ದಿನಭವಿಷ್ಯ 09-09-2024: ಸೋಮವಾರದಂದು ವೈಧೃತಿ ಯೋಗ, ನಾಲ್ಕು ರಾಶಿಯವರಿಗೆ ವಿಶೇಷ ಪ್ರಯೋಜನ
Today Horoscope 09th September 2024: ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿಯ ಈ ದಿನ ಸೋಮವಾರ, ವಿಶಾಖಾ ನಕ್ಷತ್ರ ವೈಧೃತಿ ಯೋಗ ಇರಲಿದ್ದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರು ಇಂದು ಹಣಕಾಸಿನ ನಷ್ಟವನ್ನು ಎದುರಿಸಬೇಕಾಗಬಹುದು. ವ್ಯಾಪಾರ ಸಂಪರ್ಕಗಳೊಂದಿಗೆ ನೀವು ಸಹಕಾರದ ಮನೋಭಾವವನ್ನು ಉತ್ತೇಜಿಸುವಿರಿ. ವೃತ್ತಿ ಬದುಕಿನಲ್ಲಿ ಕೆಲಸಗಳು ಕೈಗೂಡಿ ಸಂತಸದಿಂದ ಕೂಡಿದ ದಿನ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಈ ರಾಶಿಯ ಜನರು ಇಂದು ಆರ್ಥಿಕ ವಿಚಾರಗಳಲ್ಲಿ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು. ವ್ಯವಹಾರದಲ್ಲಿ ತಾಳ್ಮೆಯಿಂದಿದ್ದರೆ ಒಳಿತು. ಕುಟುಂಬದಲ್ಲಿ ಬೇರೆಯವರ ಮಾತಿಗೆ ಬೆಲೆ ಕೊಡುವುದನ್ನು ಕಲಿಯಿರಿ, ಇಲ್ಲವೇ ಮನಸ್ಥಾಪ ಮೂಡಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಈ ರಾಶಿಯವರಿಗೆ ಇಂದು ವೈಧೃತಿ ಯೋಗವು ವಿಶೇಷ ಪ್ರಯೋಜನವನ್ನು ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಲು ಹಲವು ದಾರಿಗಳು ಗೋಚರಿಸುವುವು. ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ದೊಡ್ಡ ದೊಡ್ಡ ಪ್ರಯತ್ನಗಳು ಕೈಗೂಡಲಿವೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ರಾಶಿಯವರಿಗೆ ಇಂದು ಅತ್ಯಂತ ಮಂಗಳಕರ ದಿನ. ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸಿನ ಜೊತೆಗೆ ಆರ್ಥಿಕ ಪ್ರಗತಿಯತ್ತ ಮುನ್ನಡೆಯುವ ಅವಕಾಶವನ್ನು ಕಾಣುವಿರಿ. ಅಗತ್ಯ ಕಾರ್ಯಗಳಲ್ಲಿ ಸರಾಗತೆಯನ್ನು ಕಾಪಾಡಿಕೊಳ್ಳಿ. ಸಹಕಾರದ ಮನೋಭಾವಕ್ಕೆ ಒತ್ತು ನೀಡುವುದರಿಂದ ಹೆಚ್ಚಿನ ಲಾಭ.
ಇದನ್ನೂ ಓದಿ- ಶನಿ ರಾಶಿಚಕ್ರ ಚಿಹ್ನೆಯಲ್ಲಿ ಸೂರ್ಯನಿಂದ ರಾಜಯೋಗ, 3 ರಾಶಿಯವರಿಗೆ ಲಕ್ಷಾಧಿಪತಿಯಾಗುವ ಯೋಗ, ವಾಹನ ಮನೆ ಖರೀದಿ ಸಾಧ್ಯತೆ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯ ಜನರು ಇಂದು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದನ್ನು ತಪ್ಪಿಸಲು ಖರ್ಚುಗಳಿಗೆ ಕಡಿವಾಣ ಹಾಕಿ. ಕೆಲಸದಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದರಿಂದ ಯಶಸ್ಸು ನಿಮ್ಮದಾಗಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಅತ್ಯಂತ ಮಂಗಳಕರ ದಿನ. ವೃತ್ತಿ ಮತ್ತು ವ್ಯವಹಾರದಲ್ಲಿ ಗಂಭೀರತೆಯನ್ನು ಕಾಪಾಡಿಕೊಳ್ಳುವುದರಿಂದ ಶುಭ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವವನ್ನು ಬಿಟ್ಟು ಮುಂದುವರೆಯಿರಿ.
ವೈಯಕ್ತಿಕ ವಿಷಯಗಳಲ್ಲಿ ಆಸಕ್ತಿಯನ್ನು ಕಾಪಾಡಿಕೊಳ್ಳಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ನಿರ್ಣಾಯಕ ದಿನ. ಚಿಂತನಶೀಲವಾಗಿ ನಿರ್ಧಾರ ಕೈಗೊಳ್ಳುವುದರಿಂದ ಸಮಸ್ಯೆಗಳನ್ನು ಬಗೆಹರಿಸಬಹುದು. ಸಹಕಾರದ ಮನೋಭಾವದಿಂದ ಸಹೋದ್ಯೋಗಿಗಳೊಂದಿಗೆ ಸಂಬಂಧಗಳು ಸುಧಾರಿಸಲಿವೆ. ಪ್ರಯಾಣವು ಲಾಭದಾಯಕವಾಗಿರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಈ ರಾಶಿಯವರಿಗೆ ಇಂದು ಅತ್ಯಂತ ಮಂಗಳಕರ ದಿನ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ವೃತ್ತಿಯಲ್ಲಿ ಯಶಸ್ಸು, ಕೀರ್ತಿ ಗಳಿಸುವಿರಿ. ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ವೇಗಗೊಳಿಸುವುದರಿದ್ನ ಶುಭ ಫಲಿತಾಂಶಗಳನ್ನು ಸ್ವೀಕರಿಸುವಿರಿ.
ಇದನ್ನೂ ಓದಿ- Saturn Transit 2024: ಮೀನರಾಶಿಗೆ ಶನಿಯ ಸಂಚಾರದಿಂದ ಈ 3 ರಾಶಿಯವರಿಗೆ ಭರ್ಜರಿ ಲಾಭ!
ಧನು ರಾಶಿಯವರ ಭವಿಷ್ಯ (Sagittarius Horoscope):
ಈ ರಾಶಿಯವರು ಇಂದು ಹಣಕಾಸಿನ ನಷ್ಟ ಅನುಭವಿಸಬೇಕಾಗಬಹುದು. ಕಠಿಣ ಪರಿಶ್ರಮದ ಹೊರತಾಗಿಯೂ ಬಹುಶಃ ನೀವು ಬಯಸಿದ ಯಶಸ್ಸನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ, ಧೈರ್ಯಕೆಡಬೇಡಿ ಮುಂದಿನ ದಿನಗಳಲ್ಲಿ ಶುಭ ಫಲಗಳು ನಿಮ್ಮ ಪಾಲಿಗಿವೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಇಡೀ ದಿನ ಹಣಕಾಸಿನ ವಿಷಯದಲ್ಲಿ ಕಾರ್ಯನಿರತತೆ ಇರಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಕೆಲಸ ಮತ್ತು ವ್ಯವಹಾರದಲ್ಲಿ ಜಾಗರೂಕತೆಯನ್ನು ಕಾಪಾಡಿಕೊಳ್ಳುವುದರಿಂದ ಸಂಜೆ ವೇಳೆಗೆ ಉತ್ತಮ ಫಲಗಳನ್ನು ಕಾಣಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ದಿನವು ನಿಮಗೆ ಕಾರ್ಯನಿರತವಾಗಿರುತ್ತದೆ ಮತ್ತು ನೀವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆದರೆ, ನಿಮ್ಮ ನಿರೀಕ್ಷಿತ ಫಲಿತಾಂಶ ಪಡೆಯಲು ಅಡೆತಡೆಗಳು ಉಂಟಾಗಬಹುದು. ಆದಾಗ್ಯೂ, ನಿರಾಶೆಗೊಳ್ಳದೆ ಪ್ರಯತ್ನ ಮುಂದುವರೆಸುವುದರಿಂದ ಮುಸ್ಸಂಜೆ ವೇಳೆಗೆ ಶುಭ ಫಲ ಅನುಭವಿಸುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ರಾಶಿಯ ಜನರಿಗೆ ಇಂದು ಆರ್ಥಿಕ ಯಶಸ್ಸು ಮತ್ತು ಸಮೃದ್ಧಿಯಿಂದ ತುಂಬಿದ ದಿನ. ನಿಮ್ಮ ಪ್ರಯತ್ನಗಳಿಗೆ ನೀವು ಮನ್ನಣೆ ಮತ್ತು ಪ್ರತಿಫಲವನ್ನು ಪಡೆಯುತ್ತೀರಿ. ಸಾಮರಸ್ಯದಿಂದ ಕೆಲಸ ಮಾಡುವುದರಿಂದ ವೃತ್ತಿ-ವ್ಯವಹಾರದಲ್ಲಿ ವಿಶೇಷ ಪ್ರಯೋಜನವನ್ನು ಪಡೆಯುವಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.