ಈ ರಾಶಿಯವರು ಬಂಗಾರ ಅಲ್ಲ ಬೆಳ್ಳಿ ಧರಿಸಿದರೆ ಮಾತ್ರ ಹಿಂಬಾಲಿಸುವುದು ಅದೃಷ್ಟ! ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿ
Silver Weraing Benfits:ಯಾವುದೇ ವ್ಯಕ್ತಿಯು ತನ್ನ ರಾಶಿಯ ಪ್ರಕಾರ ರತ್ನವನ್ನು ಧರಿಸಿದರೆ,ಅದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಎನ್ನುತ್ತದೆ ಜ್ಯೋತಿಷ್ಯ.ಅದೇ ರೀತಿ ಬೆಳ್ಳಿಯನ್ನು ರಾಶಿ ಪ್ರಕಾರ ಧರಿಸಿದರೆ, ವ್ಯಕ್ತಿಯು ಶ್ರೀಮಂತನಾಗಬಹುದು.
Silver Weraing Benfits : ಮಹಿಳೆಯರು ಹೆಚ್ಚಾಗಿ ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ.ಬೆಳ್ಳಿಯ ಕಾಲುಂಗುರ,ಉಂಗುರಗಳನ್ನು ಧರಿಸಲು ಇಷ್ಟಪಡುತ್ತಾಳೆ. ಇದು ಖಂಡಿತವಾಗಿಯೂ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಜ್ಯೋತಿಷ್ಯದ ಪ್ರಕಾರ ಇದನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.ಆದರೆ ಬೆಳ್ಳಿಯನ್ನು ಧರಿಸುವುದು ಎಲ್ಲರಿಗೂ ಮಂಗಳಕರವಲ್ಲ. ಇನ್ನು ಕೆಲವರು ಬೆಳ್ಳಿ ಧರಿಸಿದರೆನೇ ಮಂಗಳಕರ.
ಯಾವುದೇ ವ್ಯಕ್ತಿಯು ತನ್ನ ರಾಶಿಯ ಪ್ರಕಾರ ರತ್ನವನ್ನು ಧರಿಸಿದರೆ,ಅದರಿಂದ ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ ಎನ್ನುತ್ತದೆ ಜ್ಯೋತಿಷ್ಯ.ಅದೇ ರೀತಿ ಬೆಳ್ಳಿಯನ್ನು ರಾಶಿ ಪ್ರಕಾರ ಧರಿಸಿದರೆ, ವ್ಯಕ್ತಿಯು ಶ್ರೀಮಂತನಾಗಬಹುದು. ಬೆಳ್ಳಿಯನ್ನು ಧರಿಸುವುದರಿಂದ ಇವರ ಜೀವನದಲ್ಲಿ ಬದಲಾವಣೆಗಳಾಗುತ್ತವೆ. ಹಾಗಿದ್ದರೆ ಯಾವ ರಾಶಿಯವರು ಬೆಳ್ಳಿಯನ್ನು ಧರಿಸುವುದು ಶುಭ ಎನ್ನುವ ಮಾಹಿತಿ ಇಲ್ಲಿದೆ.
ಬೆಳ್ಳಿ ಯಾರಿಗೆ ಅದೃಷ್ಟ :
ಜ್ಯೋತಿಷ್ಯದ ಪ್ರಕಾರ ಬೆಳ್ಳಿಯನ್ನು ಚಂದ್ರ ಮತ್ತು ಶುಕ್ರ ಗ್ರಹಗಳೆರಡರ ಸಂಕೇತವೆಂದು ಪರಿಗಣಿಸಲಾಗುತ್ತದೆ.ಚಂದ್ರನನ್ನು ಮನಸ್ಸಿನ ಗ್ರಹ ಎಂದು ಪರಿಗಣಿಸಿದರೆ, ಶುಕ್ರನನ್ನು ಐಷಾರಾಮಿ ಮತ್ತು ಸೃಜನಶೀಲ ಎಂದು ಪರಿಗಣಿಸಲಾಗುತ್ತದೆ.ಬೆಳ್ಳಿಯನ್ನು ಧರಿಸುವುದರಿಂದ ಈ ಎರಡೂ ವಿಷಯಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಇವೆರಡರ ಬೆಳವಣಿಗೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರಿ,ಶುಭ ಫಲಿತಾಂಶ ನೀಡುತ್ತದೆ.
ವೃಷಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಈ ರಾಶಿಯವರು ಬೆಳ್ಳಿ ಧರಿಸುವುದು ಶುಭ. ಇದನ್ನು ಧರಿಸುವುದರಿಂದ ವೃಷಭ ರಾಶಿಯವರ ಕೋಪ ಹತೋಟಿಯಲ್ಲಿರುತ್ತದೆ. ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತಾರೆ.ಎಷ್ಟೇ ಕಷ್ಟಪಟ್ಟರೂ ಯಶಸ್ಸು ಸಿಗದಿದ್ದಾಗ ಬೆಳ್ಳಿ ಧರಿಸಿದ ಕೂಡಲೇ ಇವರ ಅದೃಷ್ಟ ಬದಲಾಗುತ್ತದೆ.
ಕಟಕ ರಾಶಿ :
ಈ ರಾಶಿಯವರು ಬೆಳ್ಳಿ ಧರಿಸಿದರೆ, ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಕರ್ಕಾಟಕ ರಾಶಿಯವರು ಬೆಳ್ಳಿಯನ್ನು ಧರಿಸಿದರೆ, ಜೀವನದಲ್ಲಿ ಮುನ್ನಡೆಯುವ ಮಾರ್ಗಗಳು ತೆರೆದುಕೊಳ್ಳುತ್ತವೆ.ಬೆಳ್ಳಿ ಅವರ ಆರೋಗ್ಯದ ಮೇಲೆಯೂ ಉತ್ತಮ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!
ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯ ಅಧಿಪತಿ ಶುಕ್ರ.ಬೆಳ್ಳಿಯನ್ನು ಧರಿಸುವುದರಿಂದ ಅವರ ಜೀವನ ಸಮಸ್ಯೆಗಳು ಕೊನೆಗೊಳ್ಳುತ್ತವೆ.ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುವುದು.ಇವರ ಆರೋಗ್ಯವು ಉತ್ತಮವಾಗಿರುತ್ತದೆ.ಕುಟುಂಬ ಮತ್ತು ಆರ್ಥಿಕ ದೃಷ್ಟಿಕೋನದಿಂದ ಬೆಳ್ಳಿ ಧಾರಣೆ ಇವರಿಗೆ ಅನುಕೂಲಕಾರವಾಗಿರುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.