Reason not eat Meat in Shravana : ಶ್ರಾವಣ ಮಾಸದಲ್ಲಿ ಬಹುತೇಕ ಜನರು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಕಾರಣಗಳೂ ಇವೆ ಎಂಬುದು ಹಲವರಿಗೆ ಗೊತ್ತಿಲ್ಲ.. ಸುಮ್ಮನೆ ಅಪ್ಪ-ಅಮ್ಮ ತಿನ್ಬೇಡ ಅಂತ ಹೇಳಿದ್ರೂ ಅಂತ ಮಾಂಸ ಸೇವನೆ ಬಿಟ್ಟಿರುತ್ತಾರೆ.. ಆದ್ರೆ ಇದರ ಹಿಂದೆ ಬೇರೆಯೇ ಕಾರಣವಿದೆ..


COMMERCIAL BREAK
SCROLL TO CONTINUE READING

ಹೌದು.. ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಮಳೆಗಾಲವು ಜಲಚರಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಆದ್ದರಿಂದ, ಈ ಸಮಯದಲ್ಲಿ ಮನುಷ್ಯರು ಮೀನುಗಳನ್ನು ಹಿಡಿದು ತಿಂದರೆ, ಅದು ಜಲಚರಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತದೆ. ಅಷ್ಟೇ ಅಲ್ಲ ಮೀನಿನ ಸಂಖ್ಯೆಯೂ ಕಡಿಮೆಯಾಗುತ್ತದೆ. ಅದರಿಂದಾಗಿ ಸೃಷ್ಟಿಯ ಲಯ ತಪ್ಪುತ್ತದೆ. ಹಾಗಾಗಿ ಈ ಸಮಯದಲ್ಲಿ ಮೀನು ಸೇರಿದಂತೆ ಹೆಚ್ಚಿನ ಮಾಂಸಾಹಾರ ಸೇವಿಸಬೇಡಿ.


ಇದನ್ನೂ ಓದಿ:ರೆಡಿಯಾಯಿತು ಬಿಗ್ ಬಾಸ್ 11ರ ಪ್ರೋಮೋ ! ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರು ಇವರೇ! ಈ ದಿನದಿಂದ ಆಟ ಶುರು


ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗುವ ಸಾಧ್ಯತೆ ಇದೆ. ಆ ನೀರಿನಲ್ಲಿ ವಾಸಿಸುವ ಮೀನುಗಳು ಅಥವಾ ಕಲುಷಿತ ನೀರನ್ನು ಅವಲಂಬಿಸಿರುವ ಅನೇಕ ಪ್ರಾಣಿಗಳು ವಿವಿಧ ನೀರಿನಿಂದ ಹರಡುವ ರೋಗಗಳಿಗೆ ಗುರಿಯಾಗುತ್ತವೆ. ಹಾಗಾಗಿ ಸಸ್ಯಾಹಾರವೇ ರಕ್ಷಣೆಗೆ ಒಳ್ಳೆಯದು ಎನ್ನುತ್ತಾರೆ ಹಿರಿಯರು. 


ಇನ್ನೊಂದು ಪ್ರಮುಖ ಕಾರಣವೆಂದರೆ ಶ್ರಾವಣ ಮಾಸದಲ್ಲಿ ಮಳೆಗಾಲ ಮುಗಿಯದ ಕಾರಣ ಬಿಸಿಲಿನ ಅಭಾವ, ಹೆಚ್ಚು ಬೆಳಕಿರುವುದಿಲ್ಲ. ಇದರಿಂದಾಗಿ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ತುಂಬಾ ವೇಗವಾಗಿ ಆಗುವುದಿಲ್ಲ. ಅಲ್ಲದೆ, ಈ ವೇಳೆ ಮಾಂಸ ತಿಂದರೆ ಸರಿಯಾಗಿ ಜೀರ್ಣಿಸಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ. ಅದಕ್ಕಾಗಿಯೇ ಈ ತಿಂಗಳಲ್ಲಿ ಸಸ್ಯಾಹಾರವನ್ನು ಸೇವಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: 4ನೇ ವಯಸ್ಸಿನಿಂದಲೇ ನಟನೆ.. ಸ್ಟಾರ್ ಹೀರೋಗಳಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ಯಾರು ಗೊತ್ತಾ..?


ಒಟ್ಟಾರೆಯಾಗಿ, ಈ ಅಭ್ಯಾಸವನ್ನು ಪೀಳಿಗೆಯಿಂದ ಪೀಳಿಗೆಗೆ ಅನುಸರಿಸಲಾಗುತ್ತದೆ. ಮಾನವ ದೇಹ ಮತ್ತು ಆರೋಗ್ಯಕ್ಕೆ ಹಾಗೂ ಪ್ರಾಣಿಗಳ - ಪ್ರಕೃತಿಯ ಕಲ್ಯಾಣಕ್ಕೆ ಯಾವುದು ಉತ್ತಮ ಎಂಬುದನ್ನು ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ. ಸಾಧ್ಯವಾದರೆ ಎಲ್ಲರೂ ಇದನ್ನ ಅಳವಡಿಸಿಕೊಳ್ಳೋಣ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.