ಬೆಂಗಳೂರು : ಹಿಂದೂ ಧರ್ಮದಲ್ಲಿ, ಮದುವೆಯ ನಂತರ ಮಹಿಳೆಯರು ಕಾಲುಂಗುರ ಧರಿಸುವುದು ಕಡ್ಡಾಯ. ಮುತ್ತೈದೆ ಶೃಂಗಾರಗಲ್ಲಿ ಕಾಲುಂಗುರ ವೂ ಒಂದು. ಕಾಲುಂಗುರದಲ್ಲಿ ಅನೇಕ ವಿಧಗಳಿವೆ. ಮಾರುಕಟ್ಟೆಯಲ್ಲಿ ಅನೆಅ ಪ್ರಕಾರದ ಕಾಲುಂಗುರ ಲಭ್ಯವಿದೆ. ಮಹಿಳೆಯರು ಸಾಮಾನ್ಯವಾಗಿ ಆಭರಣ ಪ್ರಿಯರೇ. ಹಾಗಾಗಿ ವಿವಿಧ ವಿನ್ಯಾಸದ ಕಾಲುಂಗುರಗಳತ್ತ ಮನ ಸೋಲುತ್ತಾರೆ. ಆದರೆ ಕಾಲುಂಗುರ ಧರಿಸುವುದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಯಮವಿದೆ. ಮಹಿಳೆಯರು ಇಂಥದ್ದೇ ಕಾಲುಂಗುರ ಧರಿಸಬೇಕು ಎನ್ನುತ್ತದೆ ಶಾಸ್ತ್ರ. 


COMMERCIAL BREAK
SCROLL TO CONTINUE READING

ಚಿನ್ನದ ಕಾಲುಂಗುರ :
ಚಿನ್ನ ಎಂದರೆ ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದುದು ಎಂದು ಹೇಳಲಾಗುತ್ತದೆ. ಚಿನ್ನದ ಸಂಬಂಧ ಲಕ್ಷ್ಮೀಯೊಂದಿಗೆ ಕೂಡಾ ಇದೆ. ಹೀಗಾಗಿ ಮಹಿಳೆಯರು ತಮ್ಮ ಪಾದಗಳಿಗೆ ಚಿನ್ನದ ಉಂಗುರಗಳನ್ನು ಧರಿಸಬಾರದು. ಕಾಲ ಬೆರಳಿಗೆ ಚಿನ್ನದ ಉಂಗುರ ಹಾಕಿದರೆ ಲಕ್ಷ್ಮೀದೇವಿ ಮತ್ತು ಭಗವಾನ್ ವಿಷ್ಣುವಿಗೆ ಅವಮಾನ ಮಾಡಿದಂತೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ : ಕೆಲವೇ ಗಂಟೆಗಳಲ್ಲಿ ಬುದ್ಧಿದಾತ ಬುಧನ ವಕ್ರ ನಡೆ ಆರಂಭ, ಧನ ಕುಬೇರ ಕೃಪೆಯಿಂದ ಈ ಜನರಿಗೆ ಐಶ್ವರ್ಯನಿಧಿ ಪ್ರಾಪ್ತಿ!


ಗೆಜ್ಜೆ ಇರುವ ಕಾಲುಂಗುರ : 
ಇನ್ನು ಡಿಸೈನರ್, ಫ್ಯಾಷನ್ ಭರಾಟೆಗೆ ಬಿದ್ದ ಮಹಿಳೆಯರು ವಿಧ ವಿಧದ ಕಾಲುಂಗುರಗಳನ್ನು ಖರೀದಿಸುತ್ತಾರೆ. ಹೀಗೆ ಕಾಲುಂಗುರ ಧರಿಸುವಾಗ ಮಹಿಳೆಯರು ನೆನಪಿಡಬೇಕಾದ ಅಂಶ ಎಂದರೆ ಕಾಲುಂಗುರದಲ್ಲಿ ಎಂಥ ಡಿಸೈನ್ ಇದ್ದರೂ ಪರವಾಗಿಲ್ಲ,ಆದರೆ ಅದರಲ್ಲಿ ಗೆಜ್ಜೆ ಇರಬಾರದು.  ಗೆಜ್ಜೆ ಇರುವ ಕಾಲುಂಗುರದಿಂದ ಹೊರ ಹೊಮ್ಮುವ ಸದ್ದು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವ ನಂಬಿಕೆ ಕೂಡಾ ಇದೆ. 


ಹಣಕಾಸಿನ ಕೊರತೆ :
ವಿವಾಹಿತ ಮಹಿಳೆಯರು ತಮ್ಮ ಕಾಲುಂಗುರವನ್ನು ಯಾರಿಗೂ ನೀಡಬಾರದು. ಸಾಮಾನ್ಯವಾಗಿ, ಹಳೆಯ ಅಥವಾ ಒಂದಕ್ಕಿಂತ ಹೆಚ್ಚು ಕಾಲುಂಗುರ ಇದ್ದಾಗ, ಮಹಿಳೆಯರು ತಮ್ಮ ಕಾಲುಂಗುರ ಇತರರಿಗೆ ಬಳಸಾಲು ನೀಡುತ್ತಾರೆ. ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಮನೆಯಲ್ಲಿ ಕೊರತೆ ಉಂಟಾಗಿ ಸುಖ-ಸಮೃದ್ಧಿ ದೂರವಾಗುತ್ತದೆ.


ಇದನ್ನೂ ಓದಿ : ಐನೂರು ವರ್ಷಗಳ ಬಳಿಕ ಮೂರು ರಾಶಿಗಳ ಗೋಚರ ಜಾತಕದಲ್ಲಿ ನಾಲ್ಕು ರಾಜಯೋಗಗಳ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯೋಗ!


ತುಂಡಾದ ಕಾಲುಂಗುರ :
ಕಾಲುಂಗುರ ಮುರಿದಿದ್ದರೆ, ಅದನ್ನು ತೆಗೆದುಬಿಡಬೇಕು. ಕಾಲುಂಗುರ ಧರಿಸಲೇ ಬೇಕು ಎನ್ನುವ ಕಾರಣಕ್ಕೆ ತುಂಡಾದ ಕಾಲುಂಗುರವನ್ನು ಧರಿಸಬಾರದು. ಮುರಿದ ಕಾಲುಂಗುರ ಗಂಡನಿಗೆ ದುರದೃಷ್ಟವನ್ನು ತರುತ್ತವೆ. ಇದು ಅವರ ವೃತ್ತಿಜೀವನದ ಮೇಲೆ ನೇರ ಪರಿಣಾಮ ಬೀರಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ