Vastu Tips for shoes: ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ ಕೆಲವು ನಿಯಮಗಳಿವೆ. ಅನೇಕ ಬಾರಿ ಜನರು ಈ ನಿಯಮಗಳನ್ನು ಅನುಸರಿಸುವುದಿಲ್ಲ, ಇದರಿಂದಾಗಿ ಮನೆಯಲ್ಲಿ ಬಡತನ ಬರಬಹುದು. ಮನೆಯಲ್ಲಿರುವ ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ. 


COMMERCIAL BREAK
SCROLL TO CONTINUE READING

ಮನೆಯ ಮುಖ್ಯ ಬಾಗಿಲು : ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಬಿಡಬಾರದು. ಇದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಬೂಟು ಮತ್ತು ಚಪ್ಪಲಿಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಧನ ನಷ್ಟವಾಗಬಹುದು. ಇದರಿಂದ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು.


ಇದನ್ನೂ ಓದಿ : 12 ವರ್ಷ ನಂತರ ಈ 3 ರಾಶಿಗೆ ನವಪಂಚಮ ರಾಜಯೋಗ.. ಧನ ಸಂಪತ್ತಿನ ಮಳೆ, ಲಕಲಕ ಹೊಳೆಯಲಿದೆ ಲಕ್! 


ಪೂಜಾ ಸ್ಥಳ : ಪೂಜಾ ಸ್ಥಳ ಅತ್ಯಂತ ಪವಿತ್ರ ಜಾಗವಾಗಿದೆ. ದೇವಾನುದೇವತೆಗಳು ಪೂಜಾ ಸ್ಥಳದಲ್ಲಿ ನೆಲೆಸಿದ್ದಾರೆ. ಶೂ ಮತ್ತು ಚಪ್ಪಲಿ ಧರಿಸಿ ದೇವರಮನೆ ಅಥವಾ ಮನೆಯಲ್ಲಿ ಪೂಜಾ ಸ್ಥಳದ ಬಳಿ ಹೋಗಬಾರದು.


ಅಡುಗೆ ಮನೆ: ಚಪ್ಪಲಿ ಹಾಕಿಕೊಂಡು ಅಡುಗೆ ಮನೆ ಇರುವ ಭಾಗಕ್ಕೆ ಹೋಗಬಾರದು. ಅಡುಗೆ ಮನೆಯನ್ನು ತಾಯಿ ಅನ್ನಪೂರ್ಣೇಶ್ವರಿ ದೇವಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಿರುವಾಗ ಚಪ್ಪಲಿ, ಬೂಟು ಹಾಕಿಕೊಂಡು ಅಡುಗೆ ಕೋಣೆಗೆ ಹೋದರೆ ತಾಯಿ ಅನ್ನಪೂರ್ಣೆಗೆ ಕೋಪ ಬರಬಹುದು.  


ವಾರ್ಡ್ರೋಬ್: ಮನೆಯಲ್ಲಿ ವಾರ್ಡ್ರೋಬ್‌ಗೆ ವಿಶೇಷ ಸ್ಥಾನವಿದೆ. ಈ ಸ್ಥಳದಲ್ಲಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ಮತ್ತು ಕುಬೇರರು ನೆಲೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೀರು ಇರುವ ಕೋಣೆಗೆ ತಪ್ಪಾಗಿಯೂ ಶೂ ಅಥವಾ ಚಪ್ಪಲಿ ಹಾಕಿಕೊಂಡು ಹೋಗಬಾರದು.


ಇದನ್ನೂ ಓದಿ : ಲಕ್ಷ್ಮೀನಾರಾಯಣ ಯೋಗ ಈ ರಾಶಿಗಳಿಗೆ ಭಾಗ್ಯೋದಯ.. ಅಪಾರ ಕೀರ್ತಿ, ಧನ, ಸಂಪತ್ತು ಹರಿದು ಬರುವುದು.! 


ತುಳಸಿ ಗಿಡ: ತುಳಸಿ ಗಿಡದ ಸುತ್ತ ಶೂ ಮತ್ತು ಚಪ್ಪಲಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ ಬರಬಹುದು. ಅದರಲ್ಲೂ ಸಾಯಂಕಾಲ ತುಳಸಿ ಗಿಡದ ಬಳಿ ಪಾದರಕ್ಷೆ, ಚಪ್ಪಲಿ ಇಡಬಾರದು.


ಮಲಗುವ ಕೋಣೆ: ಬೆಡ್‌ ರೂಮ್‌ನಲ್ಲಿ ಶೂ ಮತ್ತು ಚಪ್ಪಲಿ ಇಡಬಾರದು. ಮಲಗುವ ಕೋಣೆಯಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದರಿಂದ ವೈವಾಹಿಕ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಪತಿ-ಪತ್ನಿಯರ ನಡುವೆ ಜಗಳ ಹೆಚ್ಚಾಗಬಹುದು.  


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. Zee Kannada News ಅದನ್ನು ದೃಢೀಕರಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.