Vastu Tips : ಬಡತನಕ್ಕೆ ಕಾರಣ ಮನೆಯಲ್ಲಿಡುವ ಈ ರೀತಿಯ ದೇವರ ಫೋಟೋ, ವಿಗ್ರಹಗಳು!
ಮನೆಯಲ್ಲಿ ದೇವರ ಫೋಟೋ ಹಾಕುವಾಗಲೂ ವಿಶೇಷ ಕಾಳಜಿ ಅಗತ್ಯವಾಗಿದೆ. ಯಾಕೆ ಇಲ್ಲಿದೆ ನೋಡಿ...
Vastu Shastra Tips : ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವು ಮನೆಯಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಜನರು ಮನೆಯನ್ನು ಅಲಂಕರಿಸುವಾಗ ವಾಸ್ತುವಿನ ಕೆಲವು ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಹೀಗಾಗಿ, ಜನ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ವಾಸ್ತು ದೋಷಗಳು ಮತ್ತು ಬಡತನದಂತಹ ಸಮಸ್ಯೆಗಳೂ ಮನೆಯಲ್ಲಿ ಹುಟ್ಟಿಕೊಳ್ಳುತ್ತವೆ. ಮನೆಯಲ್ಲಿ ದೇವರ ಫೋಟೋ ಹಾಕುವಾಗಲೂ ವಿಶೇಷ ಕಾಳಜಿ ಅಗತ್ಯವಾಗಿದೆ. ಯಾಕೆ ಇಲ್ಲಿದೆ ನೋಡಿ...
ಶ್ರಾವಣ ಮಾಸದಲ್ಲಿ, ಶಿವನ ಆಶೀರ್ವಾದ ಪಡೆಯಲು, ಜನರು ಪೂಜೆಯನ್ನು ಮಾಡುತ್ತಾರೆ ಮತ್ತು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ, ದೇವರ ಆಶೀರ್ವಾದವನ್ನು ತಮ್ಮ ಮೇಲೆ ಸದಾ ಇರಲಿ, ಮನೆಯಲ್ಲಿ ಶಿವನ ಫೋಟೋವನ್ನು ಸಹ ಹಾಕುತ್ತಾರೆ. ಆದರೆ ವಾಸ್ತು ಪ್ರಕಾರ, ಶಿವನ ಫೋಟೋ ಅಥವಾ ವಿಗ್ರಹವನ್ನು ಇರಿಸುವಾಗ ಕೆಲವು ವಿಷಯಗಳನ್ನು ವಿಶೇಷವಾಗಿ ಕಾಳಜಿ ವಹಿಸಬೇಕು.
ಇದನ್ನೂ ಓದಿ : ಉದಯಿಸುವ ಬುಧ ಈ ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಅದೃಷ್ಟ
ತಪ್ಪದೆ ಮನೆಯಲ್ಲಿ ಈ ಶಿವನ ವಿಗ್ರಹ ಇಡಿ
ಶಿವನ ಆರಾಧನೆಯಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. ಬಡತನ ಮನೆಯಿಂದ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದು ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಶಿವನನ್ನು ಪೂಜಿಸಿದ ನಂತರವೂ ವ್ಯಕ್ತಿಗೆ ಅನೇಕ ಬಾರಿ ಪ್ರಗತಿಯಾಗುವುದಿಲ್ಲ ಮತ್ತು ಮನೆಯಲ್ಲಿ ಸಮೃದ್ಧಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇಟ್ಟಿರುವ ಶಿವನ ಉಗ್ರರೂಪದ ಮೂರ್ತಿಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಿವನ ಉಗ್ರ ರೂಪದ ಫೋಟೋ ನಿಮ್ಮನ್ನು ಬಡತನಕ್ಕೆ ದೂಡುತ್ತದೆ. ಈ ರೀತಿಯ ಫೋಟೋಗಳು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲಸುತ್ತದೆ. ಈ ವಿಚಾರದಲ್ಲಿ ಮನೆಯವರಲ್ಲಿ ಕೋಪ ಆವರಿಸಿಕೊಳ್ಳುತ್ತದೆ. ಅಲ್ಲದೆ ಮನೆಯ ಶಾಂತಿ ಕದಡುತ್ತದೆ.
ಮನೆಯಲ್ಲಿ ಹಾಕಿ ಈ ರೀತಿಯ ದೇವರ ಫೋಟೋ
ಮನೆಯಲ್ಲಿ ಶಿವನ ಒಬ್ಬನೇ ಇರುವ ಫೋಟೋ ಇಡುವುದಕ್ಕಿಂತ ಪಾರ್ವತಿ ಜೊತೆಗಿರುವ ಫೋಟೋ ಇಡುವುದು ಅಥವಾ ಹಾಕುವುದು ಉತ್ತಮ. ಈ ಫೋಟೋ ದೊಂದಿಗೆ ಶಿವನ ಕೃಪೆಗೆ ಪಾತ್ರರಾಗುತ್ತೀರಿ. ಅಲ್ಲದೆ, ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುತ್ತಾಳೆ. ಸಂತೋಷ ಮತ್ತು ಶಾಂತಿಯ ವಾತಾವರಣ ಸೃಷ್ಟಿಯಾಗುತ್ತದೆ. ಬಡತನವು ಮನೆಯಿಂದ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿಯು ಹರಡುತ್ತದೆ.
ಇದನ್ನೂ ಓದಿ : ಅದೃಷ್ಟದ ಸಂಕೇತ ಕೈಯಲ್ಲಿರುವ ಈ ರೇಖೆ .! ಪ್ರಾಪ್ತಿಯಾಗುವುದು ಅಪಾರ ಸಂಪತ್ತು ಮತ್ತು ಗೌರವ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.