Shukra Gochara Dhanayoga: ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು-ಐಷಾರಾಮಿ, ಪ್ರೀತಿ-ಆಕರ್ಷಣೆಯನ್ನು ನೀಡುವ ಶುಕ್ರ ಗ್ರಹ ಎಂದೇ ಕರೆಯಲ್ಪಡುವ ಶುಕ್ರನು ಅತಿ ಶೀಘ್ರದಲ್ಲಿ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಚಂದ್ರನ ಅಧೀನದಲ್ಲಿರುವ ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶದಿಂದಾಗಿ 'ಧನಯೋಗ' ಉಂಟಾಗುತ್ತಿದೆ. ಇದನ್ನು "ಧನ ರಾಜಯೋಗ" ಎಂತಲೂ ಕರೆಯಲಾಗುತ್ತದೆ. ಚಂದ್ರನ ರಾಶಿಯಲ್ಲಿ ಶುಕ್ರ ಸಂಚಾರವು ಎಲ್ಲಾ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದಾಗ್ಯೂ, ಶುಕ್ರ ಸಂಚಾರದಿಂದ ನಿರ್ಮಾಣಗೊಳ್ಳಲಿರುವ "ಧನ ರಾಜಯೋಗ"ವು ಮುಂದಿನ 42 ದಿನಗಳವರೆಗೆ ಮೂರು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ಕರುಣಿಸಲಿದ್ದು ಅವರಿಗೆ ಶ್ರೀಮಂತರಾಗುವ ಯೋಗವಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರ ಭವಿಷ್ಯವನ್ನು ಉಜ್ವಲಗೊಳಿಸಲಿದೆ "ಧನರಾಜ ಯೋಗ":- 
ಮಿಥುನ ರಾಶಿ: 

ಗ್ರಹಗಳ ರಾಜಕುಮಾರನಾದ ಬುಧನು ಮಿಥುನ ರಾಶಿಗೆ ಅಧಿಪತಿ ಗ್ರಹವಾಗಿದೆ. ಬುಧ-ಶುಕ್ರರ ನಡುವೆ ಮಿತೃತ್ವ ಭಾವ ಇರುವುದರಿಂದ ಶುಕ್ರನ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಲಿರುವ ಧನರಾಜ ಯೋಗವು ಈ ರಾಶಿಯವರಿಗೆ ಸಂಪತ್ತಿನ ಸುರಿಮಲೆಯನ್ನೇ ಸುರಿಸ್ಲೈದೆ. ಇದಲ್ಲದೆ, ಉದ್ಯೋಗ ವ್ಯವಹಾರದಲ್ಲಿ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂತಲೇ ಹೇಳಲಾಗುತ್ತಿದೆ. 


ಇದನ್ನೂ ಓದಿ- Surya Grahana 2023: ವರ್ಷದ ಕೊನೆಯ ಸೂರ್ಯಗ್ರಹಣದಿಂದ ಈ ರಾಶಿಯವರಿಗೆ ಭಾರೀ ತೊಂದರೆ


ಕರ್ಕಾಟಕ ರಾಶಿ: 
ಶುಕ್ರ ರಾಶಿ ಪರಿವರ್ತನೆಯಿಂದ ಕರ್ಕಾಟಕ ರಾಶಿಯಲ್ಲಿಯೇ "ಧನರಾಜ ಯೋಗ" ನಿರ್ಮಾಣವಾಗುತ್ತಿದ್ದು, ಇದರ ಅಧಿಕ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರುತ್ತದೆ. ಧನರಾಜ ಯೋಗವು ಈ ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದು ಇವರಿಗೆ ಶ್ರೀಮಂತರಾಗುವ ಯೋಗವೂ ಇದೆ. ಹಣದ ಹರಿವಿನಿಂದಾಗಿ ಐಷಾರಾಮಿ ಜೀವನ ನಡೆಸುವ ಯೋಗವೂ ಇದೆ. 


ಇದನ್ನೂ ಓದಿ- Surya-Shani Transit 2023: 2 ಶತ್ರು ಗ್ರಹಗಳ 'ಮಹಾ ಸಂಕ್ರಮಣ'ದಿಂದ ಈ ಜನರಿಗೆ ಹಣ ಸಿಗುತ್ತೆ!


ಕನ್ಯಾ ರಾಶಿ: 
ಶುಕ್ರ ಗೋಚಾರದಿಂದ ನಿರ್ಮಾಣಗೊಳ್ಳಲಿರುವ ಧನರಾಜ ಯೋಗವು ಕನ್ಯಾ ರಾಶಿಯವರಿಗೆ ಬಂಪರ್ ಹಣಕಾಸಿನ ಲಾಭವನ್ನು ತರಲಿದೆ. ಇದರಿಂದ ನಿಮ್ಮ ದೀರ್ಘಾವಧಿಯ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ವೃತ್ತಿ ರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದ್ದು  ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.