ಈ ರಾಶಿಯವರಿಗೆ ವಿಪರೀತ ರಾಜಯೋಗದ ಫಲ ! ಅಕ್ಷರ ಪಾತ್ರೆಯಂತೆ ಉಕ್ಕುತ್ತದೆ ಹಣ
ಫೆಬ್ರವರಿ 15 ರವರೆಗೆ, ಕುಂಭದಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು ಇರಲಿದೆ. ಈ ಸಂದರ್ಭ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ರಾಶಿ ಬದಲಾವಣೆ ಎಲ್ಲಾ ರಾಶಿಯವರ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಶುಕ್ರನು ಕೂಡಾ ಇದೇ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಫೆಬ್ರವರಿ 15 ರವರೆಗೆ, ಕುಂಭದಲ್ಲಿ ಶುಕ್ರ ಮತ್ತು ಶನಿಯ ಸಂಯೋಗವು ಇರಲಿದೆ. ಈ ಸಂದರ್ಭ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಈ ಸಂದರ್ಭದಲ್ಲಿ, ವಿಪರೀತ ರಾಜಯೋಗ ನಿರ್ಮಾಣವಾಗುತ್ತಿದೆ.
ಮೀನ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಪರೀತ ರಾಜಯೋಗವು ಮೀನ ರಾಶಿಯವರ ಜಾತಕದ 12 ನೇ ಮನೆಯಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಕೇತುವಿನ ದೃಷ್ಟಿಕೂಡಾ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15ರ ವರೆಗೆ ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಯಾವುದೇ ಕೆಲಸವನ್ನು ಪ್ರಾರಂಭಿಸಬೇಕಾದರೂ ಈ ಸಮಯ ಅನುಕೂಲಕರವಾಗಿರಲಿದೆ. ಉದ್ಯಮಿಗಳಿಗೆ ಈ ಸಮಯದಲ್ಲಿ ಲಾಭವಾಗಲಿದೆ. ಹಳೆಯ ಹೂಡಿಕೆಗಳಿಂದ ಪ್ರಯೋಜನವಾಗಬಹುದು. ಈ ಸಮಯದಲ್ಲಿ, ಆಸ್ತಿ ಅಥವಾ ವಾಹನ ಖರೀದಿಸುವ ಮನಸ್ಸು ಮಾಡಬಹುದು.
ಇದನ್ನೂ ಓದಿ : Astro Tips : ಯಾವ ದಿನ ಕೂದಲು, ಗಡ್ಡ ಕತ್ತರಿಸುವುದು ಉತ್ತಮ : ಇದು ಅಪಾರ ಹಣ, ಗೌರವ - ಪ್ರಗತಿ ತರುತ್ತದೆ!
ಧನು ರಾಶಿ :
ಜ್ಯೋತಿಷ್ಯದ ಪ್ರಕಾರ, ವಿಪರೀತ ರಾಜಯೋಗ ಧನು ರಾಶಿಯವರಿಗೆ ಬಹಳ ಅನುಕೂಲಕರವಾಗಿರಲಿದೆ. ಧನು ರಾಶಿಯವರ ಜಾತಕದ ಮೂರನೇ ಮನೆಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು ರೂಪುಗೊಳ್ಳಲಿದೆ. ಇಲ್ಲಿ ಕೂಡಾ ಕೇತುವಿನ ದೃಷ್ಟಿ ಈ ಮನೆಯ ಮೇಲೆ ಬೀಳಲಿದೆ. ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭವಾಗಬಹುದು. ಈ ಸಮಯದಲ್ಲಿ ಸಾಲದಿಂದ ಮುಕ್ತಿ ಸಿಗಲಿದೆ. ಜನವರಿ 17ರಿಂದ ಸಾಡೇಸಾತಿಯಿಂದ ಧನು ರಾಶಿಯವರು ಮುಕ್ತಿ ಪಡೆದಿರುತ್ತಾರೆ. ಹಾಗಾಗಿ ಇನ್ನು ಮುಂದಿನ ದಿನಗಳು ಈ ರಾಶಿಯವರ ಪಾಲಿಗೆ ಅದೃಷ್ಟದಾಯಕವಾಗಿರುತ್ತದೆ.
ಕನ್ಯಾರಾಶಿ :
ವಿಪರೀತ ರಾಜಯೋಗದ ಪರಿಣಾಮ ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ರಾಶಿಯ ಆರನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಸಮಯದಲ್ಲಿ ಕೇತು ಸಂಪತ್ತಿನ ಮನೆಯ ಮೇಲೆ ಕುಳಿತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಹಠಾತ್ ವಿತ್ತೀಯ ಲಾಭವಾಗಬಹುದು. ಸಾಲವಾಗಿ ಕೊಟ್ಟಿರುವ ಹಣ ಈ ಅವಧಿಯಲ್ಲಿ ಮತ್ತೆ ಕೈ ಸೇರಲಿದೆ. ಈ ಸಮಯವು ವ್ಯಾಪಾರಸ್ಥರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿರುತ್ತದೆ.
ಇದನ್ನೂ ಓದಿ : ಕುಂಭ ರಾಶಿಯಲ್ಲಿ 12 ತಿಂಗಳುಗಳ ಬಳಿಕ ಸೂರ್ಯ-ಶುಕ್ರರ ಮೈತ್ರಿ, ಈ ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ!
ಕಟಕ ರಾಶಿ :
ಶುಕ್ರ ಮತ್ತು ಶನಿಯ ಸಂಯೋಗದಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ. ಈ ಜಾತಕದ 8 ನೇ ಮನೆಯಲ್ಲಿ ವಿಪರೀತ ರಾಜ ಯೋಗ ರೂಪುಗೊಳ್ಳಲಿದೆ. ಷೇರುಗಳು, ಬೆಟ್ಟಿಂಗ್ ಮತ್ತು ಲಾಟರಿ ಇತ್ಯಾದಿಗಳಿಂದ ಲಾಭವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ಈ ಸಮಯವು ಉದ್ಯೋಗಿಗಳಿಗೂ ಅದ್ಭುತವಾಗಿದೆ. ಹೊಸ ಕೆಲಸದ ಆಫರ್ ಬರಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.