ಬೆಂಗಳೂರು : ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೇವಾಲಯದಲ್ಲಿ ಪ್ರಸಾದ ರೂಪವಾಗಿ ಸಿಗುವ ಹೂವನ್ನು ಕುಬೇರನ ನಿಧಿ ಎಂದೇ ಹೇಳಲಾಗುತ್ತದೆ.   ದೇವಸ್ಥನಾದ ಅರ್ಚಕರು ಪ್ರಸಾದ ರೂಪದಲ್ಲಿ ಹೂವು ನೀಡುತ್ತಾರೆ.ಸಾಮಾನ್ಯವಾಗಿ ದೇವಸ್ಥಾನದಲ್ಲಿ ಹೂವು ನೀಡಿದ ತಕ್ಷಣ ಅದನ್ನು ಮುಡಿಗೆ ಇಟ್ಟುಕೊಳ್ಳುತ್ತೇವೆ. ಪುರುಷರು ಕೂಡಾ ದೇವಸ್ಥಾನದಲ್ಲಿ ಹೂವು ನೀಡಿದ ತಕ್ಷಣ ಅದನ್ನು ತಮ್ಮ ಮನೆಯ ಮಹಿಳೆಯರಿಗೆ ನೀಡುತ್ತಾರೆ.ಆದರೆ, ಇದು ಸರಿಯಾದ ಕ್ರಮ ಅಲ್ಲ ಎನ್ನುತ್ತದೆ ಶಾಸ್ತ್ರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ,ದೇವಸ್ಥಾನದಲ್ಲಿ ಪ್ರಸಾದದ ಜೊತೆಗೆ ಅಥವಾ ಪ್ರಸಾದವಾಗಿ ನೀಡುವ ಹೂವುಗಳನ್ನು ಎಂದಿಗೂ ಎಸೆಯಬಾರದು, ಮುಡಿಯಬಾರದು.   


COMMERCIAL BREAK
SCROLL TO CONTINUE READING

ಶಿವಪುರಾಣದಲ್ಲಿ ದೇವಾಲಯದಲ್ಲಿ ನೀಡುವ ಹೂವುಗಳನ್ನು ಏನು ಮಾಡಬೇಕೆಂದು ವಿವರವಾಗಿ ವಿವರಿಸಲಾಗಿದೆ.ಈ ಹೂವುಗಳನ್ನು ಯಾವ ರೀತಿಯಲ್ಲಿ  ಬಳಸಬಹುದು ಎನ್ನುವುದನ್ನು ಹೇಳಲಾಗಿದೆ. 


ಇದನ್ನೂ ಓದಿ : ನೀವು ಈ ದಿನಾಂಕದಂದು ಜನಿಸಿದವರಾಗಿದ್ದರೆ ನಿಮ್ಮ ವ್ಯಕ್ತಿತ್ವ ಎಂಥದ್ದು ಗೊತ್ತಾ?
ಪ್ರಸಾದದಲ್ಲಿ ಸಿಗುವ ಹೂವುಗಳನ್ನು ಏನು ಮಾಡಬೇಕು : 
ದೇವಸ್ಥಾನದಲ್ಲಿ ಪ್ರಸಾದವಾಗಿ ಸಿಕ್ಕ ಹೂವುಗಳನ್ನು ತೆಗೆದುಕೊಂಡು ಅದಕ್ಕೆ  ಮನಃಪೂರ್ವಕವಾಗಿ ನಮಸ್ಕರಿಸಿ ಕಿವಿ ಪಕ್ಕ ಇಟ್ಟುಕೊಳ್ಳಬೇಕು. ಶಿವಪುರಾಣದ ಪ್ರಕಾರ,ಯಾವುದೇ ವ್ಯಕ್ತಿಯಾದರೂ ದೇವರ ಬಗ್ಗೆ ಕೇಳುವುದು, ತಿಳಿದುಕೊಳ್ಳುವುದು ಕಿವಿ ಮೂಲಕ. ಆ ಬಳಿಕವಷ್ಟೇ ದೇವಾನುದೇವತೆಗಳ ದರ್ಶನಕ್ಕಾಗಿ ದೇವಸ್ಥಾನಕ್ಕೆ ತೆರಳುತ್ತಾರೆ.ಈ ಕಾರಣಕ್ಕಾಗಿಯೇ ಕಿವಿಯ ಮೇಲೆ ಹೂವುಗಳನ್ನು ಇಡುವುದರಿಂದ ದೇವ-ದೇವತೆಗಳ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗಿದೆ. ಧರ್ಮ ಗ್ರಂಥಗಳಲ್ಲಿ ಕಿವಿಗೆ ಹೆಚ್ಚಿನ ಮಹತ್ವವಿದೆ.ಶೃಂಗಾರದ ಸಮಯದಲ್ಲಿಯೂ ಕಿವಿಯ ಆಭರಣಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.ಅದಕ್ಕಾಗಿಯೇ ಕಿವಿಯ ಮೇಲೆ ಹೂವುಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.


ಈ ರೀತಿಯ ಹೂವುಗಳನ್ನು ಬಳಸಿ  :
ದೇವಸ್ಥಾನದಲ್ಲಿ ಸಿಗುವ ಹೂವನ್ನು ಒಣಗಿದ ಮೇಲೆ ನೀರಿನಲ್ಲಿ ಬಿಡಲು ಇಷ್ಟವಿಲ್ಲದೆ  ಇದ್ದರೆ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮತ್ತು ಸುರಕ್ಷಿತವಾಗಿ ಇರಿಸಿ.ಇದರಿಂದ ಸಂಪತ್ತು ಹೆಚ್ಚುತ್ತದೆ.


ಇದನ್ನೂ ಓದಿ : ಈ ರಾಶಿಯವರಿಗೆ ಶುಕ್ರದೆಸೆಯಿಂದ ನನಸಾಗುವುದು ಸ್ವಂತ ಮನೆಯ ಕನಸು !ಅರಸಿ ಬರುವುದು ಹಣ, ಕೀರ್ತಿ ನೆಮ್ಮದಿ ! ಜೊತೆಯಲ್ಲಿಯೇ ಹೆಜ್ಜೆ ಹಾಕುವುದು ಅದೃಷ್ಟ


ಸಸ್ಯದಂತೆ ಬಳಸಿ  :
ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿದ ನಂತರ ಪ್ರಸಾದದಲ್ಲಿ ಸಿಗುವ ಹೂವನ್ನು   ಹೂ ಕುಂಡದಲ್ಲಿ ಹಾಕಬಹುದು.ಇದರಿಂದ ಹೊರ ಅಬ್ರುವ ಸಸ್ಯ ದೇವರ ನೈವೇದ್ಯವಾಗಿ ಮನೆಗೆ ಮಂಗಳಕರವಾಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.