Weekly Horoscope: ಈ ವಾರ ಕೆಲವು ರಾಶಿಯವರಿಗೆ ಧನಯೋಗ, ಕೈ ತುಂಬಾ ಹಣ
Weekly Horoscope From August 07th to August 13th: ಆಗಸ್ಟ್ ತಿಂಗಳ ಎರಡನೇ ವಾರ ಯಾವ ರಾಶಿಯವರ ಫಲ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಅದೃಷ್ಟ ಯಾವ ರಾಶಿಯವರಿಗೆ ಎಚ್ಚರಿಕೆ ಮುಖ್ಯ ಎಂದು ತಿಳಿಯೋಣ...
Weekly Horoscope in Kannada August 07th to August 13th: ಆಗಸ್ಟ್ ಎರಡನೇ ವಾರದಲ್ಲಿ ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರ ಸೇರಿದಂತೆ ಕೆಲವು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದ್ದು ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ...
ಮೇಷ ರಾಶಿಯವರ ವಾರ ಭವಿಷ್ಯ:
ಈ ವಾರ ನೀವು ಯಾವುದೇ ಕೆಲಸವನ್ನು ಮಾಡುವಾಗ ವಿಶ್ವಾಸದಿಂದ ಮುಂದುವರೆಯುವುದು ಬಹಳ ಅಗತ್ಯ. ಎಂತಹದ್ದೇ ಕೆಟ್ಟ ಪರಿಸ್ಥಿತಿ ಇದ್ದರೂ ಆಶಾವಾದಿಯಾಗಿ ಮುಂದುವರೆಯಿರಿ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಲು ಮರೆಯದಿರಿ. ಇದು ನಿಮ್ಮ ಮುಂದಿನ ಹಾದಿಯನ್ನು ಸುಗಮಗೊಳಿಸುತ್ತದೆ. ನಿಮ್ಮ ಪ್ರತಿಭೆಯಿಂದ ವೃತ್ತಿ ಬದುಕಿನಲ್ಲಿಯೂ ಉನ್ನತ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ. ವಾರದ ಆರಂಭವು ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾ ಫಲಪ್ರದವಾಗಿದೆ ಎಂದು ಹೇಳಬಹುದಾಗಿದೆ.
ವೃಷಭ ರಾಶಿಯವರ ವಾರ ಭವಿಷ್ಯ:
ವೃಷಭ ರಾಶಿಯವರಿಗೆ ವೈಯಕ್ತಿಕ ಜೀವನವಾಗಲಿ, ಇಲ್ಲವೇ, ವೃತ್ತಿ ಜೀವನವಾಗಲಿ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ನೀವು ಪ್ರತಿ ಹೆಜ್ಜೆಯಲ್ಲೂ ಜಾಗರೂಕರಾಗಿರುವುದು ತುಂಬಾ ಅವಶ್ಯಕ. ಕೆಲವರು ನಿಮ್ಮ ಆತ್ಮೀಯರೆ ಆಗಿರುವವರು ಜೊತೆಯಲ್ಲೇ ಇದ್ದು ನಿಮಗೆ ಹಾನಿ ಮಾಡುವ ಸಂಭವವಿರುವುದರಿಂದ ಇಂತಹವರ ಬಗ್ಗೆ ವಿಶೇಷ ಗಮನವಿರಲಿ. ನಿಮ್ಮ ಅಭದ್ರ ಜೀವನವನ್ನು ಭದ್ರವಾಗಿಸಿಕೊಳ್ಳಲು ತಾಳ್ಮೆ ತುಂಬಾ ಅಗತ್ಯ. ತಾಳ್ಮೆಯಿಂದ ಕಾಯುವುದರಿಂದ ಉತ್ತಮ ಅವಕಾಶಗಳು ಸಿಕ್ಕೆ ಸಿಗುತ್ತವೆ. ಇದರೊಂದಿಗೆ ನಿಮ್ಮ ಪ್ರಾಮಾಣಿಕತೆಯೂ ಕೂಡ ನಿಮ್ಮನ್ನು ಜೀವನದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಮಿಥುನ ರಾಶಿಯವರ ವಾರ ಭವಿಷ್ಯ:
ಮಿಥುನ ರಾಶಿಯವರೇ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದು ವೈಯಕ್ತಿಕ ಜೀವನದಲ್ಲೇ ಆಗಿರಲಿ ಇಲ್ಲ ವೃತ್ತಿ ಬದುಕಿನಲ್ಲೇ ಆಗಿರಲಿ ಸಮತೋಲನವನ್ನು ಸಾಧಿಸುವುದು ಈ ಕ್ಷಣದಲ್ಲಿ ನಿರ್ಣಾಯಕವಾಗಿದೆ. ಬೇರೆಯವರ ಅಸಹನೀಯ ಮಾತುಗಳಿಗೆ ಕಿವಿಗೊಡದೆ ನಿಷ್ಠೆಯಿಂದ ನಿಮಗೆ ಸರಿ ಅನಿಸಿದ್ದನ್ನು ಮಾತ್ರ ಮಾಡಿ. ಇದಲ್ಲದೆ, ನಿಮ್ಮ ಮೇಲಾಧಿಕಾರಿಗಳ ಮುಂದೆ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶಗಳು ಲಭ್ಯವಾಗಲಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಿ. ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ:
ಕರ್ಕಾಟಕ ರಾಶಿಯವರಿಗೆ ಇದು ಅದೃಷ್ಟದ ವಾರ. ಅದರಲ್ಲೂ, ಆರ್ಥಿಕವಾಗಿ ಈ ವಾರ ಕರ್ಕಾಟಕ ರಾಶಿಯವರಿಗೆ ಬಂಪರ್ ಧನಯೋಗ ಸಾಧ್ಯತೆ ಇದ್ದು ನಿಮ್ಮ ಬಹುದಿನಗಳ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳು ಈ ವಾರ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವುದರಿಂದ ಮನಸ್ಸಿಗೆ ಒಂದು ರೀತಿಯ ತೃಪ್ತಿ ಇರಲಿದೆ. ವೃತ್ತಿ ಬದುಕಿನಲ್ಲಿ ಹಲವು ಮಹತ್ವದ ಅವಕಾಶಗಳು ಲಭ್ಯವಾಗಲಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳುವುದರಿಂದ ನಿಮ್ಮ ಭವಿಷ್ಯ ಉಜ್ವಲಿಸಲಿದೆ.
ಇದನ್ನೂ ಓದಿ- Shukra Gochara: ಇಂದಿನಿಂದ ಕರ್ಕಾಟಕ ರಾಶಿಯಲ್ಲಿ ಶುಕ್ರ ಸಂಚಾರ, ಹೆಚ್ಚಾಗಲಿದೆ ಈ ರಾಶಿಯವರ ಸಂಕಷ್ಟ
ಸಿಂಹ ರಾಶಿಯವರ ವಾರ ಭವಿಷ್ಯ:
ಸಿಂಹ ರಾಶಿಯವರೇ ಈ ವಾರ ಹೊಸ ಆಲೋಚನೆಗಳನ್ನು ಮುಕ್ತ ಮನಸ್ಸಿನಿಂಸ ಸ್ವಾಗತಿಸಿ. ಯಾವುದೇ ವಿಚಾರದಲ್ಲಿ ಸಕಾರಾತ್ಮಕವಾಗಿ ಮುಂದುವರೆದರೆ ಒಳ್ಳೆಯದ್ದೇ ಆಗಲಿದೆ. ನಿಮ್ಮ ಭವಿಷ್ಯದ ಬಗ್ಗೆ ಆಶಾವಾದಿಯಾಗಿರಿ, ಆ ನಿಟ್ಟಿನಲ್ಲಿ ಮುಂದುವರೆಯಿರಿ. ಉದ್ಯೋಗ ಸ್ಥಳದಲ್ಲಿ ಸ್ವಯಂ ಶಕ್ತಿ, ಉತ್ಸಾಹದಿಂದ ಮುಂದುವರೆದರೆ ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಜಯ ನಿಮ್ಮ ಪಾಲಿಗಿರಲಿದೆ. ಹಣಕಾಸಿನ ಹರಿವೂ ಹೆಚ್ಚಾಗಲಿದ್ದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಕನ್ಯಾ ರಾಶಿಯವರ ವಾರ ಭವಿಷ್ಯ:
ಕನ್ಯಾ ರಾಶಿಯವರಿಗೆ ಈ ವಾರ ಅಷ್ಟು ಉತ್ತಮವಾಗಿಲ್ಲ. ಹಾಗಾಗಿ, ಈ ವಾರ ನೀವು ಯಾವುದೇ ಕೆಲಸಗಳನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯುವುದು ಅಗತ್ಯ. ಇದಲ್ಲದೆ, ಸಕಾರಾತ್ಮಕವಾಗಿ ಯೋಚಿಸಿ ಸಕಾರಾತ್ಮಕ ಚಿಂತನೆಗಳಿಂದ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಿ. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಇದು ನಿಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ, ವೃತ್ತಿ ಬದುಕಿನಲ್ಲಿಯೂ ಪ್ರಯೋಜನಕಾರಿ ಆಗಿದೆ. ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆದರೆ, ಎದೆಗುಂದದೆ ಮುಂದುವರೆಯಿರಿ, ಆಗಷ್ಟೇ ನಿಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂಬುದನ್ನೂ ನೆನಪಿನಲ್ಲಿಡಿ.
ತುಲಾ ರಾಶಿಯವರ ವಾರ ಭವಿಷ್ಯ:
ತುಲಾ ರಾಶಿಯವರು ಈ ವಾರ ನಿಮ್ಮ ಸಂಬಂಧಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ, ಸಂಬಂಧಿಕರ ನಡುವೆ ತಪ್ಪುಗ್ರಹಿಕೆ ಉಂಟಾಗುವ ಸಾಧ್ಯತೆ ಇದೆ. ಈ ವಾರ ಆದಾಯಕ್ಕೆ ಹೊಲಿಸಿದರೆ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲೂ ಕೈ ಹಿಡಿತದಲ್ಲಿರಲಿ. ಆದಾಗ್ಯೂ, ನೀವು ಹಿಂದೆ ಮಾಡಿದ ಹೂಡಿಕೆಗಳಿಂದ ಬಂಪರ್ ಲಾಭವಾಗಲಿದೆ. ಅಷ್ಟೇ ಅಲ್ಲ, ವ್ಯಾಪಾರಸ್ಥರಿಗೂ ಕೂಡ ಇದು ಅತ್ಯುತ್ತಮ ವಾರ ಎಂತಲೇ ಹೇಳಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ ಅದಕ್ಕೂ ಕೂಡ ಶುಭ ಸಮಯ ಇದಾಗಿದೆ.
ವೃಶ್ಚಿಕ ರಾಶಿಯವರ ವಾರ ಭವಿಷ್ಯ:
ಈ ವಾರ ಹಣಕಾಸಿನ ವಿಷಯದಲ್ಲಿ ನಿಮಗೆ ಲಾಭದಾಯಕವಾಗಿದೆ. ನಿಮ್ಮ ಹಿಂದಿನ ಹೂಡಿಕೆಗಳು ಬಂಪರ್ ಲಾಭವನ್ನು ತರಲಿವೆ. ವೃತ್ತಿ-ವ್ಯವಹಾರದ ವಿಷಯದಲ್ಲಿ ತಾಳ್ಮೆಯಿಂದ ಮುಂದುವರೆಯಿರಿ. ಸ್ವಲ್ಪ ಸಂಯಮದಿಂದ ಕಾಯುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ರಂಗದಲ್ಲಿ ನಿಮ್ಮ ಭಾಗ್ಯದ ಬಾಗಿಲುಗಳು ತೆರೆಯಲಿವೆ. ಆದಾಗ್ಯೂ, ಈ ವಾರ ನೀವು ನಿಮ್ಮ ಸಂಗತಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಇದನ್ನೂ ಓದಿ- 30 ವರ್ಷದ ಬಳಿಕ ಈ ರಾಶಿಗೆ ಅಷ್ಟೈಶ್ವರ್ಯ ತಂದ ಶನಿ: ಹಣದ ಮಳೆ ಗ್ಯಾರಂಟಿ- ಭಾಗ್ಯ ವೃದ್ಧಿ ಜೊತೆ ಉದ್ಯೋಗದಲ್ಲಿ ಬಡ್ತಿ, ಪ್ರಗತಿ
ಧನು ರಾಶಿಯವರ ವಾರ ಭವಿಷ್ಯ:
ಈ ವಾರ ಧನು ರಾಶಿಯವರಿಗೆ ದಿಢೀರ್ ಧನಲಾಭದ ಸಾಧ್ಯತೆ ಇದೆ. ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಸಾಧ್ಯತೆ ಇದ್ದು, ಪ್ರಯಾಣವು ಲಾಭದಾಯಕವಾಗಿರಲಿದೆ. ವೃತ್ತಿ ಪರ ಯಶಸ್ಸಿಗೆ ಈ ವಾರ ನಿಮಗೆ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಯಾವುದೇ ನಿಶ್ಚಿತ ಗುರಿಯನ್ನು ತಲುಪಲು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಯಾವುದೇ ಕೆಲಸದಲ್ಲಿ ಆತ್ಮಾವಲೋಕನ ಮಾಡಲು ಮರೆಯದಿರಿ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ನಿಮ್ಮನ್ನು ಸಿದ್ದಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮಕರ ರಾಶಿಯವರ ವಾರ ಭವಿಷ್ಯ:
ಈ ವಾರವೂ ಕೂಡ ನಿಮಗೆ ಸವಾಲಿನ ವಾರವೇ ಆಗಿರಲಿದೆ. ಆದರೆ, ಭಯಪಡುವ ಅಗತ್ಯವಿಲ್ಲ, ನಿಮ್ಮ ಹಿಂದಿನ ಕ್ಲಿಷ್ಟದ ಹಾದಿಯಿಂದ ನೀವು ಬಹಳಷ್ಟು ಕಲಿತಿದ್ದೀರಿ. ಹಾಗಾಗಿ ಯಾವುದೇ ಸವಾಲನ್ನೂ ನೀವು ಖಂಡಿತ ಜಯಿಸುತ್ತೀರಿ. ಇದೊಂದು ಶುಭ ಆರಂಭಕ್ಕೆ ನಾಂದಿ ಆಗಲಿದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದೆ. ಧೈರ್ಯದಿಂದ, ಆತ್ಮ ವಿಶ್ವಾಸದಿಂದ ಮುಂದುವರೆಯಿರಿ.
ಕುಂಭ ರಾಶಿಯವರ ವಾರ ಭವಿಷ್ಯ:
ಕುಂಭ ರಾಶಿಯವರಿಗೆ ವಾರವು ಶುಭ ಫಲಗಳೊಂದಿಗೆ ಆರಂಭವಾಗಲಿದೆ. ಆದಾಗ್ಯೂ, ನೀವು ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಯೋಚಿಸಿ ನಿರ್ಧರಿಸಿ. . ಒತ್ತಡ, ಅತಿಯಾದ ಚಿಂತನೆಯಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಇದನ್ನು ತಪ್ಪಿಸಲು, ಧ್ಯಾನ ಮಾಡುವುದು ಒಳ್ಳೆಯದು. ನೀವು ಹಿಂದೆ ಮಾಡಿರುವ ಹೂಡಿಕೆಗಳಿಂದ ಸಂಭಾವ್ಯ ಆದಾಯ ಬರಲಿದ್ದು ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ.
ಮೀನ ರಾಶಿಯವರ ವಾರ ಭವಿಷ್ಯ:
ಮೀನ ರಾಶಿಯವರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರವಾಗಿದೆ. ನಿಮ್ಮ ಸಂಗಾತಿಯು ನಿಮಗೆ ಪ್ರತಿ ಕೆಲಸದಲ್ಲೂ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ನಿಮ್ಮ ಆರೋಗ್ಯ ಸಮಸ್ಯೆಗಳು ಹೆಚ್ಚಾಗದಂತೆ ನಿಗಾವಹಿಸಲು ವಾಕಿಂಗ್, ಯೋಗವನ್ನು ಮೈಗೂಡಿಸಿಕೊಳ್ಳಿ. ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ತಡಮಾಡದೆ ವೈದ್ಯರನು ಸಂಪರ್ಕಿಸಿ. ಇವೆಲ್ಲದರ ಹೊರತಾಗಿಯೂ, ನೀವು ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ