ಬೆಂಗಳೂರು : ಕೆಲವು ರಾಶಿಯವರಿಗೆ ಹೊಸ ವರ್ಷ ಆರಂಭದ ನಂತರ ಅದೃಷ್ಟ ಕೈ ಹಿಡಿದರೆ, ಇನ್ನು ಕೆಲವರ ಬಾಳು ಹೊಸ ವರ್ಷ ಆರಂಭಕ್ಕೆ ಮುನ್ನವೇ ಬೆಳಕಾಗಲಿದೆ. ಇಂದು, ಅಂದರೆ ಡಿಸೆಂಬರ್ 29 ರ ಶುಕ್ರವಾರ ಶುಕ್ರ ಗ್ರಹಡ ಸ್ಥಾನ ಪಲ್ಲಟವಾಗಲಿದೆ. ಹೀಗೆ ಸ್ಥಾನ ಬದಲಾಯಿಸುವ ಶುಕ್ರ ಮಕರ ರಾಶಿಗೆ ಕಾಲಿಡಲಿದ್ದಾನೆ. ಇಲ್ಲಿ ಈಗಾಗಲೇ ಬುಧ ನೆಲೆಯಾಗಿರುವುದರಿಂದ ಶುಕ್ರ ಮತ್ತು ಬುಧ ಒಟ್ಟಿಗೆ ಸೇರಿ ಲಕ್ಷ್ಮೀನಾರಾಯಣ ರಾಜಯೋಗ ರೂಪುಗೊಳ್ಳಲಿದೆ. ಲಕ್ಷ್ಮೀ ನಾರಾಯಣ ರಾಜಯೋಗಕ್ಕೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ಯೋಗದಿಂದ ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ : ಬುಧ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ಯೋಗವು ಮೇಷ ರಾಶಿಯವರಿಗೆ  ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಆದಾಯದಲ್ಲಿ ಹೆಚ್ಚಳವಾಗಬಹುದು. ಆರ್ಥಿಕ ಪರಿಸ್ಥಿತಿಯ ಬಲವರ್ಧನೆಯಿಂದಾಗಿ, ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.


ಇದನ್ನೂ ಓದಿ :  Vaikuntha Ekadashi 2023:ಜನವರಿಯ ಈ ದಿನ 'ಮಹಾ ಉಪವಾಸ', ಮೂರು ಅದ್ಭುತ ಶುಭ ಯೋಗಗಳಿಂದ ದ್ವಿಗುಣ ಫಲಿತಾಂಶ


ಮಿಥುನ ರಾಶಿ : ಲಕ್ಷ್ಮೀ ನಾರಾಯಣ ಯೋಗವು ಮಿಥುನ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ವೃತ್ತಿ ಜೀವನದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಬಹುದು. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಹೊಸ ವರ್ಷದ ಆರಂಭವು ಆಹ್ಲಾದಕರ ವಾತಾವರಣವನ್ನು ಉಂಟು ಮಾಡಲಿದೆ.  


ತುಲಾ ರಾಶಿ : ಡಿಸೆಂಬರ್ 28 ರಂದು ಬುಧ ಸಂಕ್ರಮಣ ಮತ್ತು ಡಿಸೆಂಬರ್ 29 ರಂದು ಶುಕ್ರ ಸಂಕ್ರಮಣದಿಂದ ನಿರ್ಮಾಣವಾಗಿರುವ ಲಕ್ಷ್ಮೀ ನಾರಾಯಣ ರಾಜಯೋಗವು ತುಲಾ ರಾಶಿಯವರ ಪಾಲಿಗೆ ಉತ್ತಮ ದಿನಗಳನ್ನು ತರಲಿದೆ. ಇದುವರೆಗೆ ವೃತ್ತಿ ಜೀವನದಲ್ಲಿ ಎದುರಿಸುತ್ತಿದ್ದ ಸಂಕಷ್ಟಗಳು ಪರಿಹಾರವಾಗುವುದು. ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಸುಖ ಸಂತೋಷ ಮನೆ ಮಾಡುತ್ತದೆ. 


ಇದನ್ನೂ ಓದಿ : Vastu Tips 2023: ಹೊಸವರ್ಷದಂದು ಮನೆಯ ಮುಖ್ಯದ್ವಾರದ ಬಳಿ ಇರಲಿ ಈ 6 ಸಂಗತಿಗಳು


ವೃಶ್ಚಿಕ ರಾಶಿ : ಮಕರ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜಯೋಗವು ವೃಶ್ಚಿಕ ರಾಶಿಯವರಿಗೆ ಶುಭಕರವಾಗಿರುತ್ತದೆ. ಒತ್ತಡದಿಂದ ಮುಕ್ತಿ ದೊರೆಯಲಿದೆ. ಸಂತೋಷ ಮತ್ತು ಶಾಂತಿಯಿಂದ ಜೀವನವನ್ನು ನಡೆಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಈ ಹಿಂದೆ ಬಾಧಿಸುತ್ತಿದ್ದ ರೋಗಗಳಿಂದ ಕೂಡಾ ಮುಕ್ತಿ ಸಿಗಲಿದೆ.  ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.