Weekly Horoscope: ಈ ವಾರ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸಿಗುತ್ತೆ ಕೈ ತುಂಬಾ ಹಣ!
Weekly Horoscope May 15 To 21: 2023ರ ಮೇ ತಿಂಗಳ ಮೂರನೇ ವಾರ ಆರಂಭವಾಗಿದೆ. ಈ ವಾರ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು ಭಾರೀ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಮುಂದಿನ ಏಳು ದಿನಗಳ ಯಾವ ರಾಶಿಯವರಿಗೆ ಒಳ್ಳೆಯ ಸಮಯ ಎಂದು ತಿಳಿಯೋಣ...
Weekly Horoscope From May 15 To 21 May 2023 in kannada: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ ಮಾಸದ ಮೂರನೇ ವಾರ ಕೆಲವು ರಾಶಿಯವರಿಗೆ ತುಂಬಾ ವಿಶೇಷವಾಗಿದೆ. ಈ ವಾರದ ಆರಂಭದಲ್ಲಿ ಮೇ 15ರಂದು ವೃಷಭ ರಾಶಿಗೆ ಗ್ರಹಗಳ ರಾಜ ಸೂರ್ಯ ದೇವನ ಪ್ರವೇಶವಾಗಲಿದೆ. ಇದರೊಂದಿಗೆ ಗ್ರಹಗಳ ರಾಜಕುಮಾರ ಬುಧ ಗ್ರಹದ ಹಿಮ್ಮುಖ ಚಲನೆ ಆರಂಭವಾಗಲಿದೆ. ಈ ಎರಡೂ ಗ್ರಹಗಳ ಬದಲಾವಣೆಯ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ವಾರ ಯಾವೆಲ್ಲಾ ರಾಶಿಗಳಿಗೆ ಶುಭ ಎಂದು ನೋಡುವುದಾದರೆ...
ಮೇಷ ರಾಶಿ:
ಈ ವಾರ ಮೇಷ ರಾಶಿಯವರಿಗೆ ಆತ್ಮ ವಿಶಾಸ ಹೆಚ್ಚಾಗಲಿದ್ದು ಇದರಿಂದ ಯಾವುದೇ ವಿಚಾರದಲ್ಲಿ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಬಹುದು. ನಿಮ್ಮ ಈ ಹೆಜ್ಜೆ ನಿಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಎರಡರಲ್ಲೂ ನಿಮಗೆ ಸುಖ-ಶಾಂತಿಯನ್ನು ನೀಡಲಿದೆ. ಆದಾಗ್ಯೂ, ಮತಾಂಧತೆಯನ್ನು ತಪ್ಪಿಸಿದರಷ್ಟೇ ನೀವು ಮುಂದುವರೆಯಲು ಸಾಧ್ಯ ಎಂಬುದನ್ನೂ ನೆನಪಿನಲ್ಲಿಡಿ.
ಇದನ್ನೂ ಓದಿ- ಇಂದಿನಿಂದ ಈ ರಾಶಿಯವರ ಏಳಿಗೆ ಆರಂಭ ! ತಿಜೋರಿ ತುಂಬುತ್ತಾನೆ ಬುಧ
ಮಿಥುನ ರಾಶಿ:
ಮೇ ಮಾಸದ ಮೂರನೇ ವಾರದ ವಾರ ಭವಿಷ್ಯದ ಪ್ರಕಾರ, ಈ ವಾರ ಮಿಥುನ ರಾಶಿಯವರ ಶಕ್ತಿ ಹೆಚ್ಚಾಗಳಿದ್ದು, ಅವರು ಯಾವುದೇ ಕೆಲಸವನ್ನೂ ಪೂರ್ಣ ಶ್ರಮದಿಂದ ಮಾಡಿ ಮುಗಿಸುತ್ತಾರೆ. ಬಹಳ ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಈ ಸಮಯದಲ್ಲಿ ವೇಗಗೊಳ್ಳಲಿವೆ. ಆದಾಗ್ಯೂ, ಕೆಲಸದ ನಡುವೆ ನಿಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ. ಸಮಯಕ್ಕೆ ವಿಶ್ರಾಂತಿ ಪಡೆಯಿರಿ.
ಕರ್ಕಾಟಕ ರಾಶಿ:
ಈ ವಾರ ಕರ್ಕಾಟಕ ರಾಶಿಯವರಿಗೂ ಕೂಡ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ನಿಮ್ಮ ಮನಸ್ಸಿನ ಮಾತನ್ನು ಆಲಿಸಿ. ಎಂತಹ ಬೆಟ್ಟದಂತಹ ಸಮಸ್ಯೆ ಬಂದರೂ ಮಂಜಿನಂತೆ ಕರಗುತ್ತದೆ. ಉದ್ಯೋಗ ರಂಗದಲ್ಲಿ ಅದೃಷ್ಟ ಚೆನ್ನಾಗಿದ್ದು ವಿತ್ತೀಯ ಪ್ರಯೋಜನಗಳ ಸಾಧ್ಯತೆಯೂ ಇದೆ.
ಸಿಂಹ ರಾಶಿ:
ಈ ವಾರ ಸಿಂಹ ರಾಶಿಯವರು ವೈಯಕ್ತಿಕ ಜೀವನ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಅದೂ ಸಹ ಕೆಲವು ಅನಿರೀಕ್ಷಿತ ಬದಲಾವಣೆಗಳು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು. ಇದು ಸಮಾಜದಲ್ಲಿ ನಿಮ್ಮ ಖ್ಯಾತಿ, ಗೌರವವನ್ನೂ ಹೆಚ್ಚಿಸುತ್ತದೆ.
ಇದನ್ನೂ ಓದಿ- Shani Jayanti 2023: ಈ ರಾಶಿಯವರನ್ನು ಎಂದೂ ಕೈಬಿಡದೆ ಮುನ್ನಡೆಸುತ್ತಾನೆ ಶನಿದೇವ! ಹೋದಲ್ಲೆಲ್ಲಾ ದುಡ್ಡು-ಗೌರವ ಖಚಿತ
ತುಲಾ ರಾಶಿ:
ಈ ವಾರ ಭವಿಷ್ಯದ ಪ್ರಕಾರ, ತುಲಾ ರಾಶಿಯವರ ಜೀವನದಲ್ಲಿ ಅನೇಕ ಧನಾತ್ಮಕ ಘಟನೆಗಳು ಸಂಭವಿಸಬಹುದು. ಇದು ನಿಮ್ಮ ಪ್ರತಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ತರಲಿದ್ದು ಜೀವನದ ನಿಮ್ಮ ಗುರಿಯನ್ನು ಈಡೇರಿಸಲು ಹಾದಿಯನ್ನು ಸುಗಮಗೊಳಿಸಲಿದೆ.
ಧನು ರಾಶಿ:
ಧನು ರಾಶಿಯವರು ಈ ಸಾಪ್ತಾಹದಲ್ಲಿ ಹೊಸ ಹೊಸ ವಿಷಯಗಳನ್ನು ಕಂಡು ಕೊಳ್ಳುವಿರಿ. ನಿಮ್ಮ ಕುತೂಹಲದ ಪ್ರಜ್ಞೆಯೂ ನಿಮ್ಮ ಕೆಲಸದಲ್ಲಿ ನಿಮಗೆ ಅನುಕೂಲವನ್ನು ಮಾದ್ಲೈದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆಯೂ ಇದೆ.
ಮಕರ ರಾಶಿ:
ಈ ವಾರ ಮಕರ ರಾಶಿಯವರು ನಿಮ್ಮ ವೃತ್ತಿ ಜೀವನದಲ್ಲಿ ಸಂಪೂರ್ಣ ಗಮನ ಹರಿಸುವುದರಿಂದ ಯಶಸ್ಸಿನ ಉತ್ತುಂಗವನ್ನು ಏರುವಿರಿ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದೆ. ವ್ಯಾಪಾರಸ್ಥರು ನಿಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಅತ್ಯುತ್ತಮ ಸಮಯ ಇದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ