Weekly Lucky Zodiacs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಡಿಸೆಂಬರ್ ಎರಡನೇ ವಾರವನ್ನು ನಾಲ್ಕು ರಾಶಿಯವರಿಗೆ ಅದೃಷ್ಟದ ವಾರ ಎಂದು ಬಣ್ಣಿಸಲಾಗುತ್ತಿದೆ. ಈ ಸಮಯದಲ್ಲಿ ಅವರು ಕೈ ಹಾಕುವ ಪ್ರತಿ ಕೆಲಸದಲ್ಲೂ ಜಯ ಪ್ರಾಪ್ತಿಯಾಗಲಿದೆ. ಮಾತ್ರವಲ್ಲ, ದೀರ್ಘಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಸಹ ಪೂರ್ಣಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಡಿಸೆಂಬರ್ 11 ರಿಂದ 17 ರವರೆಗೆ ನಾಲ್ಕು ರಾಶಿಯವರಿಗೆ ಈ ವಾರ ಇಷಾರ್ಥ ಸಿದ್ಧಿ, ಕೈತುಂಬಾ ಹಣ :
ಕರ್ಕಾಟಕ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಕರ್ಕಾಟಕ ರಾಶಿಯವರಿಗೆ ಒಳ್ಳೆಯ ಫಲಗಳು ಪ್ರಾಪ್ತಿಯಾಗಳಿವೆ. ಮುಂದಿನ ಏಳು ದಿನಗಳ ಕಾಲ ಕರ್ಕಾಟಕ ರಾಶಿಯವರಿಗೆ ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಯ ಅತ್ಯುತ್ತಮವಾಗಿದ್ದು, ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. ಭೂಮಿ-ವಾಹನ ಖರೀದಿ ಯೋಗವೂ ಇದೆ. 


ಇದನ್ನೂ ಓದಿ- 2024ರಲ್ಲಿ ಕನ್ಯಾ ರಾಶಿಯಲ್ಲಿ ಕೇತು ಸಂಚಾರ: ನಿಮ್ಮ ಮೇಲೆ ಏನು ಪ್ರಭಾವ?


ತುಲಾ ರಾಶಿ: 
ಜ್ಯೋತಿಷ್ಯ ಶಾಸ್ತ್ರದಲ್ಲಿ ತುಲಾ ರಾಶಿಯವರಿಗೂ ಸಹ ಡಿಸೆಂಬರ್ ಎರಡನೇ ವಾರವನ್ನು ಅದೃಷ್ಟದ ವಾರ ಎಂದು ಹೇಳಲಾಗುತ್ತಿದೆ. ಇಷ್ಟು ವರ್ಷಗಳ ನಿಮ್ಮ ಕಠಿಣ ಪರಿಶ್ರಮಕ್ಕೆ ಈ ವಾರ ಪ್ರತಿಫಲದ ಮುನ್ಸೂಚನೆ ಕಂಡು ಬರಲಿದೆ. ಪ್ರೀತಿಯ ಜೀವನವೂ ಸಹ ಮಧುರವಾಗಿರಲಿದೆ. 


ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ಪ್ರಸ್ತಾಪಗಳು ಬರಬಹುದು. ಉದ್ಯೋಗಸ್ಥರು ಕೆಲಸ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ಅತ್ಯುತ್ತಮವಾಗಿದೆ. ಕುಟುಂಬಸ್ಥರೊಂದಿಗೆ ಆನಂದದ ಸಮಯವನ್ನು ಕಳೆಯುವಿರಿ. ಒಟ್ಟಾರೆಯಾಗಿ ಇದು ನಿಮಗೆ ಅದೃಷ್ಟದ ವಾರ. 


ಇದನ್ನೂ ಓದಿ- ಈ ರಾಶಿಯವರಿಗೆ  2024  ಭಾರೀ ಅದೃಷ್ಟ ವರ್ಷ! ಇಡೀ ವರ್ಷ ಹಣಕ್ಕಿರುವುದಿಲ್ಲ ಕೊರತೆ ! ನಿಮ್ಮದಾಗುವುದು ನೆಮ್ಮದಿಯ ಬದುಕು 


ಧನು ರಾಶಿ: 
ಧನು ರಾಶಿಯವರಿಗೂ ಸಹ ಈ ಸಾಪ್ತಾಹಿಕ ಅತ್ಯುತ್ತಮವಾಗಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿದೆ. ನಿಮ್ಮ ಇಷ್ಟಾರ್ಥಗಳೆಲ್ಲಾ ನೆರವೇರಲಿದ್ದು ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.