Weekly Horoscope in  Kannada July 10th to July 16th: ಇಂದಿನಿಂದ ಹೊಸ ವಾರ ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಜುಲೈ 10ರಿಂದ ಜುಲೈ 16ರವರೆಗೆ ಕೆಲವು ರಾಶಿಯವರಿಗೆ ಅದೃಷ್ಟದ ವಾರ ಎಂದು ಬಣ್ಣಿಸಲಾಗುತ್ತಿದ್ದು, ಅವರು ತಮ್ಮ ಪ್ರತಿ ಕೆಲಸದಲ್ಲೂ ಭಾರೀ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ವಾರ ಯಾವ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಯಾವ ರಾಶಿಯವರು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ತಿಳಿಯೋಣ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯವರಿಗೆ ಈ ವಾರ ತುಂಬಾ ಶುಭಕರವಾಗಿರಲಿದೆ. ಈ ರಾಶಿಯವರು ಈ ಸಾಪ್ತಾಹಿಕದಲ್ಲಿ ಮೇಷ ರಾಶಿಯವರು ನಿಮ್ಮ ಕನಸಿನ ಕೆಲಸಗಳನ್ನು ಪೂರ್ಣಗೊಳಿಸುವ ಸದಾವಕಾಶವನ್ನು ಪಡೆಯುವಿರಿ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವರು. ಮಾತ್ರವಲ್ಲ, ಹಿರಿಯ ಮತ್ತು ಕಿರಿಯ ಇಬ್ಬರೂ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಬೆಂಬಲಿಸುತ್ತಾರೆ. ಇದರಿಂದಾಗಿ ಉದ್ಯೋಗಸ್ಥರಿಗೆ ಉತ್ತಮ ಲಾಭವಾಗಲಿದೆ. ಪ್ರಯಾಣವು ಅಪೇಕ್ಷಿತ ಲಾಭವನ್ನು ತರಲಿದೆ. ಹಣಕಾಸಿನ ದೃಷ್ಟಿಯಿಂದಲೂ ಈ ವಾರ ಅತ್ಯುತ್ತಮವಾಗಿದ್ದು, ಐಷಾರಾಮಿ ಜೀವನವನ್ನು ಆನಂದಿಸುವಿರಿ ಎಂದು ಹೇಳಲಾಗುತ್ತಿದೆ. 


ವೃಷಭ ರಾಶಿಯವರ ವಾರ ಭವಿಷ್ಯ: 
ವೃಷಭ ರಾಶಿಯವರಿಗೆ ಈ ವಾರ ನಿಮ್ಮ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ದೀರ್ಘ ಸಮಯದಿಂದ ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಈ ವಾರ ಕೊಂಚ ನಿರಾಳವಾಗಲಿದೆ. ವಾರದ ಆರಂಭದಲ್ಲಿ, ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ಸಂತಸದ ಸುದ್ದಿಗಳನ್ನು ಪಡೆಯುವಿರಿ. ಈ ಸಮಯದಲ್ಲಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದು ನಿಮ್ಮ ವೃತ್ತಿ ಜೀವನದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವಿರಿ. ಈ ಹಿಂದೆ ಯಾವುದೇ ಯೋಜನೆಯಲ್ಲಿ ಮಾಡಿರುವ ಹೂಡಿಕೆಯಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ವಾರದ ದ್ವಿತೀಯಾರ್ಧದಲ್ಲಿ, ನೀವು ನಿಮ್ಮ ಕುಟುಂಬದೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಈ ಸಮಯದಲ್ಲಿ, ಮನೆಗೆ ಆತ್ಮೀಯ ವ್ಯಕ್ತಿಯ ಆಗಮನದಿಂದ ಸಂತೋಷದ ವಾತಾವರಣ ಇರಲಿದೆ. 


ಮಿಥುನ ರಾಶಿಯವರ ವಾರ ಭವಿಷ್ಯ:  
ಈ ವಾರ ಮಿಥುನ ರಾಶಿಯವರಿಗೆ ಓಡಾಟಗಳು ಹೆಚ್ಚಿರುತ್ತದೆ. ಇದು ನಿಮ್ಮ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಈ ವಾರ, ನಿಮ್ಮ ಕೆಲಸದ ಜೊತೆಗೆ, ನಿಮ್ಮ ಆಹಾರ ಮತ್ತು ದಿನಚರಿಯ ಬಗ್ಗೆ ಸಂಪೂರ್ಣ ಗಮನ ಕೊಡಿ. ವಾರದ ಆರಂಭದಲ್ಲಿ, ನೀವು ಇದ್ದಕ್ಕಿದ್ದಂತೆ ಭೂ-ಕಟ್ಟಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು, ಇದಕ್ಕಾಗಿ ನೀವು ಪರಿಹಾರವನ್ನು ಹುಡುಕಲು ಸಾಕಷ್ಟು ಓಡಬೇಕಾಗಬಹುದು. ಕೆಲವರು ನ್ಯಾಯಾಲಯದ ಮೆಟ್ಟಿಲನ್ನು ಕೂಡ ಏರಬೇಕಾಗಬಹುದು. ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ, ವ್ಯಾಪಾರ-ವ್ಯವಹಾರದಲ್ಲಿ ತಲೆದೂರಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಯೋಚಿಸುತ್ತಿದ್ದರೆ ಅಥವಾ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಅದಕ್ಕೂ ಮೊದಲು ಹಿರಿಯರ ಆಶೀರ್ವಾದವನ್ನು ಪಡೆಯಿರಿ. 


ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರು ಈ ವಾರ ತಕ್ಷಣದ ಲಾಭಗಳಿಗೋಸ್ಕರ ಭವಿಷ್ಯದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇರುವುದರಿಂದ ಯೋಚಿಸಿ ಕೆಲಸ ಮಾಡಿ. ನೀವು ಬಯಸಿದಂತೆ ಹಿತೈಷಿಗಳ ಸಹಕಾರ ದೊರೆಯದ ಕಾರಣ ನಿಮ್ಮ ಮನಸ್ಸು ಸ್ವಲ್ಪ ಅಸಮಾಧಾನಗೊಳ್ಳುತ್ತದೆ. ವಾರದ ಆರಂಭದಲ್ಲಿ, ನಿಮ್ಮ ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಈ ವೇಳೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಂಭಾಷಣೆಯ ಮೂಲಕ ಯಾವುದೇ ರೀತಿಯ ತಪ್ಪು ತಿಳುವಳಿಕೆಯನ್ನು ಸರಿಪಡಿಸಲು ಪ್ರಯತ್ನಿಸಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪವು ನಿಮ್ಮ ಪ್ರೇಮ ಸಂಬಂಧದಲ್ಲಿ ಕಹಿಯನ್ನು ಉಂಟುಮಾಡಬಹುದು. ಅಂತಹವರ ಬಗ್ಗೆ ಎಚ್ಚರದಿಂದಿರಿ. 


ಇದನ್ನೂ ಓದಿ- Surya Grahana: ಈ ದಿನ ಸಂಭವಿಸಲಿದೆ ವರ್ಷದ ಎರಡನೇ ಸೂರ್ಯಗ್ರಹಣ, ನಾಲ್ಕು ರಾಶಿಯವರಿಗೆ ಭಾರೀ ನಷ್ಟ


ಸಿಂಹ ರಾಶಿಯವರ ವಾರ ಭವಿಷ್ಯ: 
ಸಿಂಹ ರಾಶಿಯವರು ಈ ವಾರ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ನಿರ್ಧರಿಸಿ. ಇಲ್ಲವೇ ನಷ್ಟವನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ, ಹಿತೈಷಿಗಳ ಸಲಹೆಯನ್ನು ನಿರ್ಲಕ್ಷಿಸಬೇಡಿ. ಸಿಂಹ ರಾಶಿಯ ಜನರು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ನಗುತ್ತಾ ಮತ್ತು ತಮಾಷೆ ಮಾಡುತ್ತಾ ಈ ವಾರದ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಬೇಕು. ಯಾರೊಂದಿಗೂ ನಿಷ್ಟೂರವಾಗಿ ನಡೆಸುಕೊಳ್ಳಬೇಡಿ. ಇದು ನಿಮ್ಮ ಸಂಬಂಧದಲ್ಲಿ ಕಹಿಯನ್ನು ಉಂಟು ಮಾಡಬಹುದು. 
ವಾರದ ಮಧ್ಯದಲ್ಲಿ, ನೀವು ವೃತ್ತಿ-ವ್ಯವಹಾರದಲ್ಲಿ ಅಪೇಕ್ಷಿತ ಪ್ರಗತಿಯನ್ನು ಕಾಣುತ್ತೀರಿ. ಈ ವಾರ ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಪ್ರೀತಿಯ ಸಂಬಂಧದ ವಿಷಯದಲ್ಲಿ ಈ ವಾರ ನಿಮಗೆ ಸಂಪೂರ್ಣವಾಗಿ ಅನುಕೂಲಕರವಾಗಿದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿರುತ್ತದೆ. 


ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈ ವಾರ ಶುಭ ಮತ್ತು ಅದೃಷ್ಟದ ವಾರ ಎಂತಲೇ ಹೇಳಬಹುದು. ಈ ವಾರ, ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ವಾರದ ಆರಂಭದಲ್ಲಿ, ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಸಾಧ್ಯತೆ ಇದ್ದರೂ ಸಹ, ಪ್ರಯಾಣವು ನಿರೀಕ್ಷೆಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಈ ವಾರ ಅದಕ್ಕಾಗಿ ಪ್ರಾಶಸ್ತ್ಯವಾಗಿದೆ. ವಾರದ ಮಧ್ಯದಲ್ಲಿ ಸಾಂಸಾರಿಕ ಸೌಕರ್ಯಗಳು ಹೆಚ್ಚಾಗುವುದು. ಭೂಮಿ, ಕಟ್ಟಡಗಳ ಖರೀದಿ ಮತ್ತು ಮಾರಾಟದ ಕನಸು ನನಸಾಗುವುದು ಕಂಡುಬರುತ್ತದೆ. ನಿಮ್ಮ ಹಣವು ಯಾವುದೇ ಸರ್ಕಾರಿ ಯೋಜನೆ ಅಥವಾ ವ್ಯವಹಾರದಲ್ಲಿ ಸಿಲುಕಿಕೊಂಡರೆ, ಅದು ವಿಶೇಷ ವ್ಯಕ್ತಿಯ ಸಹಾಯದಿಂದ ನಿಮ್ಮ ಕೈ ಸೇರಲಿದೆ. 


ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೂ ಕೂಡ ಈ ವಾರ ಶುಭಕರವಾಗಿರಲಿದೆ. ವಾರದ ಮೊದಲಾರ್ಧದಲ್ಲಿ ನಿಮ್ಮ ಬಹುದಿನದ ಕನಸುಗಳು ನನಸಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ನಿಮ್ಮ ಪರವಾಗಿ ಬರಬಹುದು. ಉದ್ಯೋಗಸ್ಥರಿಗೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಹಿರಿಯರು ಮತ್ತು ಕಿರಿಯರು ಕೆಲಸದ ಸ್ಥಳದಲ್ಲಿ ಸಂಪೂರ್ಣವಾಗಿ ದಯೆ ತೋರುತ್ತಾರೆ. ಈ ವಾರ ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ ಮತ್ತು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನೀವು ಸೌಕರ್ಯ ಮತ್ತು ಐಶ್ವರ್ಯದ ಸಾಧನಗಳನ್ನು ಪಡೆಯುತ್ತೀರಿ. ಆತ್ಮೀಯ ಅಥವಾ ವಿಶೇಷ ವ್ಯಕ್ತಿಯಿಂದ ನೀವು ದೊಡ್ಡ ಉಡುಗೊರೆಯನ್ನು ಪಡೆಯಬಹುದು. ನೆಮ್ಮದಿಯ ವಿಷಯಗಳಿಗೆ ಹಣ ವ್ಯಯವಾಗಲಿದೆ. ವಾರದ ದ್ವಿತೀಯಾರ್ಧದಲ್ಲಿ, ಸಂಬಂಧಿಕರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. 


ವೃಶ್ಚಿಕ ರಾಶಿಯವರ ವಾರ ಭವಿಷ್ಯ: 
ವೃಶ್ಚಿಕ ರಾಶಿಯವರಿಗೆ ಈ ವಾರ ಮಿಶ್ರ ಫಲಗಳನ್ನು ನೀಡಲಿದೆ. ವಾರದ ಆರಂಭದಲ್ಲಿ, ಯಾವುದೇ ಕುಟುಂಬ ಸಂಬಂಧಿತ ಸಮಸ್ಯೆಗಳಿಗೆ ಹೆಚ್ಚಿನ ಕಾಳಜಿ ಬೇಕಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಹಠಾತ್ ಕೆಲಸದ ಹೊರೆ ಹೆಚ್ಚಾಗಬಹುದು. ನೀವು ನಿಮ್ಮ ಎದುರಾಳಿಗಳಿಂದ ತುಂಬಾ ಜಾಗರೂಕರಗಿಬೇಕು. ಉದ್ಯೋಗಸ್ಥ ಮಹಿಳೆಯರಿಗೆ ಮನೆ ಮತ್ತು ಕೆಲಸದ ನಡುವೆ ಸಮತೋಲನವನ್ನು ಸಾಧಿಸಲು ಕಷ್ಟವಾಗಬಹುದು. ವಾರದ ದ್ವಿತೀಯಾರ್ಧದಲ್ಲಿ, ಮಕ್ಕಳ ಕಡೆಯಿಂದ ಸಂತಸದ ಸುದ್ದಿಗಳನ್ನು ಕೇಳಬಹುದು. ಆದಾಗ್ಯೂ, ಈ ವಾರ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅಗತ್ಯವಾಗಿದೆ. 


ಇದನ್ನೂ ಓದಿ- Sun Transit: ಆಗಸ್ಟ್ 17ರವರೆಗೆ ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ


ಧನು ರಾಶಿಯವರ ವಾರ ಭವಿಷ್ಯ: 
ಧನು ರಾಶಿಯವರಿಗೆ ಈ ವಾರ ಕೆಲವು ಚಿಂತೆಗಳಿಂದ ಸುತ್ತುವರಿಯಲಿದೆ. ಈ ವಾರ, ನಿಮ್ಮ ಮಾತು ಮತ್ತು ನಡವಳಿಕೆಯನ್ನು ನೀವು ನಿಯಂತ್ರಿಸಬೇಕು, ಇಲ್ಲದಿದ್ದರೆ ನಿಮ್ಮ ಮಾತು-ನಡವಳಿಕೆಯಿಂದಾಗಿ ಆಗುವ ಕೆಲಸವೂ ಹಾಳಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದಲ್ಲಿ ಹಠಾತ್ ಬದಲಾವಣೆಗಳಾಗಬಹುದು. ಹೆಚ್ಚುವರಿ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಬಹುದು. ಅದನ್ನು ಪೂರೈಸಲು ನಿಮಗೆ ಹೆಚ್ಚುವರಿ ಶ್ರಮ ಅಗತ್ಯೈರುತ್ತದೆ.  ಜೀವನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸವಾಲುಗಳ ನಡುವೆ, ಆಹ್ಲಾದಕರ ಅಂಶವೆಂದರೆ ನಿಮ್ಮ ತೊಂದರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ನಿಮ್ಮ ಸ್ನೇಹಿತರು ಉತ್ತಮ ಸಹಾಯ ಮಾಡುತ್ತಾರೆ. ವಾರದ ಮಧ್ಯದಲ್ಲಿ, ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದಂತೆ  ಪ್ರಯಾಣ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಋತುಮಾನದ ಕಾಯಿಲೆಗಳಿಗೆ ಬಲಿಯಾಗಬಹುದಾದ್ದರಿಂದ ಎಚ್ಚರದಿಂದಿರಿ. 


ಮಕರ ರಾಶಿಯವರ ವಾರ ಭವಿಷ್ಯ: 
ಮಕರ ರಾಶಿಯವರಿಗೆ ಈ ವಾರ ಮಂಗಳಕರವಾಗಿರುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ನಿಮ್ಮ ಚಿಂತೆಗಳಿಂದ ನೀವು ಮುಕ್ತರಾಗಬಹುದು. ಈ ವಾರ ಪೂರ್ತಿ, ನಿಮ್ಮ ಉತ್ತಮ ಸ್ನೇಹಿತರು ಮತ್ತು ಹಿತೈಷಿಗಳ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀವು ಪಡೆಯುತ್ತೀರಿ. ವಾರದ ಆರಂಭದಲ್ಲಿ, ವ್ಯಾಪಾರಸ್ಥರು ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಬೇರೆಡೆ ಸಿಲುಕಿರುವ ಹಣ ದಿಢೀರ್ ಎಂದು ಕೈ ಸೇರುವ ಸಾಧ್ಯತೆ ಇದೆ. ಈ ಸಮಯದಲ್ಲಿ, ಮಾರುಕಟ್ಟೆಯಲ್ಲಿ ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ನಿಮ್ಮ ಆದಾಯದಲ್ಲಿ ನಿರಂತರ ಹೆಚ್ಚಳ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ಆದಾಯದ ಮೂಲಗಳು ಹೆಚ್ಚಾಗಲಿದ್ದು ಕ್ರೋಢೀಕೃತ ಸಂಪತ್ತು ವೃದ್ಧಿಯಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕಾಗಿ ನೀವು ಗೌರವಿಸಲ್ಪಡುತ್ತೀರಿ. ನಿಮ್ಮ ವ್ಯವಹಾರದಲ್ಲಿ ನೀವು ಗಮನಾರ್ಹ ಪ್ರಗತಿ ಮತ್ತು ಲಾಭವನ್ನು ಕಾಣುವಿರಿ. 


ಕುಂಭ ರಾಶಿಯವರ ವಾರ ಭವಿಷ್ಯ: 
ಕುಂಭ ರಾಶಿಯವರಿಗೆ ಈ ವಾರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಆದಾಗ್ಯೂ, ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಇಲ್ಲದಿದ್ದರೆ ಲಾಭದ ಬದಲು ನಷ್ಟವನ್ನು ಎದುರಿಸಬೇಕಾಗುತ್ತದೆ. ವಾರದ ಆರಂಭದಲ್ಲಿ, ಭೂಮಿ ಮತ್ತು ಕಟ್ಟಡಗಳ ಖರೀದಿ ಮತ್ತು ಮಾರಾಟದ ಕನಸು ನನಸಾಗಬಹುದು. ಆದಾಗ್ಯೂ, ಅಂತಹ ಯಾವುದೇ ದೊಡ್ಡ ವ್ಯವಹಾರವನ್ನು ಮಾಡುವಾಗ, ನೀವು ಕಾಗದದ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸ್ಥಾನ, ಪ್ರತಿಷ್ಠೆ ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ವಾರದ ಮಧ್ಯದಲ್ಲಿ ದಿಢೀರನೆ ತೀರ್ಥಯಾತ್ರೆ ಹೋಗುವ ಯೋಗವೂ ಇದೆ. ಕೆಲಸ ಮಾಡುವ ಮಹಿಳೆಯರ ಕೆಲಸದ ಸ್ಥಳ ಮತ್ತು ಮನೆಯೊಳಗೆ ಗೌರವ ಹೆಚ್ಚಾಗುತ್ತದೆ.


ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಈ ವಾರ ಮಿಶ್ರ ಫಲ ದೊರೆಯಲಿದೆ. ಈ ವಾರ, ನಿಮ್ಮ ವೃತ್ತಿ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಅಥವಾ ವಿತ್ತೀಯ ಲಾಭವನ್ನು ಕಾಣದಿದ್ದರೂ ಸಹ, ಯಾವುದೇ ನಷ್ಟವಿಲ್ಲ. ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವವು. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹೋದರರು ಮತ್ತು ಸಹೋದರಿಯರು ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡುತ್ತಾರೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಯೋಚಿಸುತ್ತಿದ್ದರೆ, ಈ ದಿಕ್ಕಿನಲ್ಲಿ ಚಲಿಸುವಾಗ ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಲು ಮರೆಯದಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ತಮ್ಮ ಕಾಗದದ ಕೆಲಸವನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಅವರು ಭವಿಷ್ಯದಲ್ಲಿ ಅನಗತ್ಯವಾಗಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.