಿಂದ ಕುಟುಂಬದಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು.
ಕುಂಭ ರಾಶಿಯವರ ಯುಗಾದಿ ವರ್ಷ ಭವಿಷ್ಯ (Aquarius Ugadi Yearly Horoscope):
ಕುಂಭ ರಾಶಿಯವರಿಗೆ ಜನ್ಮದಲ್ಲೇ ಶನಿ ಸಂಚಾರವಿದೆ. ಈ ಸಮಯದಲ್ಲಿ ಜೀವನದ ಬೇರೆ ಬೇರೆ ಆಯಾಮಗಳಿಂದ ಉಂಟಾಗುವ ಸಮಸ್ಯೆಗಳಿಂದ ತಲೆನೋವು ಹೆಚ್ಚಾಗಬಹುದು. ಎರಡನೇ ಮನೆಯಲ್ಲಿ ರಾಹು ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ನೀವು ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಪತ್ನಿ ಜೊತೆಗೆ ಸಣ್ಣ-ಪುಟ್ಟ ಸಮಸ್ಯೆಗಳು ಉಂಟಾಗಬಹುದು. ಆದಾಗ್ಯೂ, ನಾಲ್ಕನೇ ಮನೆಗೆ ಗುರು ಸಂಚಾರದಿಂದ ಸ್ವಲ್ಪ ಮಟ್ಟಿಗೆ ಕೌಟುಂಬಿಕ ಸೌಖ್ಯ. ವಾಹನ ಖರೀದಿ ಯೋಗವೂ ಇದೆ.
ಮೀನ ರಾಶಿಯವರ ಯುಗಾದಿ ವರ್ಷ ಭವಿಷ್ಯ (Pisces Ugadi Yearly Horoscope):
ಮೀನ ರಾಶಿಯವರಿಗೆ ಮೂರನೇ ಸ್ಥಾನಕ್ಕೆ ಗುರು ಸಂಚಾರವಾಗುವುದರಿಂದ ದುರ್ಬುದ್ಧಿಯಿಂದ ಸ್ವತಃ ಸಮಸ್ಯೆ ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಹನ್ನೆರಡನೆ ಮನೆಯಲ್ಲಿ ಶನಿ ಇರುವುದರಿಂದ ಖರ್ಚುಗಳು ಹೆಚ್ಚಾಗಲಿದೆ. ಕುಟುಂಬದಲ್ಲಿ ಸಾಮರಸ್ಯ ಕಡಿಮೆಯಾಗಲಿದೆ. ರಾಹು-ಕೇತುಗಳು ಜನ್ಮ ಸಪ್ತಮದಲ್ಲಿ ಇರುವುದರಿಂದ ಪತಿ-ಪತ್ನಿ ನಡುವೆ ಸಮಸ್ಯೆಗಳು ಉಲ್ಬಣಿಸಬಹುದು. ಕಾಳಹಸ್ತಿ ದರ್ಶನ, ಶನಿ ಶಾಂತಿಯಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.