Weekly Horoscope in  Kannada From November 27th to December 03rd: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ 2023ರ ಕೊನೆಯ ವಾರ ಹೇಗಿದೆ. ಈ ವಾರ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಫಲಾಫಲ ಹೇಗಿದೆ ತಿಳಿಯೋಣ... 
 
ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರಿಗೆ ಈ ವಾರ ಸಕಾರಾತ್ಮಕವಾಗಿದೆ. ಗುರುವಿನ ಪ್ರಭಾವದಿಂದಾಗಿ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ನೀವು ಬೇರೆಯವರಿಗೆ ಏನನ್ನಾದರೂ ಹೇಳುವಾಗ ಯೋಚಿಸಿ ಮಾತನಾಡಿ, ಇದು ಅವರ ಜೀವನಕ್ಕೆ ಮಾರ್ಗದರ್ಶನದ ಜೊತೆಗೆ ನಿಮ್ಮ ಗೌರವವನ್ನೂ ಹೆಚ್ಚಿಸಲಿದೆ. ಈ ಸಮಯದಲ್ಲಿ ನಿಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಭಾರೀ ಲಾಭವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. 


COMMERCIAL BREAK
SCROLL TO CONTINUE READING

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೆ ನಿಮ್ಮ ಸೋದರ ಸಂಬಂಧಿಗಳು ನಿಮ್ಮ ಬೆನ್ನೆಲುಬಿಗೆ ನಿಲ್ಲಲಿದ್ದಾರೆ.  ನೀವು ನಿಮ್ಮ ಸ್ನೇಹಿತರು ಸಂಬಂಧಿಕರ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸಲು ಮುಂಚೂಣಿಯಲ್ಲಿರುವ ಅವಕಾಶಗಳಿವೆ. ಆದಾಗ್ಯೂ, ನೀವು ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿದರೂ ಕೂಡ ಅವರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ, ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಉದ್ದೇಶ ಸರಿಯಿದ್ದರೆ ಮುಂದುವರೆಯಿರಿ. 


ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರು ಈ ವಾರ ಬೇರೆಯವರನ್ನು ಬೆದರಿಸಿ ಬಡಾಯಿಕೊಚ್ಚಿಕೊಳ್ಳುವ ನಿಮ್ಮ ಸ್ವಭಾವವನ್ನು ಬಿಡದಿದ್ದರೆ ನಿಮಗೆ ತೊಂದರೆ. ಈ ವಾರ ನಿಮ್ಮ ಸಮಯ ಕ್ಲಿಷ್ಟಕರವಾಗಿರುವುದರಿಂದ ಎಚ್ಚರಿಕೆಯಿಂದ ಮುಂದುವರೆಯಿರಿ. ಸ್ತ್ರೀಯರಿಂದ ಕಂಟಕ ಇರುವುದರಿಂದ ಜಾಗರೂಕರಾಗಿರಿ. ಬೇರೆಯವರನ್ನು ತುಳಿದು ಬೆಳೆಯುವವರು ಸದ್ಯಕ್ಕೆ ಖುಷಿ ಅನುಭವಿಸಿದರೂ ಭವಿಷ್ಯದಲ್ಲಿ ಅದರ ಫಲವನ್ನು ಅನುಭವಿಸಲೇಬೇಕು ಎಂಬುದನ್ನೂ ನೆನಪಿನಲ್ಲಿಡಿ.  


ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ನಡೆಯುತ್ತಿದ್ದು ನಿಮಗೆ ಕೆಲವು ಸಮಸ್ಯೆಗಳು ಬಾಧಿಸಬಹುದು. ನಿಮ್ಮ ಆತ್ಮೀಯರು ನಿಮ್ಮಿಂದ ದೂರವಾಗಬಹುದು. ಅದನ್ನು ಅರಗಿಸಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಈ ಸಮಯವನ್ನು ನಿಭಾಯಿಸಲು ಮಾನಸಿಕವಾಗಿ ನಿಮ್ಮನ್ನು ನೀವು ಗಟ್ಟಿಗೊಳಿಸಿ. ಅಷ್ಟೇ ಅಲ್ಲ, ನಾವಿಲ್ಲದೆ ಬೇರೆಯವರ ಕೆಲಸವೇ ಆಗುವುದಿಲ್ಲ ಎಂಬ ನಿಮ್ಮ ಭ್ರಮಾ ಮನಸ್ಥಿತಿಯಿಂದ ಹೊರಬನ್ನಿ. 


ಇದನ್ನೂ ಓದಿ- ಡಿಸೆಂಬರ್‌ನಲ್ಲಿ ಗುರು ಬಲದಿಂದ ಈ ರಾಶಿಯವರಿಗೆ ಅದೃಷ್ಟ, ಮುಟ್ಟಿದ್ದೆಲ್ಲಾ ಚಿನ್ನ


ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರೇ ನಿಮ್ಮ ಮಾತಿನ ಬಗ್ಗೆ ನಿಗಾವಹಿಸಿ. ಇಲ್ಲವೇ ನಿಮ್ಮ ಮಾತೇ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದು ನಿಮ್ಮ ಮಾನಸಿಕ ಖಿನ್ನತೆಯನ್ನೂ ಹೆಚ್ಚಿಸಬಹುದು. ಈ ವಾರ ಕೇತು-ಶುಕ್ರ ಶಾಂತಿ ಮಾಡಿಸಿಕೊಳ್ಳುವುದರಿಂದ ಕೊಂಚ ಪರಿಹಾರವನ್ನು ಕಾಣಬಹುದು. ನಿಮ್ಮ ಮಾತಿಗೆ ಕಡಿವಾಣ ಹಾಕುವುದರಿಂದ ನಿಮ್ಮ ಜೀವನದಲ್ಲಿ ಯಶಸ್ಸು, ಕೀರ್ತಿ ಎಲ್ಲವೂ ಇದೆ. 


ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರು ಬೇರೆಯವರನ್ನು ನಂಬುವ ಬದಲಿಗೆ ನೀವು ನಿಮ್ಮ ಸಾಮರ್ಥ್ಯವನ್ನು ನಂಬಿ ಮುಂದುವರೆಯಿರಿ. ಆದಾಗ್ಯೂ, ಆತ್ಮವಿಶ್ವಾಸ ಒಳ್ಳೆಯದು, ಆದರೆ, ಅತಿಯಾದ ಪರಾಕ್ರಮ ಒಳ್ಳೆಯದಲ್ಲ ಎಂಬುದನ್ನು ಮರೆಯಬೇಡಿ. ನೀವು ನಿಮ್ಮ ಸಾಮರ್ಥ್ಯವನ್ನು ಎಲ್ಲಿ, ಯಾವಾಗ, ಎಷ್ಟು ಬಳಸಬೇಕು ಎಂಬುದನ್ನು ಮೊದಲೇ ಯೋಚಿಸಿ, ಸರಿಯಾದ ದಿಕ್ಕಿನಲ್ಲಿ ಮುಂದುವರೆದರೆ ನಿಮ್ಮ ಗುರಿ ತಲುಪುವುದು ಸುಲಭವಾಗಲಿದೆ. 


ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೆ ಈ ವಾರ ನಿಮ್ಮ ಹಳೆ ಸ್ನೇಹಿತರು ಮತ್ತೆ ನಿಮ್ಮನ್ನು ಭೇಟಿಯಾಗಲಿದ್ದಾರೆ. ಮಾತ್ರವಲ್ಲ, ಈ ವಾರ ನಿಮ್ಮ ಆಪ್ತರೊಂದಿಗಿನ ಸಂಬಂಧದಲ್ಲಿ ಮೂಡಿದ್ದ ಬಿರುಕು ಕಳಚಲಿದೆ.  ಹಣಕಾಸಿನ ಹರಿವು ಹೆಚ್ಚಾಗಲಿದ್ದು ನಿಮ್ಮ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಆಕಸ್ಮಿಕವಾಗಿ ಸಿಗುವ ಧನಲಾಭವು ಜೀವನದಲ್ಲಿ ಐಷಾರಾಮಿ ಜೀವನವನ್ನು ನೀಡಲಿದೆ. 


ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರು ಸಂವಹನವನ್ನು ಸರಿಪಡಿಸಿಕೊಳ್ಳಿ. ಸರಿಯಾದ ಸಂವಾಹನದೊಂದಿಗೆ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ  ಮಹಾಲಕ್ಷ್ಮೀ ಯೋಗದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ನೀವು ತಂಡದೊಂದಿಗೆ ಸೇರಿ ಕೆಲಸ ಮಾಡುವುದರಿಂದ ಯಶಸ್ಸನ್ನು ಗಳಿಸುವಿರಿ. ದೇವರಲ್ಲಿ ನಂಬಿಕೆ ಇಟ್ಟು ಮುಂದುವರೆಯುವುದರಿಂದ ಎದುರಾಗುವ ಸವಾಲುಗಳನ್ನು ಜಯಿಸಿ, ಪ್ರಗತಿ ಹೊಂದಬಹುದು. 


ಇದನ್ನೂ ಓದಿ- ಗಜಲಕ್ಷ್ಮೀ ರಾಜಯೋಗದಿಂದ 2024ರ ಸಂವತ್ಸರ ಆರಂಭ: ಹೊಸ ವರ್ಷದಲ್ಲಿ ದೀಪದಂತೆ ಬೆಳಗಲಿದೆ ಈ ಜನರ ಭವಿಷ್ಯ, ಮಿಲಿಯನೇರ್ ಆಗೋದು ಗ್ಯಾರಂಟಿ


ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ಈ ವಾರ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡಬಹುದು. ಈ ಬಗ್ಗೆ ಎಚ್ಚರಿಕೆಯಿಂದಿರಿ. ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದೇ ಇರಬಹುದು. ಆದರೆ, ತೊಂದರೆಯಿಲ್ಲ. ನೀವು ಈ ವಾರ ನಿಮ್ಮ ಆರೋಗ್ಯದ ಬಗ್ಗೆಯಷ್ಟೆ ಸಂಪೂರ್ಣ ಗಮನಹರಿಸಿ. ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. 


ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರು ನಿಮ್ಮ ಜೀವನ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿ. ಜೀವನ ಎಂಬುದು ಬರೀ ಲಾಭದಿಂದ ಕೂಡಿರುವುದಿಲ್ಲ. ಅದರಲ್ಲೂ ಸಂಬಂಧದಲ್ಲಿ ಈ ರೀತಿಯ ಲಾಭ-ನಷ್ಟಗಳ ಲೆಕ್ಕಾಚಾರ ಸೂಕ್ತವೂ ಅಲ್ಲ. ನಕಾರಾತ್ಮಕ ಯೋಚನೆಗಳಿಂದ ಹೊರಬಂದು ಸಕರಾತ್ಮಕವಾಗಿ ಯೋಚಿಸಿ. ಈ ವಾರ ಜಾಗ ಬದಲಾವಣೆ ಸಾಧ್ಯತೆಯೂ ಇದೆ. 


ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರಿಗೆ ಭಗವಂತ ಸವಾಲುಗಳ ಸರಮಾಲೆಯನ್ನೇ ನೀಡಿ ಜೀವನದ ಪಾಠ ಕಲಿಸುತ್ತಿದ್ದಾರೆ. ಶನಿ ಮಹಾತ್ಮನ ಕೃಪೆಯಿಂದ ನೀವು ನಿಮ್ಮ ಮಾತುಕತೆಯ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಜೀವನದಲ್ಲಿ ಯಶಸ್ಸನ್ನು ಕಾಣುವಿರಿ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವಿವಾಹಿತ ದಂಪತಿಗಳಿಗೆ ಸಂತಾನ ಸುಖ ಪ್ರಾಪ್ತಿ. 


ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಈಗ ಖರ್ಚು ಹೆಚ್ಚಾಗಲಿದೆ, ಆದರೆ, ಖರ್ಚಿನ ಜೊತೆಗೆ ಲಾಭವೂ ಹೆಚ್ಚಾಗಲಿದೆ. ವಾಹನ, ಭೂಮಿ ಖರೀದಿ ಯೋಗವೂ ಇದ್ದು, ಇದರಿಂದ ಸಮಾಜದಲ್ಲಿ ನಿಮ್ಮ ಕೀರ್ತಿ-ಗೌರವವೂ ಹೆಚ್ಚಾಗಲಿದೆ. ಈ ವಾರ ನೀವು ದುಷ್ಟಶಕ್ತಿಗಳಿಂದ ನಿಮ್ಮನ್ನು, ನಿಮ್ಮವರನ್ನು ರಕ್ಷಿಸುವ ಬಲ ಹೊಂದಿರುತ್ತೀರಿ. ಸದಾ ನ್ಯಾಯದ ಪರವಾಗಿ ನಿಲ್ಲುವುದನ್ನು ರೂಢಿಸಿಕೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.