ಬೆಂಗಳೂರು : ನಾಳೆ, ಶನಿವಾರ, ಅಕ್ಟೋಬರ್ 14, 2023, 2023 ರ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಅದಲ್ಲದೆ ನಾಳೆಯೂ ಸರ್ವ ಪಿತೃ ಅಮವಾಸ್ಯೆ ಕೂಡಾ. ಈ ಹಿನ್ನೆಲೆಯಲ್ಲಿ ಸೂರ್ಯಗ್ರಹಣದ ಸೂತಕ ಕಾಲ ಯಾವಾಗ ಪ್ರಾರಂಭವಾಗುತ್ತದೆ ? ಸೂರ್ಯ ಗ್ರಹಣವಿದ್ದಾಗ ಪೂರ್ವಜರಿಗೆ ಶ್ರಾದ್ಧ, ತರ್ಪಣ ಇತ್ಯಾದಿ ಕ್ರಮಗಳನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ ಕಾಡುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಅಕ್ಟೋಬರ್ 14ರ ಸೂರ್ಯಗ್ರಹಣವು ಯಾವ ಸಮಯದಲ್ಲಿ ಸಂಭವಿಸುತ್ತದೆ, ಅದರ ಸೂತಕ ಅವಧಿ ಯಾವಾಗ ಮತ್ತು ಪೂರ್ವಜರಿಗೆ  ಪ್ರತಿ ವರ್ಷ ಮಾಡುತ್ತಾ ಬಂದಿರುವ ಕ್ರಮಗಳನ್ನು ಹೇಗೆ ಮಾಡುವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಸೂರ್ಯಗ್ರಹಣದ ಸಮಯ  : 
ನಾಳೆ ಅಂದರೆ ಅಕ್ಟೋಬರ್ 14 ರಂದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 08:34 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಿ ಮಧ್ಯರಾತ್ರಿ 02:25 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ವರ್ಷದ ಕೊನೆಯ ಸೂರ್ಯಗ್ರಹಣದ ಸೂತಕ ಕಾಲ ಕೂಡಾ ಮಾನ್ಯವಾಗಿರುವುದಿಲ್ಲ. ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕಾ, ಅಂಟಾರ್ಟಿಕಾದಲ್ಲಿ ಈ ಸೂರ್ಯಗ್ರಹಣ ಗೋಚರಿಸಲಿದೆ.


ಇದನ್ನೂ ಓದಿ : ಈ ರಾಶಿಯವರ ಜೀವನದಲ್ಲಿ ಧನ ಲಕ್ಷ್ಮೀ ಪ್ರವೇಶ ! ಇನ್ನು ಹಣದ ಮಳೆ ನಿರಂತರ ! ಸೋಲು -ನೋವು ಇಲ್ಲದೆ ಮುನ್ನಡೆಯುವುದು ಜೀವನ


ಸರ್ವ ಪಿತೃ ಅಮವಾಸ್ಯೆ ಆಚರಣೆ ಮಾಡುವುದು ಹೇಗೆ ? : 


ಈ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಸರ್ವ ಪಿತೃ ಅಮಾವಾಸ್ಯೆಯಂದು ಪೂರ್ವಜರಿಗೆ ಮಾಡುವ ಶ್ರಾದ್ಧ, ತರ್ಪಣ ಮೊದಲಾದ ಕರ್ಮಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಅಲ್ಲದೆ, ಅಮವಾಸ್ಯೆಯ ರಾತ್ರಿ ದೀಪ ದಾನ ಮಾಡಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ಯಾವುದೇ ಗೊಂದಲಕ್ಕೆ ಗುರಿಯಾಗದೆ ನಾಳೆ ಅಮಾವಾಸ್ಯೆಯ ಎಲ್ಲಾ ಕರ್ಮಗಳನ್ನು ಪೂರೈಸಬಹುದು. 


ಈ ಕೆಲಸವನ್ನೂ ಮಾಡಿ :  
ನಾಳೆ, ಮುಂಜಾನೆಯೇ ಸ್ನಾನ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕು.  ಇದದಾ ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪೂರ್ವಜರು ತೃಪ್ತರಾಗುತ್ತಾರೆ. ಇದರ ನಂತರ, ನಿಮ್ಮ ಪೂರ್ವಜರೆಲ್ಲರನ್ನು ಸ್ಮರಿಸಿ ಅವರಿಗೆ  ತರ್ಪಣ,, ದಾನ ಮತ್ತು ದೀಪ ದಾನಗಳನ್ನು ಮಾಡಿ. ಕಾರಣಾಂತರಗಳಿಂದ ಈ 16 ದಿನಗಳಲ್ಲಿ ಶ್ರಾದ್ಧವನ್ನು ಮಾಡಲು ಸಾಧ್ಯವಾಗದಿದ್ದರೆ, ಅಮವಾಸ್ಯೆಯಂದು ಈ ಕಾರ್ಯವನ್ನು ಮಾಡಬೇಕಾಗುತ್ತದೆ. ಇದರಿಂದ ಹಿರಿಯರು ಸಂತೃಪ್ತರಾಗುತ್ತಾರೆ ಮಾತ್ರವಲ್ಲ ನಮ್ಮನ್ನು ಹರಸುತ್ತಾರೆ. 


ಇದನ್ನೂ ಓದಿ : ಅಕ್ಟೋಬರ್ 18 ರಿಂದ ಈ 5 ರಾಶಿಗಳ ಗೋಲ್ಡನ್ ಟೈಮ್ ಶುರು, ಹಣ ಸಂಪತ್ತಿನ ಮಳೆ.. ಅದೃಷ್ಟ ಅಂದ್ರೆ ಇದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.