ಶುಕ್ರ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರ ಗ್ರಹವು ಸೆಪ್ಟೆಂಬರ್ 24 ರಂದು ರಾಶಿ ಪರಿವರ್ತನೆ ಮಾಡಲಿದೆ. ಈ ಸಮಯದಲ್ಲಿ ಶುಕ್ರನು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಗ್ರಹಗಳ ರಾಜ ಸೂರ್ಯ ಮತ್ತು ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ  ಇಬ್ಬರೂ ಕನ್ಯಾ ರಾಶಿಯಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕನ್ಯಾರಾಶಿಯಲ್ಲಿ ಶುಕ್ರನ ಸಂಚಾರವು ವಿಶೇಷ ಯೋಗವನ್ನು ಸೃಷ್ಟಿಸುತ್ತದೆ. ಶುಕ್ರನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ.  ಆದರೆ, ಶುಕ್ರನ ಈ ಸಂಚಾರವು ಮೂರು ರಾಶಿಯ ಜನರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರಿಗೆ ಬಹಳಷ್ಟು ಹಣ, ಪ್ರೀತಿ ಮತ್ತು ಸಮೃದ್ಧಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಸೆ. 24ರಿಂದ ಈ ಮೂರು ರಾಶಿಯವರ ಜೀವನವನ್ನೇ ಬದಲಾಯಿಸಲಿದ್ದಾನೆ ಶುಕ್ರ :
ವೃಷಭ ರಾಶಿಯವರಿಗೆ ಸಾಕಷ್ಟು ಹಣ ಮತ್ತು ಗೌರವ ಪ್ರಾಪ್ತಿ:

ವೃಷಭ ರಾಶಿಯ ಅಧಿಪತಿ ಶುಕ್ರನಾಗಿರುವುದರಿಂದ ಶುಕ್ರ ಸಂಕ್ರಮವು ವೃಷಭ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ದೀರ್ಘ ಸಮಯದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು, ಹಣದ ಹೊಳೆಯೇ ಹರಿಯಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. 


ಇದನ್ನೂ ಓದಿ- Rahu Gochar 2022: ಇನ್ನೆರಡು ವಾರಗಳ ಬಳಿಕ ಈ 3 ರಾಶಿಯವರಿಗೆ ರಾಹು ಕೃಪೆ


ಮಿಥುನ ರಾಶಿಯವರಿಗೆ ಆರ್ಥಿಕ ಲಾಭ:
ಶುಕ್ರನ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಶುಭ  ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಚಿಂತಿಸುವವರಿಗೆ ಈ ಸಮಯವು ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಕೌಟುಂಬಿಕ ಜೀವನದಲ್ಲಿ ನೀವು ಸಂತೋಷ ಮತ್ತು ನೆಮ್ಮದಿಯನ್ನು ಅನುಭವಿಸುವಿರಿ. ಆಸ್ತಿ, ವಾಹನ ಖರೀದಿಯ ಯೋಗವೂ ಇದೆ. 


ಇದನ್ನೂ ಓದಿ- ಶುಕ್ರ ಬುಧನ ಸಂಯೋಗದಿಂದ ರೂಪುಗೊಳ್ಳುವುದು ಲಕ್ಷ್ಮೀ ನಾರಾಯಣ ಯೋಗ, ಈ ರಾಶಿಯವರಿಗೆ ಭಾಗ್ಯೋದಯ


ಕನ್ಯಾ ರಾಶಿಯವರಿಗೆ ಹೂಡಿಕೆಗೆ ಉತ್ತಮ ಸಮಯ:
ಕನ್ಯಾ ರಾಶಿಯಲ್ಲೇ ಶುಕ್ರನ ಸಂಚಾರ ಆರಂಭವಾಗುವುದರಿಂದ ಈ ರಾಶಿಚಕ್ರದ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಶುಕ್ರನ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ, ಹಣಕಾಸಿನ ವಿಷಯದಲ್ಲೂ ಉತ್ತಮ ಸಮಯ ಇದಾಗಿದೆ. ನಿಮ್ಮ ಹಳೆಯ ಹೂಡಿಕೆ ಲಾಭದಾಯಕವಾಗಲಿದೆ. ಹೊಸದಾಗಿ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೂ ಸಮಯ ಉತ್ತಮವಾಗಿದೆ.  ಒಟ್ಟಾರೆಯಾಗಿ ಇದು ನಿಮಗೆ ಸುವರ್ಣ ಸಮಯ ಎಂದರೂ ತಪ್ಪಾಗುವುದಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.