Varabhavishya in Kannada From July 15th to July 21st: ಈ ವಾರ ಗ್ರಹಗಳ ರಾಜ ಸೂರ್ಯದೇವ, ಗ್ರಹಗಳ ರಾಜಕುಮಾರ ಬುಧ ಸೇರಿದಂತೆ ಪ್ರಮುಖ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಪರಿಣಾಮ ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿರಲಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಈ ವಾರ ನಿಮಗೆ ಅತ್ಯುತ್ತಮ ವಾರ. ಈ ವಾರ ಉದ್ಯೋಗ ಕ್ಷೇತ್ರದಲ್ಲಿ ನೀವು ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯವಹಾರಕ್ಕಾಗಿ ಕೈಗೊಂಡ ನಿಮ್ಮ ಎಲ್ಲಾ ಯೋಜನೆಗಳು ಸಹ ಯಶಸ್ವಿಯಾಗುತ್ತವೆ. ಉದ್ಯೋಗಸ್ಥರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳು ಈ ವಾರ ಹೆಚ್ಚಿನ ಪರಿಶ್ರಮದಿಂದ ಯಶಸ್ಸು ಗಳಿಸುವಿರಿ. ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ. ನಿಮ್ಮ ಸಂಗಾತಿಯೊಂದಿಗಿನ ವಿವಾದಗಳು ಬಗೆಹರಿದು ಸಂತೋಷದಾಯಕ ಜೀವನವನ್ನು ಅನುಭವಿಸುವಿರಿ. 


ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಈ ವಾರ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಹಣ ಗಳಿಸಲು ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಉದ್ಯೋಗ ಹುಡುಕಾಟದಲ್ಲಿರುವವರಿಗೆ ನಿಮ್ಮ ಕನಸು ಈಡೇರಲಿದೆ. ಆದಾಗ್ಯೂ, ಈ ವಾರ ನೀವು ಕೆಲವು ನಕಾರಾತ್ಮಕ ಸುದ್ದಿಗಳನ್ನು ಕೇಳಬೇಕಾಗಬಹುದು. ಉದ್ಯೋಗಸ್ಥರು ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವುದರಿಂದ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಕೆಲವು ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಬಾಧಿಸಬಹುದು. ಆದರೆ, ವಾರಾಂತ್ಯದಲ್ಲಿ ಎಲ್ಲವೂ ಸರಿಹೋಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 


ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಈ ವಾರ ನಿಮಗೆ ಒಳ್ಳೆಯ ವಾರ ಎಂದು ಸಾಬೀತುಪಡಿಸಲಿದೆ. ಹಣ ಗಳಿಸಲು ಹಲವು ಅವಕಾಶಗಳನ್ನು ಪಡೆಯುವಿರಿ. ಉದ್ಯೋಗಸ್ಥರು ತಮ್ಮ ಕಾರ್ಯಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ಷಡ್ಯಂತ್ರ ರೂಪಿಸಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳಿಗೆ ಹೊಸ ಕೌಶಲಗಳನ್ನು ಕಲಿಯುವ ಅವಕಾಶ ದೊರೆಯಲಿದೆ.  ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ವಾರಾಂತ್ಯದಲ್ಲಿ ಪ್ರವಾಸ ಕೈಗೊಳ್ಳಬಹುದು. 


ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಈ ವಾರ ನಿಮ್ಮ ಮೇಲೆ ಶನಿಯ ಪ್ರಭಾವ ಕಂಡು ಬರಲಿದೆ. ಯಾರಿಗೂ ಕೇಡು ಮಾಡುವ ಯೋಚನೆ ಬೇಡ. ಇದರಿಂದ ನಿಮ್ಮ ಬದುಕಿನಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಪ್ರತಿಯೊಂದು ಕಾರ್ಯದಲ್ಲೂ ಹೆಚ್ಚಿನ ಶ್ರಮ ವಹಿಸಿದರೆ ಮಾತ್ರ ಯಶಸ್ಸು ಸಿಗುತ್ತದೆ. ನೀವು ಉದ್ಯೋಗಸ್ಥರಾಗಿದ್ದರೆ, ಪ್ರಮುಖ ದಾಖಲೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದ ಹೊರತಾಗಿ ಇತರ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಉತ್ತಮ ಆರೋಗ್ಯವನ್ನು ಅನುಭಿಸುವಿರಿ. 


ಇದನ್ನೂ ಓದಿ- ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ  ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿ 


ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಈ ವಾರ ಕೆಲಸದ ಒತ್ತಡದಿಂದ ಪರಿಹಾರವನ್ನು ಪಡೆಯುವಿರಿ. ವಿಶ್ರಾಂತಿ ಪಡೆಯಲು ಅವಕಾಶಗಳನ್ನು ಪಡೆಯುವಿರಿ. ವೃತ್ತಿಪರರು ಕೆಲಸದ ಸ್ಥಳದಲ್ಲಿ ಉತ್ತಮ ಕೆಲಸ ಮಾಡುತ್ತೀರಿ. ನೀವು ವ್ಯಾಪಾರಸ್ಥರಾಗಿದ್ದರೆ ದೊಡ್ಡ ಆರ್ಡರ್ ಪಡೆಯಬಹುದು. ಈ ವಾರ ನಿರುಪಯುಕ್ತ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ದಾಂಪತ್ಯ ಜೀವನ ಮಧುರವಾಗಿರುತ್ತದೆ. 


ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಉದ್ಯೋಗದ ಹುಡುಕಾಟದಲ್ಲಿದ್ದರೆ ಈ ವಾರ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ನೀವು ಬಯಸಿದ ಉದ್ಯೋಗವನ್ನು ಪಡೆಯುವಿರಿ. ಈ ವಾರ ನೀವು ಮಾಡುವ ಯಾವುದೇ ಯೋಜನೆಗಳಲ್ಲಿ ಯಶಸ್ವಿಯಾಗುತ್ತೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವೂ ದೊರೆಯಲಿದೆ. ವೈವಾಹಿಕ ಸಂಬಂಧಗಳು ಮಧುರವಾಗಿ ಉಳಿಯುತ್ತವೆ. ಈ ಸಮಯದಲ್ಲಿ, ನೀವು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. 


ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ಈ ವಾರ ನಿಮಗೆ ಅತ್ಯುತ್ತಮ ಸಮಯ ಎಂತಲೇ ಹೇಳಬಹುದು. ಇಷ್ಟು ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು, ದಿಢೀರ್ ಧನಲಾಭವಾಗುವುದು. ಉದ್ಯೋಗ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಆದರೂ, ನಿಮ್ಮ ಪ್ರಯತ್ನವನ್ನು ಮುಂದುವರೆಸಿದರೆ ಜಯ. ಹೊಸ ಸಂಬಂಧಗಳಿಂದ ಮನಸ್ಸಿಗೆ ಮುದ ಎಂದೆನಿಸಲಿದೆ. ದಾಂಪತ್ಯ ಜೀವಂದಲ್ಲಿ ಬಿರುಕು ದೂರಾಗಿ ಸಂಬಂಧಗಳು ಸುಧಾರಿಸಲಿದೆ. 


ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ಈ ವಾರ ನಿಮಗೆ ಕಠಿಣ ಪರಿಶ್ರಮದಿಂದ ಕೂಡಿರುತ್ತದೆ. ಆದಾಗ್ಯೂ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಆನಂದಿಸುವಿರಿ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ದೊರೆಯುವುದು. ಉದ್ಯೋಗದಲ್ಲಿ ಸಿಗುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ಹೆಂಡತಿ ಮಕ್ಕಳೊಂದಿಗೆ ಸಾಮರಸ್ಯದ ಜೀವನವನ್ನು ಆನಂದಿಸಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳು ಲಾಭದಾಯಕವಾಗಿರಲಿದೆ. ಆರೋಗ್ಯವು ಸುಧಾರಿಸಲಿದೆ. 


ಇದನ್ನೂ ಓದಿ- Mars Transit 2024: ವೃಷಭದಲ್ಲಿ ಮಂಗಳ ಸಂಕ್ರಮಣ, ಈ ರಾಶಿಯವರಿಗೆ ಭರ್ಜರಿ ಲಾಭ!


ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಈ ವಾರ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸಬೇಕಾಗಬಹುದು. ವ್ಯಾಪಾರದಲ್ಲಿನ ಸಣ್ಣ ಸಮಸ್ಯೆಗಳು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಆದರೆ, ಈ ಬಗ್ಗೆ ಚಿಂತಿಸುವ ಬದಲಿಗೆ ಸಮಸ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡಿ. ಕುಟುಂಬದಲ್ಲಿ ಕೊಂಚ ಭಿನ್ನಾಭಿಪ್ರಾಯಗಳು ನಿಮ್ಮ ನೆಮ್ಮದಿಗೆ ಭಂಗ ತರಬಹುದು. ಸಮಾಜದಲ್ಲಿ ಗೌರವ ಕಡಿಮೆಯಾಗಬಹ್ದು ಆದಾಗ್ಯೂ, ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಸಮಸ್ಯೆಗಳೆಲ್ಲವೂ ಬಗೆಹರೆದು ಒಳ್ಳೆಯ ಸಮಯವನ್ನು ಅನುಭವಿಸುವಿರಿ. ಪ್ರೀತಿಯ ಸಂಬಂಧಗಳಲ್ಲಿ ನಿಮ್ಮ ಸಂಗಾತಿಯ ನಡವಳಿಕೆಯಿಂದ ನೀವು ಸಂತೋಷವಾಗಿರುತ್ತೀರಿ.


ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಈ ವಾರ ನಿಮಗೆ ಮಿಶ್ರ ಫಲಗಳಿಂದ ಕೂಡಿರಲಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಿಸಿಕೊಂಡಿದ್ದರೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗುವಿರಿ. ಯಾವುದೇ ಹೊಸ ಯೋಜನೆಗಳಲ್ಲಿ ಕೈ ಹಾಕುತ್ತಿದ್ದಾರೆ ಯಶಸ್ಸು ನಿಮ್ಮಪಾಳಿಗಿದೆ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವಾಕಿಂಗ್ ಜೊತೆಗೆ ಲಘು ವ್ಯಾಯಾಮಕ್ಕೆ ಪ್ರಾಮುಖ್ಯತೆ ನೀಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂಗಾತಿ ಹಾಗೂ ಮಕ್ಕಳೊಂದಿಗೆ ಸಂತೋಷದಾಯಕ ಸಮಯವನ್ನು ಆನಂದಿಸುವಿರಿ. 


ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಈ ವಾರ ನೀವು ಪ್ರತಿ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡುವಿರಿ, ಇದರಿಂದಾಗಿ ಖಂಡಿತವಾಗಿಯೂ ಯಶಸ್ಸು ನಿಮ್ಮದಾಗಲಿದೆ. ಉದ್ಯೋಗಸ್ಥರಿಗೆ ಇದು ಉತ್ತಮ ಸಮಯ. ಉದ್ಯೋಗಸ್ಥರಿಗೆ ನಿಮ್ಮ ಅಧಿಕಾರಿಗಳನ್ನು ಸಂತೋಷವಾಗಿಡಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರಿಗೆ ಹೊಸ ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತೀರಿ. ವಾರದ ಕೊನೆಯ ಭಾಗದಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಣಬಹುದು. 


ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಈ ರಾಶಿಯ ಉದ್ಯೋಗಸ್ಥರು ಕೆಲವು ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡುವುದನ್ನು ನೆನಪಿನಲ್ಲಿಡಿ. ಅನಗತ್ಯ ಚಿಂತೆಗಳಿಂದ ತೊಂದರೆಗೊಳಗಾಗುವಿರಿ. ಆದರೆ, ಧ್ಯಾನ, ಯೋಗ ಮಾಡುವುದರಿಂದ ಇದರಿಂದ ಹೊರಬರಲು ಸಾಧ್ಯವಾಗುತ್ತದೆ. ಪ್ರೇಮ ಸಂಬಂಧದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ವಿದೇಶ ವ್ಯವಹಾರಗಳಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನದಲ್ಲೂ ಮಧುರತೆ ಇರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.