astrology: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುತ್ತಾರೆ ಹಿರಿಯರು. ಹಾಗಾಗಿ ನಾವು ಎಷ್ಟೇ ಪ್ರಯತ್ನಿಸಿದರೂ ಕೆಲವೊಮ್ಮೆ ಮದುವೆಗಳು ಮುರಿದು ಬೀಳುತ್ತವೆ. ಕೆಲವೊಮ್ಮೆ ಅನಪೇಕ್ಷಿತ ಘಟನೆಗಳೂ ನಡೆಯುತ್ತವೆ. ಮದುವೆಯು ತುಂಬಾ ಮಹತ್ವದ್ದಾಗಿದೆ.. ಹೀಗಾಗಿ ಸೂಕ್ತ ದಿನ ಮತ್ತು ಸಮಯವನ್ನು ನೋಡಿದ ನಂತರ ವಿವಾಹ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಣ್ಣ ತಪ್ಪು ಸಹ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಆದರೆ ಜ್ಯೋತಿಷ್ಯದ ಭಾಗವಾಗಿರುವ ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಮದುವೆ ಮಾಡುವುದು ತುಂಬಾ ಶುಭವಲ್ಲ. ಸಾಮಾನ್ಯವಾಗಿ ನಾವು ಹುಡುಗ ಅಥವಾ ಹುಡುಗಿಯ ಜಾತಕವನ್ನು ನೋಡಿ ದಿನಾಂಕವನ್ನು ಫಿಕ್ಸ್ ಮಾಡುತ್ತೇವೆ, ಆದರೆ ಸಂಖ್ಯೆಗಳ ಪ್ರಕಾರ ದಿನಾಂಕವು ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಹೌದು ಕೆಲವು ನಿಶ್ಚಿತ ದಿನಾಂಕಗಳಲ್ಲಿ ಮದುವೆಯಾದವರು.. ಕಷ್ಟಗಳನ್ನು ಎದುರಿಸುತ್ತಾರೆ ಎನ್ನಲಾಗಿದೆ.


ಇದನ್ನೂ ಓದಿ-Daily GK Quiz: ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ?


4, 13, 22, 31 ರಂದು ಮದುವೆಯಾದವರು ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನಾಂಕಗಳಲ್ಲಿ ಮದುವೆಯಾದವರು ಬಹಳ ಬೇಗ ಅಥವಾ 4 ವರ್ಷಗಳಲ್ಲಿ ಮುರಿದು ಬೀಳುವ ಸಾಧ್ಯತೆಯಿದೆ. ಸಂಬಂಧದಲ್ಲಿ ಪ್ರೀತಿ, ಆಪ್ತತೆ ಇದ್ದರೂ ಕೆಲವೊಂದು ಸಮಸ್ಯೆಗಳಿಂದ ನಮ್ಮ ಸಂಬಂಧ ಹಾಳಾಗುವ ಸಾಧ್ಯತೆ ಇದೆ.


ಇದನ್ನೂ ಓದಿ-Tripura: HIVಗೆ 47 ವಿದ್ಯಾರ್ಥಿಗಳು ಬಲಿ, 828ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್‌!


ಕೆಲವು ವಿದ್ವಾಂಸರು 7 ನೇ ಸ್ಥಾನವು ಉತ್ತಮವಾಗಿಲ್ಲ ಎಂದು ಹೇಳುತ್ತಾರೆ... ಆದ್ದರಿಂದ 7, 16 ಮತ್ತು 25 ರಂದು ಮದುವೆಯಾಗದಿರುವುದು ಉತ್ತಮ. ಈ ದಿನಾಂಕದಂದು ನೀವು ಮದುವೆಯಾದರೆ, ನೀವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು ಸಮಸ್ಯೆ ಬಗೆಹರಿದರೆ ಮತ್ತೊಂದು ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಅಂತಿಮವಾಗಿ ವಿಚ್ಛೇದನಕ್ಕೆ ಕಾರಣವಾಗುತ್ತದೆ.


8, 17, 26, ಈ ದಿನಾಂಕಗಳಲ್ಲಿ ಮದುವೆಯಾಗುವವರು ಬಹಳ ಬೇಗ ವಿಚ್ಛೇದನ ಪಡೆಯುವ ಸಾಧ್ಯತೆಯಿದೆ. ಅದರಲ್ಲೂ ಈ ಇಬ್ಬರ ನಡುವೆ ಮೂರನೇ ವ್ಯಕ್ತಿ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ. ಇಲ್ಲದಿದ್ದರೆ ತಪ್ಪು ತಿಳುವಳಿಕೆ ಉಂಟಾಗಬಹುದು. ಆದ್ದರಿಂದ ದಿನಾಂಕವನ್ನು ಎಚ್ಚರಿಕೆಯಿಂದ ದಿನಾಂಕ ಆರಿಸುವುದು ಮುಖ್ಯವಾಗಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.