Weekly Horoscope: ಈ ವಾರ 3 ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
Weekly Horoscope From September 25th to October 01st: ಸೆಪ್ಟೆಂಬರ್ ಮಾಸದ ಕೊನೆಯ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾವ ರಾಶಿಯವರಿಗೆ ಎಚ್ಚರಿಕೆ ಅಗತ್ಯ ಎಂದು ತಿಳಿಯೋಣ...
Weekly Horoscope in Kannada From September 25th to October 01st: ಸೆಪ್ಟೆಂಬರ್ ತಿಂಗಳ ಕೊನೆಯ ವಾರ ಮತ್ತು ಅಕ್ಟೋಬರ್ ಆರಂಭದ ಈ ವಾರ ಕೆಲವು ರಾಶಿಯವರಿಗೆ ಸವಾಲುಗಳಿಂದ ತುಂಬಿರಲಿದೆ. ಕೆಲವು ರಾಶಿಯವರಿಗೆ ಗೇಮ್ ಚೇಂಜರ್ ಅವಕಾಶಗಳಿದ್ದರೆ, ಇನ್ನೂ ಕೆಲ ರಾಶಿಗಳಿವೆ ಈ ವಾರ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಈ ಸಾಪ್ತಾಹಿಕ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ...
ಮೇಷ ರಾಶಿಯವರ ವಾರ ಭವಿಷ್ಯ:
ಮೇಷ ರಾಶಿಯವರು ಈ ವಾರ ವೈಯಕ್ತಿಕ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಶಾಶ್ವತ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಹೊಸ ಹೊಸ ಅವಕಾಶಗಳು ಹುಡುಕಿ ಬರಲಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲಸದಲ್ಲಿ ಏಕಾಗ್ರತೆ ಅಗತ್ಯವಿದ್ದು, ನಿಮ್ಮ ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಸರಿಯಾದ ದಿಕ್ಕಿನಲ್ಲಿ ಬಳಸಿ, ಆಗಷ್ಟೇ ನಿರೀಕ್ಷಿತ ಯಶಸ್ಸನ್ನು ಗಳಿಸಬಹುದು.
ವೃಷಭ ರಾಶಿಯವರ ವಾರ ಭವಿಷ್ಯ:
ಸೆಪ್ಟೆಂಬರ್ ತಿಂಗಳ ಕೊನೆಯ ವಾರ ವೃಷಭ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ನಿಮ್ಮ ವೈಯಕ್ತಿಕ ಬದುಕಿನಲ್ಲಿ ಜೀವನದಲ್ಲಿ ಸ್ವಲ್ಪ ಬದಲಾವಣೆಗಳನ್ನು ತರುವ ಮೂಲಕ ನೀವು ಆನಂದಮಯ ಜೀವನವನ್ನು ಅನುಭವಿಸಬಹುದು. ಇದು ನಿಮ್ಮ ಜೀವನದ ಹೊಸ ಆರಂಭಕ್ಕೆ ದಾರಿ ಮಾಡುಕೊಡಲಿದ್ದು ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ನೆನಪಿಡಿ, ಯಾವುದನ್ನೂ ಸಾಧಿಸುವುದು ಸುಲಭವಲ್ಲ, ಅಂತೆಯೇ, ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ.
ಮಿಥುನ ರಾಶಿಯವರ ವಾರ ಭವಿಷ್ಯ:
ಮಿಥುನ ರಾಶಿಯವರು ಈ ವಾರ ಆತ್ಮವಿಶ್ವಾಸದಿಂದ ತಮ್ಮ ಕೆಲಸಗಳನ್ನು ಮುಂದುವರೆಸಲಿದ್ದಾರೆ. ನಿಮ್ಮ ಆತ್ಮ ವಿಶ್ವಾಸವೇ ನಿಮಗೆ ದಾರಿ ದೀಪವಾಗಿದ್ದು ಈ ಸಾಪ್ತಾಹಿಕವನ್ನು ಉತ್ತಮವಾಗಿ ನಿಭಾಯಿಸುವಿರಿ. ಮಾತ್ರವಲ್ಲ, ಈ ವಾರ ನಿಜವಾಗಿಯೂ ನಿಮ್ಮ ಬಗ್ಗೆ ಯಾರಿಗೆ ಕಾಳಜಿ ಇದೆ, ಯಾರು ನಿಮ್ಮನ್ನು ಅವರವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ನಿಮಗೆ ಮನವರಿಕೆ ಆಗಲಿದೆ. ಯಶಸ್ವಿ ಜೀವನವನ್ನು ಅನುಭವಿಸಲು ನಿಮ್ಮ ಹಿರಿಯರ, ಪೋಷಕರ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಿ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ:
ಕರ್ಕಾಟಕ ರಾಶಿಯವರು ಈ ವಾರ ಯಾವುದೇ ರೀತಿಯ ಒತ್ತಡವಿಲ್ಲದ ಅದ್ಭುತ ಜೀವನವನ್ನು ಆನಂದಿಸುವಿರಿ. ಈ ವಾರ, ನಿಮ್ಮ ಜೀವನದಲ್ಲಿ ಹೆಚ್ಚು ಮುಖ್ಯವಾದ ಜನರಿಂದ ನೀವು ಪ್ರೀತಿಯನ್ನು ಪಡೆಯುವಿರಿ. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದ್ದು ಕೌಟುಂಬಿಕ ಸಂತೋಷವನ್ನು ವೃದ್ಧ್ಸಲಿದೆ. ಒಡಹುಟ್ಟಿದವರೊಂದಿಗೆ ಆಹ್ಲಾದಕರ ಸಮಯವನ್ನು ಅನುಭವಿಸುವಿರಿ. ವೃತ್ತಿ ಜೀವನದಲ್ಲಿ ನಿಗದಿತ ಸಮಯದಲ್ಲಿ ಕೆಲಸಗಳು ಪೂರ್ಣಗೊಳ್ಳುವುದರಿಂದ ಮನಃ ತೃಪ್ತಿಯನ್ನು ಕಾಣುವಿರಿ.
ಇದನ್ನೂ ಓದಿ- Mangal Asta: ಈ 5 ರಾಶಿಯವರ ಜೀವನದಲ್ಲಿ ಹೆಚ್ಚಾಗಲಿದೆ ಸಮಸ್ಯೆ
ಸಿಂಹ ರಾಶಿಯವರ ವಾರ ಭವಿಷ್ಯ:
ಸಿಂಹ ರಾಶಿಯವರು ಈ ವಾರ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುವ ವಾರ. ಈ ಸಾಪ್ತಾಹಿಕದಲ್ಲಿ ನಿಮ್ಮ ಪ್ರತಿ ಕೆಲಸ ಕಾರ್ಯಗಳಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿದೆ. ಸಣ್ಣ-ಪುಟ್ಟ ಸಮಸ್ಯೆಗಳು ಎದುರಾದರೂ ಎಲ್ಲವನ್ನೂ ಮೆಟ್ಟು ನಿಂತು ಯಶಸ್ಸನ್ನು ಗಳಿಸುವಿರಿ. ಸಾಧ್ಯವಾದಷ್ಟು ನಿಮ್ಮ ಭಾವನೆಗಳನ್ನೂ ವ್ಯಕ್ತಪಡಿಸುವುದರಿಂದ ಮಾನಸಿಕ ಶಾಂತಿ ಸಿಗಲಿದೆ. ನಿಮ್ಮ ವೃತ್ತಿಪರ ಜೀವನ ಬದ್ಧತೆಗಳು, ಜವಾಬ್ದಾರಿಗಳಿಂದ ತುಂಬಿರಲಿದೆ. ಮಕ್ಕಳು ನಿಮ್ಮ ಸಂತೋಷದ ಮೂಲವಾಗಿರಲಿದ್ದಾರೆ.
ಕನ್ಯಾ ರಾಶಿಯವರ ವಾರ ಭವಿಷ್ಯ:
ಕನ್ಯಾ ರಾಶಿಯ ಜನರು ಈ ವಾರ ಹೊಸ ಸಂಪರ್ಕಗಳನ್ನು ಸಾಧಿಸುವರು. ಭವಿಷ್ಯದಲ್ಲಿ ಇದರ ಸಕಾರಾತ್ಮಕ ಪರಿಣಾಮಗಳು ನಿಮಗೆ ಗೋಚರಿಸಲಿವೆ. ಜನರೊಂದಿಗೆ ಅವರ ಕಷ್ಟಕ್ಕೆ ನಿಮ್ಮ ಹೃದಯ ಸದಾ ಮಿಡಿಯುತ್ತದೆ. ಆದರೆ, ನಿಮಗಾಗಿಯೂ ಸ್ವಲ್ಪ ಸಮಯವನ್ನು ಮೀಸಲಿರಿಸಿ. ಆದ್ಯತೆ, ಆವಶ್ಯಕತೆಗಳನ್ನು ಅರಿತು ಮುಂದುವರೆಯುವುದರಿಂದ ಒಳಿತಾಗಲಿದೆ. ಆತ್ಮವಿಶ್ವಾಸದಿಂದ ನಿಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದ ಬಗ್ಗೆ ಗಮನವಿರಲಿ.
ತುಲಾ ರಾಶಿಯವರ ವಾರ ಭವಿಷ್ಯ:
ವೈಯಕ್ತಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಈ ವಾರ ತುಲಾ ರಾಶಿಯವರಿಗೆ ಅತ್ಯುತ್ತಮ ವಾರ ಎಂದು ಸಾಬೀತುಪಡಿಸಲಿದೆ. ನಿಮ್ಮ ಪ್ರಸ್ತುತ ಗುರಿ, ಆಕಾಂಕ್ಷೆಗಳ ಮೇಲೆ ಗಮನ ಕೇಂದ್ರೀಕರಿಸಿ. ಕುಟುಂಬವು ಈಗ ನಿಮ್ಮ ಆದ್ಯತೆಯಾಗಿರಬೇಕು. ನಿಮ್ಮ ಕುಟುಂಬದ ಪ್ರತಿ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ. ಜೀವನದಲ್ಲಿ ಕಳೆದುಹೋದ ಸಮಯ ಎಂದಿಗೂ ಹಿಂದಿರುಗುವುದಿಲ್ಲ. ಇರುವಷ್ಟು ಸಮಯ ಸಂತೋಷದಿಂದ ಇರುವುದನ್ನು ಪರಿಗಣಿಸಿ. ಶೀಘ್ರದಲ್ಲೇ, ನೀವು ಪ್ರೀತಿಸುವವರು ನಿಮ್ಮನ್ನು ಸೇರಲಿದ್ದು ನಿಮ್ಮ ಸಂತೋಷವನ್ನು ಹೆಚ್ಚಿಸಲಿದ್ದಾರೆ.
ವೃಶ್ಚಿಕ ರಾಶಿಯವರ ವಾರ ಭವಿಷ್ಯ:
ವೃಶ್ಚಿಕ ರಾಶಿಯವರು ಈ ವಾರ ವೂರ್ತಿ ಬದುಕಿನಲ್ಲಿ ಭಾರೀ ಯಶಸ್ಸು ಮತ್ತು ಮನ್ನಣೆ ಗಳಿಸಲಿದ್ದಾರೆ. ಅದೃಷ್ಟವು ನಿಮ್ಮ ಜೊತೆಗಿದ್ದು ನಿಮ್ಮ ಶಕ್ತಿ ಸಾಮರ್ಥ್ಯವನ್ನು ಇತರರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ದೊರೆಯಲಿದ್ದು ವೃತ್ತಿ ರಂಗದಲ್ಲಿ ಹೊಸ ಹುದ್ದೆಯನ್ನು ಅಲಂಕರಿಸಲಿದ್ದೀರಿ. ವಾರ ನಿಮ್ಮ ಒಡಹುಟ್ಟಿದವರು ನಿಮ್ಮ ಕಾಲಜಿಯ ಮೂಲವಾಗಿರಬಹುದು. ಈ ವಾರ ನೀವು ಕುಟುಂಬಸ್ಥರು, ಸ್ನೇಹಿತರೊಂದಿಗೆ ಹೆಚ್ಚಿನ ಒಡನಾಟ, ಆಚರಣೆಗಳನ್ನು ಆನಂದಿಸುವಿರಿ.
ಇದನ್ನೂ ಓದಿ- ಬಲಶಾಲಿ ಶನಿಯಿಂದ ಬೆಳಗಲಿದೆ ಈ ರಾಶಿಯವರ ಜೀವನ! 2027ರವರೆಗೆ ಉಜ್ವಲ ಭವಿಷ್ಯ-ಕೋಟ್ಯಾಧಿಪತಿ ಸುಯೋಗ
ಧನು ರಾಶಿಯವರ ವಾರ ಭವಿಷ್ಯ:
ಧನು ರಾಶಿಯವರು ಈ ವಾರ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿರುವಿರಿ. ಈ ಸಂದರ್ಭದಲ್ಲಿ ನೀವು ತಾಳ್ಮೆಯಿಂದ ಮುಂದುವರೆಯುವುದು ತುಂಬಾ ಅವಶ್ಯಕವಾಗಿದ್ದು ನಿಮ್ಮ ನಿಜವಾದ ಮೌಲ್ಯಗಳನ್ನು ಪ್ರಸ್ತುತಪಡಿಸಲು ಸಮಯಕ್ಕಾಗಿ ಕಾಯಬೇಕಾಗುತ್ತದೆ. ನೀವು ಒಳ್ಳೆಯ ಕೆಲಸಗಳನ್ನು ಮಾಡುವುದನ್ನು ಮುಂದುವರೆಸಿ, ಫಲಾಫಲಗಳನ್ನು ದೇವರಿಗೆ ಬಿಡಿ. ನಿಮ್ಮ ಆಸೆಗಳಿಗೆ ಅನುಗುಣವಾಗಿ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ. ಸದಾ ಧನಾತ್ಮಕವಾಗಿ ಯೋಜಿಸಿ, ಇದರಿಂದ ಒಳ್ಳೆಯದೇ ಆಗಲಿದೆ.
ಮಕರ ರಾಶಿಯವರ ವಾರ ಭವಿಷ್ಯ:
ಮಕರ ರಾಶಿಯವರು ಪ್ರಬುದ್ಧ ವ್ಯಕ್ತಿಯಾಗಿ ಬೆಳೆಯಲು ಈ ವಾರ ಸೂಕ್ತ ಸಮಯವಾಗಿದೆ. ನಿಮ್ಮ ವೃತ್ತಿಪರ ಬದುಕಿನಲ್ಲಿ ಕೀರ್ತಿ, ಯಶಸ್ಸನ್ನು ಗಳಿಸಲು ಸೂಕ್ತ ಅವಕಾಶಗಳು ಲಭ್ಯವಾಗಲಿವೆ. ಇದು ದೀರ್ಘಾವಧಿಯಲ್ಲಿ ಭಾರೀ ಯಶಸ್ಸನ್ನು ತರಲಿದೆ. ವೈಯಕ್ತಿಕವಾಗಿ ನೀವು ಕೆಲವು ಅಪಾಯಗಳನ್ನು ಕೈಗೊಳ್ಳಲು ಸಿದ್ಧರಾಗಿದ್ದರೆ ನಿಮ್ಮ ಕುಟುಂಬದವರು, ಅದರಲ್ಲೂ ವಿಶೇಷವಾಗಿ ನಿಮ್ಮ ಒಡಹುಟ್ಟಿದವರು ನಿಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ವೃತ್ತಿಪರ ಬದ್ಧತೆಗಳು ನಿಮ್ಮನ್ನು ಆಕ್ರಮಿಸಿಕೊಳ್ಳಲಿದ್ದು ಇದು ನಿಮಗೆ ಹೊಸ ಎತ್ತರಕ್ಕೆ ಬೆಳೆಯಲು ಮೆಟ್ಟಿಲುಗಳಾಗಿವೆ.
ಕುಂಭ ರಾಶಿಯವರ ವಾರ ಭವಿಷ್ಯ:
ಕುಂಭ ರಾಶಿಯವರಿಗೆ ಇದೊಂದು ಸವಾಲಿನ ವಾರ ಎಂತಲೇ ಹೇಳಬಹುದು. ನೀವು ಎಷ್ಟೇ ಪ್ರಯತ್ನಿಸಿದರೂ ಕಠಿಣ ಪರಿಶ್ರಮ ವಹಿಸಿದರೂ ಕೆಲವು ಕೆಲಸಗಳು ಕೈಗೂಡದೆ ಇರಬಹುದು. ಇದು ನಿಮ್ಮ ನಿರಾಶೆಗೂ ಕಾರಣವಾಗಬಹುದು. ಆದರೆ, ಧೃಢವಾಗಿ, ಆತ್ಮವಿಶ್ವಾಸದಿಂದ ಎಲ್ಲವನ್ನೂ ಎದುರಿಸಿ. ನಿಮ್ಮ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಸಮಸ್ಯೆಗಳಿಂದ ಮುಕ್ತಿ ದೊರೆಯದೇ ಹೋದರೂ ಸಹ ಪರಿಹಾರವನ್ನು ಕಂಡು ಕೊಳ್ಳಬಹುದಾಗಿದೆ. ನಿರುದ್ಯೋಗಿಗಳು ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು.
ಮೀನ ರಾಶಿಯವರ ವಾರ ಭವಿಷ್ಯ:
ಮೀನ ರಾಶಿಯವರೇ ನಿಮ್ಮ ತಾಳ್ಮೆ ಮತ್ತು ನಿಮ್ಮ ಕಠಿಣ ಪರಿಶ್ರಮ ನಿಮಗೆ ಎಂತಹುದೇ ದೊಡ್ಡ ಸವಾಲುಗಳನ್ನು ನಿಭಾಯಿಸುವ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ಯಶಸ್ಸಿಗೂ ಹಾಡಿಯಾಗಲಿದೆ. ಈ ವಾರ ಜೀವನದಲ್ಲಿ ಸರಿಯಾದ ವಿಷಯಗಳ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಮುಖ್ಯವಾಗಿದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸುವ ಮೊದಲು ನಿಮ್ಮ ಹಿರಿಯರೊಂದಿಗೆ ಮಾತುಕತೆ ನಡೆಸಿ ಅವರಿಂದ ಸೂಕ್ತ ಮಾರ್ಗದರ್ಶನ ಪಡೆದು ಮುಂದುವರೆಯಿರಿ. ಇದರಿಂದ ನೀವು ಕೈ ಹಾಕುವ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.