ಮುಂದಿನ 119 ದಿನಗಳವರೆಗೆ ಈ ಎರಡು ರಾಶಿಯವರ ಸಂಕಷ್ಟ ಹೆಚ್ಚಿಸಲಿದ್ದಾನೆ ವಕ್ರೀ ಗುರು
Jupiter Retrogade 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳಕರ ಗ್ರಹದ ಸ್ಥಾನಮಾನ ಹೊಂದಿರುವ ಗುರು ಗ್ರಹವು ಇದೇ 29ರಂದು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದೆ. ಗುರು ಗ್ರಹದ ಹಿಮ್ಮುಖ ಚಲನೆಯು ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೊತ್ತು ತರಲಿದೆ. ಆ ರಾಶಿಗಳು ಯಾವುವು ತಿಳಿಯೋಣ...
ಗುರು ಗ್ರಹದ ಹಿಮ್ಮುಖ ಚಲನೆ ಪರಿಣಾಮ: ಜ್ಯೋತಿಷ್ಯದಲ್ಲಿ ಶುಭ ಗ್ರಹದ ಸ್ಥಾನಮಾನ ಹೊಂದಿರುವ ದೇವಗುರು ಬೃಹಸ್ಪತಿಯನ್ನು ಜ್ಞಾನ, ವಿದ್ಯೆ ಮತ್ತು ಅದೃಷ್ಟವನ್ನು ಹೆಚ್ಚಿಸುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, 2022ರ ಜುಲೈ 29 ರಂದು, ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದೆ. 24 ನವೆಂಬರ್ 2022 ರವರೆಗೆ ಗುರು ಇದೇ ಸ್ಥಾನದಲ್ಲಿ ಇರಲಿದ್ದಾರೆ. 119 ದಿನಗಳವರೆಗೆ ಗುರುವಿನ ಈ ಸಂಚಾರವು ಎಲ್ಲಾ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಎರಡು ರಾಶಿಯವರಿಗೆ ಈ ಸಮಯವನ್ನು ಅಷ್ಟು ಚೆನ್ನಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ಆ ಎರಡು ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆ ರಾಶಿಚಕ್ರಗಳ ಬಗ್ಗೆ ತಿಳಿಯೋಣ...
ವಾಸ್ತವವಾಗಿ, ಮೀನ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆಯು ಕನ್ಯಾ ರಾಶಿ ಮತ್ತು ಮೀನ ರಾಶಿ ಎರಡೂ ರಾಶಿಯವರಿಗೆ ಅಶುಭ ಪರಿಣಾಮಗಳನ್ನು ಬೀರಲಿದೆ. ಈ ರಾಶಿಯವರು ಮುಂದಿನ 119 ದಿನಗಳವರೆಗೆ ಅಂದರೆ ಸುಮಾರು ಮೂರ್ನಾಲ್ಕು ತಿಂಗಳವರೆಗೆ ತಮ್ಮ ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ ಎನ್ನಲಾಗುತ್ತದೆ.
ಇದನ್ನೂ ಓದಿ- Horoscope August 2022 : ಆಗಸ್ಟ್ ತಿಂಗಳು 5 ರಾಶಿಯವರಿಗೆ ಅದೃಷ್ಟ : ಇವರಿಗೆ ಹೆಚ್ಚಾಗಲಿದೆ ಹಣದ ಹೊಳಹರಿವು!
ಈ ಸಮಯದಲ್ಲಿ ಕನ್ಯಾ ರಾಶಿಯವರು ಇಂತಹ ಆಹಾರಗಳಿಂದ ದೂರವಿರಿ:
ಗುರುವಿನ ಹಿಮ್ಮುಖ ಚಲನೆಯು ಕನ್ಯಾ ರಾಶಿಯವರಿಗೆ ಉದರ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ, ಈ ರಾಶಿ ಚಕ್ರದ ಜನರು ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. 119 ದಿನಗಳವರೆಗೆ ಕರಿದ ಆಹಾರಗಳಿಂದ ದೂರವಿರಿ. ಒಂದೊಮ್ಮೆ ನಿಮಗೆ ಆಲ್ಕೋಹಾಲ್ ಅಭ್ಯಾಸವಿದ್ದರೆ ಅದನ್ನೂ ಸಹ ತ್ಯಜಿಸುವುದು ಒಳ್ಳೆಯದು. ಗುರುವು ಯಕೃತ್ತನ್ನು ಪ್ರತಿನಿಧಿಸುತ್ತದೆ, ಹಾಗಾಗಿ ಫ್ಯಾಟಿ ಲಿವರ್ ಸಮಸ್ಯೆ ಇರುವವರು ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ನಿರ್ಲಕ್ಷ್ಯವನ್ನು ಮಾಡಬೇಡಿ.
ಇದನ್ನೂ ಓದಿ- ಈ ದಿನದಂದು ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ! ಇದಕ್ಕಿದೆ ಪ್ರಮುಖ ಕಾರಣ
ಮೀನ ರಾಶಿಯ ಮೇಲೆ ಹಿಮ್ಮುಖ ಗುರು ಅಧಿಕ ಪರಿಣಾಮ:
ಹಿಮ್ಮುಖ ಗುರುವು ಮೀನ ರಾಶಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮೀನ ಲಗ್ನ ಅಥವಾ ರಾಶಿ ಇರುವವರು ಮತ್ತು ಥೈರಾಯ್ಡ್, ಸಂಧಿವಾತ, ಕೊಲೆಸ್ಟ್ರಾಲ್ ಸಮಸ್ಯೆಗಳಿರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಔಷಧದ ಜೊತೆಗೆ ವ್ಯಾಯಾಮವೂ ಬಹಳ ಮುಖ್ಯ. 119 ದಿನಗಳವರೆಗೆ, ಮೀನ ಅಥವಾ ಲಗ್ನದ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.