ಬೆಂಗಳೂರು: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಮಂಗಳವಾರವನ್ನು ಶ್ರೀ ಆಂಜನೇಯನಿಗೆ ಸಮರ್ಪಿಸಲಾಗಿದೆ. ಮಂಗಳವಾರ ಹನುಮನನ್ನು ಪೂಜಿಸುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಹನುಮ ಕೂಡ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ತನ್ನ ಭಕ್ತರಿಗೆ ದಯಪಾಲಿಸುತ್ತಾನೆ. ಆದ್ದರಿಂದ ಮಂಗಳವಾರದಂದು ಹನುಮಂತನನ್ನು ಪೂಜಿಸುವುದು ಮತ್ತು ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನಲಾಗುತ್ತದೆ. ಮಂಗಳವಾರ ಹನುಮನನ್ನು ಆರಾಧಿಸುವುದರಿಂದ ನಿಮ್ಮ ಹಾಳಾದ ಕೆಲಸವೂ ಪೂರ್ಣಗೊಳ್ಳಲು ಪ್ರಾರಂಭಿಸುತ್ತದೆ. ಮಂಗಳವಾರದ ಮಾಡಲಾಗುವ ಕೆಲ ತಾಂತ್ರಿಕ ಪರಿಹಾರಗಳನ್ನು ಜ್ಯೋತಿಷ್ಯ ಮತ್ತು ಲಾಲ್ ಕಿತಾಬ್‌ನಲ್ಲಿ ಉಲ್ಲೇಖಿಸಲಾಗಿದೆ. ನಿಂಬೆ ಮತ್ತು ಲವಂಗದ ಪರಿಹಾರಗಳು ಇದರಲ್ಲಿ ತುಂಬಾ ಪರಿಣಾಮಕಾರಿಯಾದ ಒಂದು ಉಪಾಯವಾಗಿದೆ. ಮಂಗಳವಾರದ ಈ ವಿಶೇಷ ಕ್ರಮದ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

ಮಂಗಳವಾರದಂದು ಈ ಲವಂಗದ ಪರಿಹಾರ ಮಾಡಿ ನೋಡಿ 
- ಹಣಕಾಸಿನ ಸಮಸ್ಯೆಗಳು ನಿಮ್ಮ ಬೆನ್ನು ಬಿಡುತ್ತಿಲ್ಲ ಎಂದಾದಲ್ಲಿ, ಹನುಮಾನ್ ಜಿ ಅವರ ಮಂತ್ರವಾದ 'ಓಂ ಹನುಮತೇ ನಮಃ' ಅನ್ನು ಮಂಗಳವಾರ 21 ಬಾರಿ ಜಪಿಸಿ.


- ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ, ಮಂಗಳವಾರ ಮನೆಯ ಹೊರಗೆ, ದೇವಸ್ಥಾನದಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ನಿಂಬೆ ಮರವನ್ನು ನೆಡಿ. ಅಲ್ಲದೆ ಆ ಮರಕ್ಕೆ ಪ್ರತಿದಿನ ನೀರು ಹಾಕಿ ಬೆಳೆಸಿ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಆದರೆ ಮನೆಯ ಒಳಗೆ ಮರೆತೂ ಕೂಡ ನಿಂಬೆ ಮರವನ್ನು ನೆಡಬೇಡಿ.


- ವ್ಯಾಪಾರದಲ್ಲಿ ಪದೇ ಪದೇ ನಷ್ಟ ಉಂಟಾಗುತ್ತಿದ್ದಾರೆ, ಮಂಗಳವಾರ ಮತ್ತು ಶನಿವಾರದಂದು ಅಂಗಡಿಯ ಮುಂದೆ ನಿಂಬೆ ಮತ್ತು ಹಸಿರು ಮೆಣಸಿನಕಾಯಿಯನ್ನು ನೇತುಹಾಕಿ. ಈ ಪರಿಹಾರವು ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಮನೆಯಲ್ಲಿ ಅಂತಹ ಸಮಸ್ಯೆಗಳಿದ್ದರೆ, ಮನೆಯ ಮುಖ್ಯ ದ್ವಾರದಲ್ಲಿ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತುಹಾಕಿ.


- ಕಠಿಣ ಪರಿಶ್ರಮದ ಬಳಿಕವೂ ನಿಮಗೆ ಯಶಸ್ಸು ಸಿಗುತ್ತಿಲ್ಲ ಎಂದಾದಲ್ಲಿ, ಮಂಗಳವಾರದಂದು ನಿಂಬೆಹಣ್ಣು ಮತ್ತು 4 ಲವಂಗದೊಂದಿಗೆ ಹನುಮಾನ ದೇವಸ್ಥಾನಕ್ಕೆ ಹೋಗಿ. ದೇವಸ್ಥಾನದಲ್ಲಿ ಹನುಮಾನ ಮುಂದೆ ನಿಂಬೆಹಣ್ಣಿನ ಮೇಲೆ ಲವಂಗವನ್ನು ಹಾಕಿ ನಂತರ ಹನುಮಾನ್ ಚಾಲೀಸಾವನ್ನು ಪಠಿಸಿ. ಇದರ ನಂತರ, ನಿಂಬೆಯನ್ನು ದೇವಾಲಯದಲ್ಲಿಯೇ ಬಿಡಿ. ಈ ಉಪಾಯವು ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ.


ಇದನ್ನೂ ಓದಿ-ಈ 4 ರಾಶಿಗಳ ಜನರು ಅತಿ ಹೆಚ್ಚು ಕಾಮುಕರಾಗಿರುತ್ತಾರೆ, ಪ್ರೀತಿಯಲ್ಲಿ ಹೊಸ-ಹೊಸ ಪ್ರಯೋಗಗಳನ್ನು ಮಾಡಲು ಮುಂದಿರುತ್ತಾರೆ!


- ಮಂಗಳವಾರ ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ಕೊಡಿ. ಅಲ್ಲದೆ ಕೋತಿಗೆ ಬೇಳೆ ಮತ್ತು ಬಾಳೆಹಣ್ಣು ತಿನ್ನಿಸಿ. ಇದಲ್ಲದೇ ಹಸುವಿಗೆ ರೊಟ್ಟಿ ತಿನ್ನಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.


ಇದನ್ನೂ ಓದಿ-ವಾರದಲ್ಲಿ ಬಿಳಿಕೂದಲನ್ನು ಕಪ್ಪಾಗಿಸಲು ಮೆಂತೆ ಕಾಳುಗಳ ಜೊತೆ ಈ ಪದಾರ್ಥ ಬೆರೆಸಿದ ಹೇಯರ್ ಡೈ ಅನ್ವಯಿಸಿ ನೋಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.