Tirumala Tirupati Balaji Temple : ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎಂದೂ ಕರೆಯಲ್ಪಡುವ ತಿರುಪತಿ ಬಾಲಾಜಿ ದೇವಸ್ಥಾನವು ಆಂಧ್ರಪ್ರದೇಶದಲ್ಲಿದೆ. ಇದು ವಿಷ್ಣುವಿನ ಸ್ವರೂಪವಾದ  ವೆಂಕಟೇಶ್ವರನನ್ನು ಆರಾಧಿಸಲಾಗುತ್ತದೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇಶದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ತಿರುಮಲ ತಿರುಪತಿ ದೇವಸ್ಥಾನವು 2.5 ಲಕ್ಷ ಕೋಟಿ ಮೌಲ್ಯದ ನಿವ್ವಳ ಆಸ್ತಿಯನ್ನು  ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವೂ ಹೌದು. 


COMMERCIAL BREAK
SCROLL TO CONTINUE READING

ಶ್ರೀ ವೆಂಕಟೇಶ್ವರ ಸ್ವಾಮಿಯ ಈ ದೇವಾಲಯ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ವಿಶೇಷವಾಗಿದೆ. ಹಲವಾರು ರಹಸ್ಯಗಳನ್ನು ಈ ದೇವಾಲಯ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. 


ಇದನ್ನೂ ಓದಿ : ಗಣಪತಿಗೆ ಈ ರಾಶಿಯವರೆಂದರೆ ಮೂಷಿಕನಷ್ಟೇ ಪ್ರೀತಿ: ಯಾರೇ ಕೇಡು ಬಯಸಿದರೂ ಕಿಂಚಿತ್ತೂ ಸೋಕದಂತೆ ಜನ್ಮಜನ್ಮಕ್ಕೂಕಾಯುವನು ವಿಘ್ನ ವಿನಾಶಕ!


ಇಲ್ಲಿನ ವಿಗ್ರಹ : 
ವೆಂಕಟೇಶ್ವರನ ಮುಖ್ಯ ವಿಗ್ರಹವು ಸ್ವಯಂ ಪ್ರಕಟವಾದದ್ದು ಎಂದು ಹೇಳಲಾಗುತ್ತದೆ. ಅಂದರೆ ಈ ವಿಗ್ರಹ ಮಾನವ ಕೈಗಳಿಂದ ನಿರ್ಮಿತವಾಗಿಲ್ಲ. 


ವಿಶ್ವದ ಶ್ರೀಮಂತ ದೇವಾಲಯ : 
 ಹರಿದು ಬರುವ ದೇಣಿಗೆ ಮತ್ತು ಆಸ್ತಿಯ ದೃಷ್ಟಿಯಿಂದ ಅತ್ಯಂತ ಶ್ರೀಮಂತವಾಗಿದೆ ಈ ದೇವಾಲಯ. ಭಕ್ತರು ಹಣ, ಚಿನ್ನ ಮತ್ತು ಆಭರಣಗಳನ್ನು ಇಲ್ಲಿಗೆ ಅರ್ಪಿಸುತ್ತಾರೆ. ಆ ಮೂಲಕ ದೇವಾಲಯದ ಅಪಾರ ಸಂಪತ್ತನ್ನು ದಾನ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಬಳಸುತ್ತಾರೆ.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ 10.3 ಟನ್ ಚಿನ್ನ ಮತ್ತು  15,938 ಕೋಟಿ ನಗದು ಇದೆ.


ನಿಜವಾದ ಕೂದಲು : 
ದೇವಾಲಯದಲ್ಲಿರುವ ವೆಂಕಟೇಶ್ವರನ ವಿಗ್ರಹವು ನಯವಾದ ಮತ್ತು ಸಿಕ್ಕು ಮುಕ್ತವಾದ ನಿಜವಾದ ಕೂದಲನ್ನು ಹೊಂದಿದೆಯಂತೆ. ದಂತಕಥೆಯ ಪ್ರಕಾರ, ಆಕಾಶ ಜೀವಿಯು ಪ್ರತಿದಿನ ಭಗವಂತನಿಗೆ ಕೂದಲನ್ನು ದಾನ ಮಾಡುವುದರ ಮೂಲಕ ದೇವರ ಶಾಶ್ವತ ಯೌವನ ಮತ್ತು ಸೌಂದರ್ಯವನ್ನು ಕಾಪಾಡುತ್ತಿದೆಯಂತೆ.  


ಇದನ್ನೂ ಓದಿ : 19 ವರ್ಷಗಳ ನಂತರ ಸಂಕ್ರಾಂತಿ ದಿನವೇ ರಾಜಯೋಗ !ಮೂರು ರಾಶಿಯವರ ಬದುಕಾಗುವುದು ಬಂಗಾರ!ಇನ್ನು ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವುದು


ಮಹಾ ಭಕ್ತ ಸಾಗರ : 
 ಅತಿ ಹೆಚ್ಚು ಭಕ್ತ ಸಾಗರ ಈ ದೇವಾಲಯಕ್ಕೆ ಹರಿದು ಬರುತ್ತದೆ. ಇಲ್ಲಿಗೆ ಪ್ರತಿದಿನ ಅಂದಾಜು 50,000 ರಿಂದ 100,000 ಜನರು ಭೇಟಿ ನೀಡುತ್ತಾರೆ.ವಿಶೇಷ ಹಬ್ಬಗಳ ಸಮಯದಲ್ಲಿ, ಈ ಸಂಖ್ಯೆಗಳು ಅರ್ಧ ಮಿಲಿಯನ್‌ಗಿಂತಲೂ ಅಧಿಕವಾಗುತ್ತದೆ. 


'ಓಂ ನಮೋ ವೆಂಕಟೇಶಾಯ' ಪಠಣ :
ಗರ್ಭಗುಡಿಯಲ್ಲಿ, "ಓಂ ನಮೋ ವೆಂಕಟೇಶಾಯ" ಎಂಬ ಪಠಣವನ್ನು ನಿರಂತರವಾಗಿ ಪಠಿಸಲಾಗುತ್ತದೆ. ಶತಮಾನಗಳಿಂದ ಇಲ್ಲಿ ಈ ಜಪ ನಡೆದುಕೊಂಡು ಬಂದಿದೆ.


ವಿಗ್ರಹದ ರಹಸ್ಯ : 
ಭಗವಾನ್ ವೆಂಕಟೇಶ್ವರನ ವಿಗ್ರಹ ಸದಾ ಬೆಚ್ಚಗಿರುತ್ತದೆಯಂತೆ. ಜೀವಂತ ಜೀವಿಯಮೈ ಯಾವ ರೀತಿ ಬಿಸಿ ಇರುತ್ತದೆಯೋ ಅದೇ ರೀತಿ ಈ ವಿಗ್ರಹ ಕೂಡಾ ಸದಾ ಬೆಚ್ಚಗಿರುತ್ತದೆಯಂತೆ. ವಿಗ್ರಹದ ಹತ್ತಿರ ಕಿವಿ ಇರಿಸಿದಾಗ ಸಮುದ್ರದ ಅಲೆಗಳ ಸದ್ದು  ಕೇಳುತ್ತವೆ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ದೇವಾಲಯವು ಸಮುದ್ರದಿಂದ ಅತ್ಯಂತ ದೂರದಲ್ಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.