Wednesday Remedies: ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಘ್ನ ವಿನಾಶಕ ಎಂದು ಹೇಳಲಾಗುವ ಗಣಪತಿಗೆ ಸದಾ ಮೊದಲ ಪೂಜೆ. ಯಾವುದೇ ಕೆಲಸವನ್ನು ಮಾಡುವಾಗ ಮೊದಲು ಗಣೇಶನಿಗೆ ಪೂಜೆ ಮಾಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಮಾಡುವ ಕೆಲಸದಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ನಮ್ಮನ್ನು ಕಾಪಾಡು ಎಂದು ವಿಘ್ನ ವಿನಾಶಕನಿಗೆ ಪ್ರಾರ್ಥನೆ ಮಾಡುವುದಾಗಿದೆ.  


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ ಪ್ರತಿ ದಿನವನ್ನೂ ಒಂದೊಂದು ದೇವ-ದೇವತೆಗಳಿಗೆ ಸಮರ್ಪಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಬುಧವಾರವನ್ನು ಸಂಕಷ್ಟ ನಿವಾರಕ, ವಿಘ್ನ ವಿನಾಶಕ ಗಣಪತಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆಯೂ ಇದೆ. ನಿಮ್ಮ ಜೀವನದಲ್ಲಿ ಕೌಟುಂಬಿಕ ಸಮಸ್ಯೆ, ಆರ್ಥಿಕ ಬಿಕ್ಕಟ್ಟು ಎದುರಾಗಿದ್ದರೆ ಬುಧವಾರದ ದಿನ ಕೆಲವು ಪರಿಹಾರ ಕೈಗೊಳ್ಳುವುದು ಪ್ರಯೋಜನಕಾರಿ ಆಗಿದೆ. ಇದರಿಂದ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. 


ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬುಧವಾರದ ಜ್ಯೋತಿಷ್ಯ ಪರಿಹಾರ: 
ದೂರ್ವ ಪರಿಹಾರ: 

ದೂರ್ವ ಅಥವಾ ದರ್ಬೆ ಎಂದರೆ ಗಣೇಶನಿಗೆ ತುಂಬಾ ಪ್ರೀತಿ.  ಕೆಲಸಗಳಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಪರಿಹಾರ ಪಡೆಯಲು ಬುಧವಾರದ ದಿನ ಗಣಪತಿಯ ದೇವಸ್ಥಾನಕ್ಕೆ ಹೋಗಿ 11 ಅಥವಾ 21 ಕಟ್ಟು ದರ್ಬೆಯನ್ನು ಅರ್ಪಿಸಿ. 


ಇದನ್ನೂ ಓದಿ- Budh Gochar 2023: ಮೂರು ದಿನಗಳ ಬಳಿಕ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ತುಂಬಲಿದೆ ಖಜಾನೆ


ಗಣಪತಿ ಮಂತ್ರ: 
ಬುಧವಾರದ ದಿನ ಗಣೇಶನ ಮಂತ್ರ ಪಠಿಸುವುದರಿಂದ ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಸಂಕಷ್ಟಗಳಿಂದ ಪರಿಹಾರ ದೊರೆತು, ಗಣೇಶನ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಬಹುದು. 


ಕುಂಕುಮ: 
ಬುಧವಾರದ ದಿನ ಗಣೇಶನಿಗೆ ಪೂಜೆ ಮಾಡುವಾಗ ಗಣಪತಿಯ ಹಣೆಗೆ ಕುಂಕುಮವನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಅಂತಹ ಮನೆಯಲ್ಲಿ ಸುಖ, ಶಾಂತಿ ನೆಲೆಸಿ ಮನೆಯ ಸದಸ್ಯರು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. 


ಶಮಿ ಎಲೆ: 
ಬುಧವಾರದ ದಿನ ಗಣಪತಿ ಪೂಜೆಯಲ್ಲಿ ಶಮಿ ಎಲೆಗಳನ್ನು ಅರ್ಪಿಸಿ. ನಿಯಮಿತವಾಗಿ ಪ್ರತಿ ಬುಧವಾರ ಗಣಪತಿ ಪೂಜೆಯಲ್ಲಿ ಶಮಿ ಎಲೆಗಳನ್ನು ಅರ್ಪಿಸುವುದರಿಂದ ತೀಕ್ಷ್ಣ ಬುದ್ದಿ, ಶಕ್ತಿ ಪ್ರಾಪ್ತಿಯಾಗುತ್ತದೆ. 


ಲಡ್ಡು: 
ಗಣಪತಿಯ ಪ್ರಿಯ ಆಹಾರಗಳಲ್ಲಿ ಲಡ್ಡು ಸಹ ಒಂದು. ಬುಧವಾರದ ದಿನ ಗಜಾನನನ ಪೂಜೆಯಲ್ಲಿ ಲಡ್ಡುವನ್ನು ಪ್ರಸಾದವಾಗಿ ಅರ್ಪಿಸಿ. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಎದುರಾಗಿರುವ ಸಮಸ್ಯೆಗಳು ಬಗೆಹರಿದು ಇಷ್ಟಾರ್ಥ ಸಿದ್ಧಿಯಾಗುತ್ತದೆ. 


ಇದನ್ನೂ ಓದಿ- ಎಂಥಾ ಸಂಕಷ್ಟದಲ್ಲೂ ಈ ನಕ್ಷತ್ರದಲ್ಲಿ ಜನಿಸಿದವರ ಕೈಬಿಡಲ್ಲ ಪರಮೇಶ್ವರ: ಮೀನಾಮೇಷ ಎಣಿಸದೆ ಸಕಲ ಸಂಪತ್ತು ಕರುಣಿತ್ತಾರೆ ವಿಶ್ವಾಂಭರ


ಹಸಿರು ಮೇವು: 
ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳಿದ್ದರೆ, ಆರ್ಥಿಕ ಸಂಕಷ್ಟಗಳಿದ್ದರೆ ಬುಧವಾರದ ದಿನ ಹಸುವಿಗೆ ಹಸಿರು ಮೇವನ್ನು ನೀಡುವುದರಿಂದ ನಿಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 


ದಾನ: 
ಬುಧವಾರದ ದಿನ ಹಸಿರು ಕಾಳುಗಳನ್ನು ಅಗತ್ಯವಿರುವವರಿಗೆ ದಾನ ಮಾಡಿ. ಇದರಿಂದ ಸಂಬಂಧಗಳಲ್ಲಿ ಮೂಡಿರುವ ಬಿರುಕು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.