Weekly Horoscope in Kannada From December 25th to December 31st: ಈ ವರ್ಷದ ಕೊನೆಯ ವಾರ ದ್ವಾದಶ ರಾಶಿಗಳ ಫಲ ಹೇಗಿದೆ. ಈ ವರ್ಷಾಂತ್ಯ ಯಾವ ರಾಶಿಯವರಿಗೆ ಶುಭವಾಗಿರಲಿದೆ. ಯಾರಿಗೆ ಅದೃಷ್ಟ ಕೈಹಿಡಿಯುವುದಿಲ್ಲ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ:  
ವರ್ಷಾಂತ್ಯದ ಕೊನೆಯ ವಾರ ಮೇಷ ರಾಶಿಯವರಿಗೆ ಕಠಿಣವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಮನಃಶಾಂತಿ ಹದಗೆಡಬಹುದು. ನೀವು ಯಾವುದೇ ದೊಡ್ಡ ಕೆಲಸಕ್ಕೆ ಕೈ ಹಾಕುತ್ತಿದ್ದಾರೆ ನಿಮ್ಮ ಪಾಲುದಾರರ ಬಗ್ಗೆ ಜಾಗರೂಕರಾಗಿರಿ. ವಾರದ ಉತ್ತರಾರ್ಧದಲ್ಲಿ ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.  


ವೃಷಭ ರಾಶಿಯವರ ವಾರ ಭವಿಷ್ಯ:  
ಈ ವರ್ಷಾಂತ್ಯವು ವೃಷಭ ರಾಶಿಯವರಿಗೆ ಅತ್ಯುತ್ತಮವಾಗಿದೆ ಎಂತಲೇ ಹೇಳಬಹುದು. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿದ್ದರೆ, ಇಲ್ಲವೇ ಆಸ್ತಿ ಖರೀದಿಗಾಗಿ ಚಿಂತಿಸುತ್ತಿದ್ದರೆ ಇದು ಒಳ್ಳೆಯ ಸಮಯ. ದೂರ ಪ್ರಯಾಣದಿಂದ ಲಾಭದ ಅವಕಾಶಗಳಿವೆ. ಒಟ್ಟಾರೆ ಇದು ನಿಮಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಬಹುದು.


ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರು ಈ ವಾರ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ಬದಲಾವಣೆಗಳ ಬಗ್ಗೆ ಚಿಂತಿಸುತ್ತಿದ್ದರೆ ಈ ವಾರ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸೂಕ್ತವಾಗಿದೆ. ವ್ಯಾಪಾರಸ್ಥರಿಗೆ ದೀರ್ಘ ಸಮಯದಿಂದ ಬೇರೆಡೆ ಸಿಲುಕಿದ್ದ ಹಣ ಈ ವಾರ ನಿಮ್ಮ ಕೈ ಸೇರಲಿದೆ.  


ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ಈ ವಾರ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದಿರಿ. ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸದಿದ್ದರೆ ಒಳ್ಳೆಯದು.   ಉದ್ಯೋಗಸ್ಥರು ಅಧಿಕಾರಿಗಳೊಂದಿಗಿನ ವಿವಾದಗಳನ್ನು ತಪ್ಪಿಸಿ, ಇಲ್ಲವೇ ಸಮಸ್ಯೆಗಳು ಉಲ್ಬಣಿಸಬಹುದು. 


ಇದನ್ನೂ ಓದಿ- Shani Budh Yuti: ಮೂರು ದಶಕಗಳ ಬಳಿಕ ಬುಧ ಶನಿ ಮೈತ್ರಿ, ಈ ರಾಶಿಯವರಿಗೆ ಸುವರ್ಣ ಯುಗ


ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರು ಈ ವಾರ ಯಾವುದೇ ರೀತಿಯ ದೊಡ್ಡ ವ್ಯವಹಾರಗಳಿಗೆ ಕೈ ಹಾಕದೆ ಇದ್ದರೆ ಒಳ್ಳೆಯದು. ಬೇರೆಯವರಿಗೆ ಸಾಲ ನೀಡುವುದರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ. ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇದೆ.  


ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ವರ್ಷಾಂತ್ಯದ ಈ ವಾರ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ನೀಡಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ವಾರದ ದ್ವಿತೀಯಾರ್ಧದಲ್ಲಿ ಶುಭ ಫಲ ಪ್ರಾಪ್ತಿಯಾಗಲಿದೆ.  ಆದಾಗ್ಯೂ, ಯಾವುದೇ ಪ್ರಮುಖ ಬದಲಾವಣೆಗಳ ಮೊದಲು ಹಿರಿಯರಿಂದ ಸಲಹೆ ಪಡೆಯಿರಿ. 


ತುಲಾ ರಾಶಿಯವರ ವಾರ ಭವಿಷ್ಯ: 
ವರ್ಷಾಂತ್ಯದ ಕೊನೆಯ ವಾರ ತುಲಾ ರಾಶಿಯವರಿಗೆ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಪಾಲುದಾರರಿಂದ ಬೆಂಬಲ ಸಾಧ್ಯತೆ ಇದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ವಾರ ಪ್ರಾಶಸ್ತ್ಯವಾಗಿದೆ. ಕೆಲಸ ಬದಲಾಯಿಸಲು ಯೋಚಿಸುತ್ತಿದ್ದರೆ ಅದಕ್ಕೂ ಕೂಡ ಸಮಯ ಅತ್ಯುತ್ತಮವಾಗಿದೆ. 


ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರು ಈ ವಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ಇಲ್ಲದಿದ್ದರೆ ನಷ್ಟ ಉಂಟಾಗಬಹುದು. ಆದಾಗ್ಯೂ, ವಾರದ ದ್ವಿತೀಯಾರ್ಧ ನಿಮಗೆ ವ್ಯವಹಾರ ಸಂಬಂಧಿತ ಪ್ರಯಾಣದಿಂದ ಲಾಭವಾಗಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. 


ಇದನ್ನೂ ಓದಿ- ಲಕ್ಷ್ಮೀ ನಾರಾಯಣ ಯೋಗ ಈ 5 ರಾಶಿಯವರಿಗೆ ಅದೃಷ್ಟ.. ಧನ ಸಂಪತ್ತು ಕೊಟ್ಟು ಕಾಯುವಳು ವಿಷ್ಣುಪ್ರಿಯೆ!


ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ಈ ವಾರ ಮಿಶ್ರ ಫಲ ಪ್ರಾಪ್ತಿಯಾಗಲಿದೆ. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳದೇ ಇರಬಹುದು. ಅತಿಯಾದ ಓಡಾಟವಿದ್ದರೂ ಲಾಭಕ್ಕಿಂತ ನಷ್ಟವೇ ಹೆಚ್ಚು. ವ್ಯವಹಾರದಲ್ಲಿ ಲಾಭ-ನಷ್ಟವನ್ನು ಸಮನಾಗಿ ಸ್ವೀಕರಿಸುತ್ತಾ  ಸಂಯಮದಿಂದ ಮುಂದುವರೆಯುವುದು ಒಳ್ಳೆಯದು. 


ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ 2023ರ ಈ ಕೊನೆಯ ವಾರ ಅತ್ಯುತ್ತಮ ವಾರ ಎಂದು ಸಾಬೀತುಪಡಿಸಲಿದೆ. ಈ ವಾರ, ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಲಾಭದ ಸಾಧ್ಯತೆಗಳಿವೆ. ಕಂಪನಿ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಸಂಭವವಿದ್ದು, ಪ್ರಯಾಣವು ಲಾಭದಾಯಕವಾಗಿರುತ್ತದೆ.  ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. 


ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರಿಗೆ ವೃತ್ತಿ ರಂಗಕ್ಕೆ ಸಂಬಂಧಿಸಿದಂತೆ ಈ ವಾರ ಕಠಿಣ ಪರಿಶ್ರಮದಿಂದ ಕೂಡಿದ ವಾರ ಎಂತಲೇ ಹೇಳಬಹುದು. ಯಾವುದೇ ಕೆಲಸದಲ್ಲಿ ನಿರೀಕ್ಷಿತ ಫಲ ಪಡೆಯಲು ಕಷ್ಟಪಟ್ಟು ದುಡಿಯಬೇಕಾಗುತ್ತದೆ. ಆದಾಗ್ಯೂ, ನಿಮ್ಮ ಪರಿಶ್ರಮಕ್ಕೆ ತಕ್ಕಫಲವನ್ನು ನೀವು ಪಡೆಯುವಿರಿ. 


ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಈ ವಾರ ಉತ್ತಮ ವಾರ ಎಂದು ಸಾಬೀತುಪಡಿಸಲಿದೆ. ವರ್ಷಾಂತ್ಯದ ಈ ವಾರ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ತುಂಬಾ ಪ್ರಾಶಸ್ತ್ಯವಾಗಿದ್ದು, ವ್ಯಾಪಾರದಲ್ಲಿ ವಿಶೇಷ ಲಾಭವನ್ನು ಪಡೆಯುತ್ತೀರಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.