Vastu For Calendar: ಜೀವನದಲ್ಲಿ ಏಳ್ಗೆಗಾಗಿ ಮನೆಯ ಈ ದಿಕ್ಕಿನಲ್ಲಿರಲಿ ಕ್ಯಾಲೆಂಡರ್
Vastu For Calendar: ವಾಸ್ತು ಶಾಸ್ತ್ರದಲ್ಲಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅದರಲ್ಲಿ ಕ್ಯಾಲೆಂಡರ್ ಅನ್ನು ಮನೆಯ ಯಾವ ದಿಕ್ಕಿನಲ್ಲಿ ಇಡುವುದರಿಂದ ಶುಭ ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ.
Vastu Tips For Calendar: ಪ್ರತಿಯೊಬ್ಬರ ಮನೆಯಲ್ಲೂ ಕ್ಯಾಲೆಂಡರ್ ಇದ್ದೇ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಕ್ಯಾಲೆಂಡರ್ ಹಾಕುವಾಗ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾ ಅಗತ್ಯ. ಇಲ್ಲದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು.
ಕ್ಯಾಲೆಂಡರ್ ವಿಷಯದಲ್ಲಿ ಈ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು:
ವಾಸ್ತವವಾಗಿ, ನಮ್ಮಲ್ಲಿ ಬಹಳಷ್ಟು ಮಂದಿ ಆತುರಾತುರವಾಗಿ, ಇಲ್ಲವೇ ಏನಾದರೂ ಲೆಕ್ಕಾಚಾರದಿಂದಾಗಿ ಹಳೆಯ ಕ್ಯಾಲೆಂಡರ್ ಮೇಲೆಯೇ ಹೊಸ ಕ್ಯಾಲೆಂಡರ್ ಹಾಕುವ ಅಭ್ಯಾಸ ಹೊಂದಿರುತ್ತಾರೆ. ನೀವೂ ಈ ತಪ್ಪನ್ನು ಮಾಡುತ್ತಿದ್ದರೆ ಹುಷಾರಾಗಿರಿ. ಏಕೆಂದರೆ ವಾಸ್ತು ಪ್ರಕಾರ, ನಿಮ್ಮ ಈ ತಪ್ಪು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ಕ್ಯಾಲೆಂಡರ್ ಅನ್ನು ಸರಿಯಾದ ಸ್ಥಳದಲ್ಲಿ, ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸುವುದು ಬಹಳ ಅಗತ್ಯ.
ಇದನ್ನೂ ಓದಿ- Vastu Tips: ಈ ವಸ್ತುಗಳನ್ನು ಮನೆಗೆ ತಂದು ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಿ
ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಇದ್ದರೆ ತುಂಬಾ ಶುಭ:
ವಾಸ್ತು ಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅಥವಾ ಪಂಚಾಂಗವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಸ್ಥಾಪಿಸುವುದನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.
ಕುಬೇರನ ದಿಕ್ಕು:
ಒಂದೊಮ್ಮೆ ಪಶ್ಚಿಮ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲು ಸಾಧ್ಯವಾಗದಿದ್ದರೆ, ಉತ್ತರ ದಿಕ್ಕಿನಲ್ಲೂ ಕೂಡ ಕ್ಯಾಲೆಂಡರ್ ಇರಿಸಬಹುದು. ಉತ್ತರ ದಿಕ್ಕು ಕುಬೇರನ ದಿಕ್ಕು. ಹಾಗಾಗಿ, ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಸ್ಥಾಪಿಸುವುದರಿಂದಲೂ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ- ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ
ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲೇಬಾರದು:
ದಕ್ಷಿಣ ದಿಕ್ಕು:
ವಾಸ್ತು ಪ್ರಕಾರ, ಅಪ್ಪಿತಪ್ಪಿಯೂ ಕೂಡ ಮನೆಯ ದಕ್ಷಿಣ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಲೇಬಾರದು. ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಅದು ಮನೆಯ ಹಿರಿಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಬಾಗಿಲ ಹಿಂದೆ/ಮುಖ್ಯ ಬಾಗಿಲಿನ ಬಳಿ:
ಮನೆಯ ಬಾಗಿಲಿನ ಹಿಂದೆ ಕ್ಯಾಲೆಂಡರ್ ಇಡುವ ತಪ್ಪನ್ನು ನೀವು ಎಂದಿಗೂ ಮಾಡಲೇಬಾರದು. ಇದಲ್ಲದೆ, ಮನೆಯ ಮುಖ್ಯ ಬಾಗಿಲಿನ ಬಳಿಯೂ ಕೂಡ ಕ್ಯಾಲೆಂಡರ್ ಹಾಕಬಾರದು ಎಂದು ನೆನಪಿಡಿ.
ಹೆಚ್ಚು ಗಾಳಿ ಬೀಸುವ ಕಡೆ:
ವಾಸ್ತು ಪ್ರಕಾರ, ಹೆಚ್ಚು ಗಾಳಿ ಬೀಸುವ ಕಡೆ ಕೂಡ ಕ್ಯಾಲೆಂಡರ್ ಹಾಕಬಾರದು. ಈ ರೀತಿ ಮಾಡುವುದರಿಂದ ಅದು ಇದು ಮನೆಯ ಏಳ್ಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ