Varabhavishya in Kannada From April 29th to May 05th: ಏಪ್ರಿಲ್ ಮಾಸದ ಕೊನೆಯ ವಾರ ಮೇ ತಿಂಗಳ ಮೊದಲ ವಾರವು ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಆದರೆ, ಕೆಲವು ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ವಾರ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮುಂಬರುವ ವಾರ ಮೇಷ ರಾಶಿಯವರಿಗೆ ಪರಸ್ಪರ ಸಂಬಂಧಗಳಲ್ಲಿ ಪ್ರಣಯದ ಗಾಢತೆಯ ಜೊತೆಗೆ ನಿಮ್ಮ ಪ್ರೀತಿಯ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರಲಿವೆ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ವರ್ಚಸ್ಸು ಅಮೂಲ್ಯವಾದ ಮಿತ್ರರನ್ನು ಆಕರ್ಷಿಸುತ್ತದೆ. ಆದರೂ, ಬೇರೆಯವರೊಂದಿಗೆ ಹೆಚ್ಚು ಬೆರೆಯುವಾಗ ಜಾಗರೂಕರಾಗಿರಿ. ಸಂಭಾವ್ಯ ಘರ್ಷಣೆಗಳ ಹೊರತಾಗಿಯೂ ವಾರಾಂತ್ಯವು ನಿಮ್ಮಿಷ್ಟದಂತೆ ಅಮೋಘವಾಗಿರುತ್ತದೆ. 


ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಮುಂದಿನ ವಾರ ವೃಷಭ ರಾಶಿಯ ಜನರು ಪ್ರೀತಿಯ ಜೀವನದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಆನಧಿಸುವಿರಿ. ಕೌಟುಂಬಿಕ ಜವಾಬ್ಧಾರಿ ಹೆಚ್ಚಾಗುವುದಾದರೂ ಸಕಾರಾತ್ಮಕತೆಯಿಂದಾಗಿ ಮನಸ್ಸು ಉಲ್ಲಾಸಭರಿತವಾಗಿರುತ್ತದೆ.  ನೀವು ಪ್ರಕೃತಿಯಲ್ಲಿ ಸಾಂತ್ವನವನ್ನು ಕಾಣುವಿರಿ. ವಾರದ ಮಧ್ಯ ಭಾಗದಲ್ಲಿ ಹಣಕಾಸಿನ ವಿಷಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ವಾರಾಂತ್ಯದಲ್ಲಿ ಸ್ನೇಹಿತರು, ಕುಟುಂಬ ಸ್ನೇಹಿತರೊಂದಿಗೆ ಸಂತೋಷದ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. 


ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಏಪ್ರಿಲ್ ಕೊನೆಯ ಹಾಗೂ ಮೇ ತಿಂಗಳ ಮೊದಲ ವಾರವು ಮಿಥುನ ರಾಶಿಯ ಜನರಿಗೆ ನಿಮ್ಮ ಕ್ರಿಯಾತ್ಮಕ ಸ್ವಭಾವವನ್ನು ಅಳವಡಿಸಿಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಕಾರಣವಾಗುವ ಹೊಸ ಹಾದಿಯಲ್ಲಿ ಹೆಜ್ಜೆಯಿಡಲು ಇದು ಒಳ್ಳೆಯ ಸಮಯ. ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ನಿಮ್ಮನ್ನು ಚಿಂತನಶೀಲವಾಗಿ ವ್ಯಕ್ತಪಡಿಸಿಕೊಳ್ಳಿ. ಸಾಮಾಜಿಕ ಸಂವಹನಗಳು ಅನಿರೀಕ್ಷಿತ ಅವಕಾಶಗಳನ್ನು ಒದಗಿಸಬಹುದು.  ಆರ್ಥಿಕವಾಗಿ, ವಿವೇಕಯುತವಾಗಿರಿ, ಹಠಾತ್ ಖರ್ಚುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. 


ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರಿಗೆ ಮುಂಬರುವ ವಾರ ಆತ್ಮಾವಲೋಕನದ ಸಮಯ ಎಂದು ಸೂಚಿಸುತ್ತದೆ. ಈ ಸಮಯದಲ್ಲಿ ಮನೆ ಮತ್ತು ಕುಟುಂಬದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿ. ವೈಯಕ್ತಿಕ ಸಂಬಂಧಗಳಿಗೆ ಸೂಕ್ಷ್ಮವಾದ ಸ್ಪರ್ಶ ಬೇಕಾಗಬಹುದು. ಭವಿಷ್ಯದ ಭದ್ರತೆಗಾಗಿ ಈಗ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುವುದರಿಂದ ನಿಮ್ಮ ಆಹಾರ ಕ್ರಮದ ಬಗ್ಗೆ ಹೆಚ್ಚಿನ ಗಮನ ನೀಡಿದೆ. ಈ ವಾರ ಪ್ರೇಮ ಸಂಬಂಧಗಳು ಏರಿಳಿತಗಳಿಂದ ಕೂಡಿರಬಹುದು. 


ಇದನ್ನೂ ಓದಿ- ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳ ನಿರ್ಮಾಣ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಸ್ಥಾನಮಾನ ಪ್ರಾಪ್ತಿ!


ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರಿಗೆ ಮುಂಬರುವ ವರವು ಪ್ರೀತಿ-ಪ್ರೇಮದ ವಿಚಾರದಲ್ಲಿ ಆಹ್ಲಾದಕರ ಅನುಭವಗಳನ್ನು ಹೊತ್ತು ತರಲಿದೆ. ಪರಸ್ಪರ ಪ್ರೀತಿಯು ಪ್ರೀತಿಯ ಸಂಬಂಧಗಳನ್ನು ಹೆಚ್ಚಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ಈ ಉತ್ಸಾಹಭರಿತ ವಾರವು ನಿಮ್ಮನ್ನು ಆತ್ಮವಿಶ್ವಾಸದಿಂದ ಘರ್ಜಿಸುವಂತೆ ಪ್ರೋತ್ಸಾಹಿಸುತ್ತದೆ. ಈ ಮಧ್ಯೆ ನಿಮ್ಮ ನೈಸರ್ಗಿಕ ನಾಯಕತ್ವ ಕೌಶಲ್ಯಗಳು ಹೊರಬರಬಹುದು. ಆದರೆ,  ನಿಮ್ಮ ಕಠಿಣ ನಿರ್ಣಯದಿಂದ ಸವಾಲುಗಳನ್ನು ಎದುರಿಸಬಹುದು. ನೀವು ಶಿಸ್ತುಬದ್ಧವಾಗಿ ಉಳಿದರೆ ಹಣಕಾಸಿನ ಲಾಭದ ಅವಕಾಶಗಳು ಕೈಗೆಟುಕುವವು. 


ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಮುಂದಿನ ವಾರ ಕನ್ಯಾ ರಾಶಿಯವರಿಗೆ ಸಹಜ ಪ್ರಾವೀಣ್ಯತೆ ವರ್ಧಿಸುತ್ತದೆ. ಇದರಿಂದಾಗಿ ಸಂಕೀರ್ಣ ಯೋಜನೆಗಳನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವಾರದ ಮಧ್ಯಭಾಗದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಹಿತವಾದ ವಾತಾವರಣವನ್ನು ಅನುಭವಿಸುವಿರಿ. ಹಣಕಾಸಿನ ವಿಷಯಗಳ ಮೇಲೆ ನಿಗಾ ಇರಿಸಿ. ಇಲ್ಲದಿದ್ದರೆ, ಆರ್ಥಿಕ ನಷ್ಟ ಸಂಭವವಿದೆ. ಇದು ನಿಮ್ಮ ಒತ್ತಾದಕ್ಕೂ ಕಾರಣವಾಗಬಹುದು. ಪ್ರೀತಿ ವಿಶಾರದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ, ಪರಿಸ್ಥಿತಿ ನಿಮ್ಮ ಕೈ ಮೀರುವ ಸಂಭವವಿರುತ್ತದೆ. 


ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯ ಜನರು ಮುಂದಿನ ವಾರ ಪ್ರೀತಿ ವಿಚಾರದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಇದು ಸಂಬಂಧಗಳಲ್ಲಿ ಘರ್ಷಣೆಗೂ ಕಾರಣವಾಗಬಹುದು.  ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ, ರಾಜತಾಂತ್ರಿಕತೆಯು ಅಮೂಲ್ಯವಾದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸಲು ಈ ವಾರ ತುಂಬಾ ಮಂಗಳಕರವಾಗಿದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯುವ ಸಾಧ್ಯತೆ ಇದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. 


ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯ ಜನರಿಗೆ ಮುಂಬರುವ ವಾರವು ಬೆಳವಣಿಗೆಯತ್ತ ನಿಮ್ಮನ್ನು ಮುನ್ನಡೆಸಲಿದೆ.  ರಹಸ್ಯಗಳ ರಕ್ಷಕರಾಗಿ, ನಿಮ್ಮ ಸಂವಹನಗಳಲ್ಲಿ  ಅಂತಃಪ್ರಜ್ಞೆಯನ್ನು ನಂಬಿರಿ. ನಿಮ್ಮ ಆಸೆಗಳನ್ನು ಮತ್ತು ಗಡಿಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಿ. ದೀರ್ಘಾವಧಿಯ ಭದ್ರತೆಗಾಗಿ ಪ್ರಸ್ತುತ ಉಳಿತಾಯದ ಬಗ್ಗೆ ವಿಶೇಷ ಗಮಂಹಾರಿಸಿ. ಪ್ರೀತಿಯ ಜೀವನದಲ್ಲಿ ಧನಾತ್ಮಕ ಮತ್ತು ಸವಾಲಿನ ಅನುಭವಗಳೆರಡನ್ನೂ ಕಾಣಬಹುದು. ಪ್ರೇಮ ಜೀವನಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸಮಾಧಾನದಿಂದ ಇರುವುದು ಹೆಚ್ಚು ಅನುಕೂಲವನ್ನು ತರಲಿದೆ. 


ಇದನ್ನೂ ಓದಿ- Akshaya Tritiya 2024: ಅಕ್ಷಯ ತೃತೀಯದಂದು ಈ 5 ಕೆಲಸ ಮಾಡಿದರೆ ಲಕ್ಷ್ಮಿ ಕೃಪೆ, ಕೈ ತುಂಬಾ ಹಣ


ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಮುಂಬರುವ ವಾರವು ಧನು ರಾಶಿಯ ಜನರಿಗೆ  ಬೆಳವಣಿಗೆ ಮತ್ತು ಕಲಿಕೆಯ ಬಗ್ಗೆ ಮಹತ್ವದ್ದಾಗಿದೆ. ನಿಮ್ಮ ಸಾಮಾನ್ಯ ಆಲೋಚನಾ ವಿಧಾನವನ್ನು ಸವಾಲು ಮಾಡುವ ಹೊಸ ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ತೊಡಗಿಸಿಕೊಳ್ಳಿ. ವಾರದ ಆರಂಭದಲ್ಲಿ ನೀವು ಚಡಪಡಿಕೆಯನ್ನು ಅನುಭವಿಸಬಹುದು. ನಿಮ್ಮ ಆರಾಮ ವಲಯದಿಂದ ಹೊರಗೆ ಹೆಜ್ಜೆ ಹಾಕಲು ಸಿದ್ದರಾಗಿ. ಪ್ರಯಾಣಕ್ಕಾಗಿ ಅಥವಾ ಹೊಸ ಅಧ್ಯಯನವನ್ನು ಮುಂದುವರಿಸಲು ಇದು ಅತ್ಯುತ್ತಮ ಸಮಯ.  ವಾರದ ಮಧ್ಯೆ ಪ್ರಭಾವಶಾಲಿ ಹೊಸ ಸಂಪರ್ಕಗಳನ್ನು ಕಾಣುವಿರಿ. ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ನಿಮ್ಮ ಖರ್ಚುಗಳ ಮೇಲೆ ನಿಗಾವಹಿಸಿ. 


ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ಮುಂಬರುವ ವಾರವು ನಿಮ್ಮ ನಿಖರವಾದ ಸ್ವಭಾವವು ನಿಖರತೆ ಮತ್ತು ಸಮರ್ಪಣೆಯನ್ನು ಬೇಡುವ ಯಾವುದೇ ಕಾರ್ಯಗಳನ್ನು ಬೆಂಬಲಿಸುತ್ತದೆ. ವಾರದ ಆರಂಭದಲ್ಲಿ ನೀವು ಯೋಜಿಸಿ ಕೆಲಸ ಮಾಡುವುದರಿಂದ ಯಶಸ್ಸನ್ನು ಪಡೆಯುವಿರಿ. ಹಣಕಾಸಿನ ಜವಾಬ್ದಾರಿಯು ಒಂದು ಪ್ರಮುಖ ವಿಷಯವಾಗಿರಲಿದೆ. ಈ ಸಮಯದಲ್ಲಿ ಬುದ್ದಿವಂತಿಕೆಯಿಂದ ಹೂಡಿಕೆ ಮಾಡುವುದರಿಂದ ಭವಿಷ್ಯ ಸುಭದ್ರವಾಗಿರುತ್ತದೆ. ವಾರದ ಮಧ್ಯ ಭಾಗದಲ್ಲಿ ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಬೇಕಾಗಬಹುದು. ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಮಯವನ್ನು ಕಳೆಯಲು ಇದು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 


ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಮುಂಬರುವ ವಾರ ನಿಮ್ಮ ನಾವೀನ್ಯತೆ ಮತ್ತು ಜಾಣ್ಮೆಯೇ ನಿಮ್ಮ ಬಂಡವಾಳ. ವಾರದ ಆರಂಭದಲ್ಲಿ, ಸಂವಹನವು ಬಹಳ ಮುಖ್ಯವಾಗಿದ್ದು ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ದೃಢತೆಯಿಂದ ವ್ಯಕ್ತಪಡಿಸಿದರೆ ಬಂಪರ್ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಆದಾಗ್ಯೂ, ನಿಮ್ಮ ಬಗ್ಗೆ ತಾತ್ಸಾರ ಭಾವನೆಯನ್ನು ಹೊಂದಿರುವವರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ. ನಿಮ್ಮ ಪ್ರವೃತ್ತಿಯನ್ನು ನಂಬಿರಿ ಆದರೆ ಅಗತ್ಯವಿದ್ದಾಗ ತಜ್ಞರಿಂದ ಸಲಹೆ ಪಡೆಯಿರಿ. ವೈಯಕ್ತಿಕ ಸಂಬಂಧಗಳು ಉಲ್ಲಾಸಕರ ಬದಲಾವಣೆಗೆ ಒಳಗಾಗಬಹುದು. 


ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರಿಗೆ ಮುಂಬರುವ ವಾರ ಸಾಮರಸ್ಯ ಮತ್ತು ಭಾವನಾತ್ಮಕ ಸಂಪರ್ಕದ  ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ವಾರದ ಆರಂಭದಲ್ಲಿ ಸಂಬಂಧಗಳ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಭಾವನಾತ್ಮಕ ವಿಚಾರ ವಿನಿಮಯದಿಂದ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಸನಿಹಕ್ಕೆ ಬರುತ್ತೀರಿ. ಆರ್ಥಿಕವಾಗಿ, ಉಳಿತಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ.  ಸಾಮಾಜಿಕ ಜೀವನವು ಸಿಹಿ ಕ್ಷಣಗಳ ಜೊತೆಗೆ ಹೊಸ ಸ್ನೇಹವನ್ನು ಬೆಸುಗೆ ಹಾಕಲಿದೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಕಷ್ಟಪಟ್ಟು ದುಡಿಯುವುದನ್ನು ಪರಿಗಣಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.