Weekly Horoscope 2024: ಮುಂದಿನ ವಾರ ಮಕರ ಸೇರಿದಂತೆ ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಹಲವರಿಗೆ ಅದೃಷ್ಟ ಸಿಕ್ಕರೆ ಮತ್ತೆ ಕೆಲವರಿಗೆ ಅಶುಭ ಪರಿಣಾಮಗಳು ಉಂಟಾಗುತ್ತವೆ. ನಿಮ್ಮ ಈ ವಾರದ ರಾಶಿ ಭವಿಷ್ಯ ಹೇಗಿದೆ ಅಂತಾ ತಿಳಿಯಿರಿ... 


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಷ ರಾಶಿಯ ಲಾಭಸ್ಥಾನದಲ್ಲಿ ಶನಿ ಇದ್ದಾನೆ, 2ನೇ ಮನೆಯಲ್ಲಿ ಗುರು ಇದ್ದಾನೆ. 7ನೇ ಮನೆಯಲ್ಲಿ ಬುಧ ಶುಕ್ರ ಇದ್ದರೆ, 6ನೇ ಮನೆಯಲ್ಲಿ ಸೂರ್ಯ ಬುಧ ಇದ್ದಾನೆ. ಎಲ್ಲಾ ಗ್ರಹಗಳೂ ಅಚ್ಚುಕಟ್ಟಾದ ಜಾಗದಲ್ಲಿದೆ. ಇದು ನಿಮಗೆ ಮಹತ್ತರ ಬದಲಾವಣೆ ಆಗುವ ಸಮಯ. ಈ ಬದಲಾವಣೆ ನಿಮಗೆ ಬಹಳ ಒಳ್ಳೆಯ ಫಲಗಳನ್ನು ಕೊಡುತ್ತದೆ.


ವೃಷಭ ರಾಶಿ: 5ನೇ ಮನೆಯಲ್ಲಿ ಸೂರ್ಯ ಕೇತು, 6ನೇ ಮನೆಯಲ್ಲಿ ಶುಕ್ರ-ಬುಧ, 2ನೇ ಮನೆಯಲ್ಲಿ ಕುಜ ಸಮಯ ಮಧ್ಯಮ ಆದರೆ 6ನೇ ಮನೆಯಲ್ಲಿ ರಾಹು ಇರುವುದು ನಿಮಗೆ ಬಲ ದೊರೆಯಲಿದೆ. ರಾಹುವಿನ ಬಲದಿಂದ ನೀವು ಏನೇ ಸಮಸ್ಯೆಗಳನ್ನು ಎದುರಿಸಲು ಬಹಳ ಶಕ್ತಿ ಕೊಡುತ್ತದೆ. ನಿಮ್ಮ ಮಾನಸಿಕ ಶಕ್ತಿಯೂ ವೃದ್ಧಿಯಾಗುತ್ತದೆ.


ಮಿಥುನ ರಾಶಿ: 4ನೇ ಮನೆಯಲ್ಲಿ ಕೇತು ಸೂರ್ಯ ಒತ್ತಡಗಳನ್ನು ಕೊಡುತ್ತಾರೆ. ಎಲ್ಲಾ ಸಮಸ್ಯೆಗಳಿಗೂ ‌ಪರಿಹಾರ ಇರುತ್ತದೆ. ನಿಧಾನವಾಗಿ ಯೋಚಿಸಿ ಮುಂದುವರೆಯಿರಿ. ಐದನೇ ಮನೆಯಲ್ಲಿ ಬುಧ ಹಾಗೂ ಶುಕ್ರ ಲಾಭವನ್ನು ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ. ವೃತ್ತಿಯಲ್ಲಿ ಅಲೆದಾಟ ಇರುತ್ತದೆ, ಹೀಗಾಗಿ ಸಹನೆಯಿಂದ ನಿಭಾಯಿಸಿ.


ಕಟಕ ರಾಶಿ: 3ನೇ ಮನೆಯಲ್ಲಿ ಸೂರ್ಯ ಹಾಗೂ ಕೇತು ಅಪಾರ ಧೈರ್ಯ & ಶಕ್ತಿಯನ್ನೂ ನೀಡುತ್ತಾರೆ. ಅವರು ನಿಮ್ಮ ಮುನ್ನುಗ್ಗುವ ಛಾತಿಯನ್ನು ಹೆಚ್ಚಿಸುತ್ತಾರೆ. ಅಪಾರ ಧನ ಲಾಭವನ್ನೂ ನೀಡಲಿದ್ದಾರೆ. 9ನೇ ಮನೆಯ ಗುರು ಜೀವನ‌ ಮಂಗಳಮಯವಾಗುವಂತೆ ಮಾಡುತ್ತಾನೆ. ‌ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಕಾರ್ಯಕ್ಷೇತ್ರದಲ್ಲಿ ಇರುವ ಅಡೆತಡೆಗಳು ದೂರವಾಗುತ್ತದೆ.‌


ಇದನ್ನೂ ಓದಿ: ನವರಾತ್ರಿ ಈ 5 ರಾಶಿಗಳ ಬದುಕನ್ನೇ ಬದಲಿಸುವುದು.. ಸಕಲೈಶ್ವರ್ಯ ಪ್ರಾಪ್ತಿಯಾಗಿ ಧನ ಸಂಪತ್ತಿನ ಮಳೆಯಾಗುವುದು, ಅದೃಷ್ಟ ಅಂದ್ರೆ ಇದಪ್ಪ !


ಸಿಂಹ ರಾಶಿ: 3ನೇ ಮನೆಯಲ್ಲಿ ಶುಕ್ರ ಹಾಗೂ ಬುಧ ಅತ್ಯಂತ ಶುಭಫಲಗಳನ್ನು ಕೊಡುತ್ತಾರೆ. 2ನೇ ಮನೆಯಲ್ಲಿ ಸೂರ್ಯ ಕೇತು ಗೃಹಶಾಂತಿಗೆ ಭಂಗ ತರುತ್ತಾರೆ. 7ನೇ ಮನೆಯ ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುವುದರಿಂದ ಆರೋಗ್ಯ ಕೈಕೊಡಬಹುದು. ಹಣಕಾಸಿನ ಖರ್ಚು ಬಹಳವಾಗಿ ಇರುತ್ತದೆ. ವೃತ್ತಿಯಲ್ಲಿ ಏರಿಳಿತ ಒತ್ತಡ ಇರುತ್ತದೆ.  


ಕನ್ಯಾ ರಾಶಿ: ಶನಿ 6ನೇ ಮನೆಯಲ್ಲಿ ಅಧಿಕ ಧನಲಾಭ ಕೊಡುತ್ತಾನೆ. 9ನೇ ಮನೆಯ ಗುರುವಿನಿಂದ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ. ಮನಸ್ಸಿಗೆ ಉಲ್ಲಾಸ ಸಂತೋಷ ಕೊಡುವಂಥ ಘಟನೆಗಳು ನಡೆಯುತ್ತದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೆ ವಿವಾಹ ಭಾಗ್ಯ ದೊರೆಯಲಿದೆ. ಎರಡನೇ ಮನೆಯಲ್ಲಿ ಬುಧ ಶುಕ್ರ ಇದ್ದು, ನಿಮ್ಮ ಕುಟುಂಬಕ್ಕೆ ಸೌಖ್ಯ ಹೆಚ್ಚಿಸುತ್ತಾನೆ.


ತುಲಾ ರಾಶಿ: ಈಗ ನಿಮಗೆ ಗುರುಬಲ ಇಲ್ಲ. ಒಳ್ಳೆಯ ದಿನಗಳಿಗೆ ಕೆಲಕಾಲ ಕಾಯಬೇಕು. ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಬುಧ ಇರುವುದರಿಂದ ಕೆಲ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ನಿಮಗೆ ಶುಭ ಸಂಗತಿಗಳನ್ನು ಅನುಭವಿಸುವ ಯೋಗ ಇದೆ. ಆರನೇ ಮನೆಯಲ್ಲಿ ರಾಹು ಇರುವುದು ಧನಲಾಭ ಹಾಗೂ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ.  


ವೃಶ್ಚಿಕ ರಾಶಿ: 4ನೇ ಮನೆಯಲ್ಲಿ ಶನಿ ಕೊಂಚ ಒತ್ತಡ ನೀಡುತ್ತಾನೆ.‌ ಆದರೆ 7ರಲ್ಲಿ ಗುರು ಇದ್ದು, ನಿಮ್ಮ ಕೆಲಸಗಳನ್ನು ಸುಲಭವಾಗಿಸುತ್ತಾನೆ. 11ನೇ ಮನೆಯಲ್ಲಿ ಸೂರ್ಯ ಕೇತು ಸಹ ಧನಲಾಭ ಕೊಡುತ್ತಾರೆ. 12ನೇ ಮನೆಯಲ್ಲಿ ಶುಕ್ರ ಬುಧರು ಸುಖ ನಿದ್ರೆಯನ್ನೂ ನೆಮ್ಮದಿಯನ್ನೂ ಕೊಡುತ್ತಾರೆ.


ಇದನ್ನೂ ಓದಿ: 30 ವರ್ಷ ಬಳಿಕ ದಸರಾ ಹಬ್ಬದಿಂದ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಾಗಿಲು ತೆರೆದು ಹುಡುಕಿ ಬರುತ್ತೆ ಲಕ್ಷಾಧಿಪತಿ ಭಾಗ್ಯ, ಅಷ್ಟೈಶ್ವರ್ಯ ಪ್ರಾಪ್ತಿ.. ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !


ಧನು ರಾಶಿ: 6ನೇ ಮನೆಯ ಗುರು ನಿಮಗೆ ಹಿನ್ನಡೆ ಕೊಡುತ್ತಾನೆ, ಮಾನಸಿಕ ವ್ಯಥೆ ಕಳವಳ ಇರುತ್ತದೆ. ಯಾವುದೋ ಭಯ ನಿಮ್ಮನ್ನು ತುಂಬಾ ಕಾಡಿಸುತ್ತದೆ. ಆದರೂ ಮೂರರ ಶನಿ, ಲಾಭಸ್ಥಾನದಲ್ಲಿ ಬುಧ ಶುಕ್ರರಿಂದ ಬಹಳ ಒಳ್ಳೆಯ ಫಲಗಳನ್ನು ಪಡೆಯುತ್ತೀರಿ. ಗೃಹಿಣಿಯರಿಗೆ ಶುಭ ಫಲಗಳು ಸಿಗಲಿವೆ. ವೃತ್ತಿಯಲ್ಲಿ ಏರಪೇರು ಇರುತ್ತದೆ.  


ಮಕರ ರಾಶಿ: 10ನೇ ಮನೆಯಲ್ಲಿ ಬುಧ ಶುಕ್ರ ಇರುವುದು ಹಾಗೂ 9ನೇ ಮನೆಯಲ್ಲಿ ಸೂರ್ಯ ಕೇತು ಇರುವುದು ಶುಭ ಫಲಗಳನ್ನು ಕೊಡುತ್ತಾರೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ 5ನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ರಾಹು ಇರುವುದು ಬಹು ದೊಡ್ಡ ಶಕ್ತಿ. ನಿಮಗೆ ‌ಹೊಸ ಉದ್ಯೋಗ ಸಿಗಲಿದ್ದು & ಧನಲಾಭವೂ ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿಯಾಗುತ್ತದೆ. ನೀವು ಸಾಡೇಸಾತಿ ಶನಿಯ ಕೊನೆಯ ಹಂತದಲ್ಲಿದ್ದೀರಿ.


ಕುಂಭ ರಾಶಿ: ಈಗ ನಿಮಗೆ ಯಾವ ಗ್ರಹಗಳೂ ಬೆಂಬಲ ಕೊಡುತ್ತಿಲ್ಲ. ಅಧಿಕ ಹಣದ ಖರ್ಚು, ಅಪವಾದ & ಒತ್ತಡಗಳು ಇರುತ್ತದೆ. ಹಣದ ಅಡಚಣೆ ಹಾಗೂ ಕುಟುಂಬದಲ್ಲಿ ಅಶಾಂತಿ ಇರುತ್ತದೆ. ನೀವು ಈಗ ಆದಷ್ಡು ಸಹನೆ ವಹಿಸಬೇಕು, ಯಾರೊಂದಿಗೂ ನೀವು ಜಗಳವಾಡಬಾರದು.  


ಮೀನ ರಾಶಿ: ಈಗ ನೀವು ಸಾಡೇಸಾತಿ ಶನಿಯ 1ನೇ ಪ್ರಭಾವದಲ್ಲಿ ಇದ್ದೀರಿ. ಖರ್ಚು ಬಹಳ‌ ಇರುತ್ತದೆ. ನಿಮಗೆ ಸಂಯಮ ಬಹಳ‌ ಮುಖ್ಯ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾವುದೇ ಕಾರಣಕ್ಕೂ ನೀವು ಧೈರ್ಯವನ್ನು ಕಳೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ರೆ ಉತ್ತಮ ಫಲಿತಾಂಶಗಳು ಸಿಗಲಿವೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.