ಬೆಂಗಳೂರು : ಹಿಂದೂ ಧರ್ಮದಲ್ಲಿ, ತಲೆಗೆ ಸ್ನಾನ ಮಾಡುವುದಕ್ಕೂ ಶುಭ ದಿನಗಳನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಕೆಲವೊಂದು ದಿನಗಳಲ್ಲಿ ಮಾತ್ರ ತಲೆ ಸ್ನಾನ ಮಾಡಬೇಕು. ಯಾವಾಗ ಬೇಕೋ ಆಗ ತಲೆ ಸ್ನಾನ ಮಾಡುವುದರಿಂದಲೂ ಅಂಟಿಕೊಳ್ಳುತ್ತದೆಯಂತೆ ದಾರಿದ್ರ್ಯ.  ಇದರಲ್ಲಿಯೂ ಮಹಿಳೆಯರ ವಿಷಯದಲ್ಲಿ ಬೇರೆ ಬೇರೆ ನಿಯಮಗಳನ್ನು ಸೂಚಿಸಲಾಗಿದೆ. ಅಂದರೆ, ಅವಿವಾಹಿತ ಹುಡುಗಿಯರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರತ್ಯೇಕವಾಗಿ ನೀತಿ ನಿಯಮಗಳನ್ನು ಹೇಳಲಾಗಿದೆ. ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಹೇಳಲಾದ ನಿಯಮಗಳ ಪ್ರಕಾರ ತಲೆ ಸ್ನಾನ ಮಾಡಿದಾಗ ಅಥವಾ ಕೂದಲು ತೊಳೆದಾಗ ವ್ಯಕ್ತಿಯ ಸೌಂದರ್ಯವು ಹೆಚ್ಚಾಗುತ್ತದೆ. ಇದರೊಂದಿಗೆ ಮನೆಯಲ್ಲಿ ಸಂಪತ್ತು ಕೂಡಾ ಹೆಚ್ಚುತ್ತದೆ.  ಆದರೆ ತಪ್ಪಾದ ದಿನ ಅಥವಾ ಅಶುಭ ದಿನದಂದು  ತಲೆ ಸ್ನಾನ ಮಾಡುವುದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. 


COMMERCIAL BREAK
SCROLL TO CONTINUE READING

ವಾರದ ಯಾವ ದಿನದಂದು ಕೂದಲು ತೊಳೆಯುವುದರಿಂದ ಯಾವ ಪರಿಣಾಮ ? : 


ಸೋಮವಾರ: ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರ  ತಲೆ ಸ್ನಾನ ಮಾಡಬಾರದು. ಇದು ಕುಟುಂಬದ ಪ್ರಗತಿಯಲ್ಲಿ ಅಡಚಣೆ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಅವಿವಾಹಿತ ಹುಡುಗಿಯರು ಈ ದಿನ ತಮ್ಮ ಕೂದಲನ್ನು ತೊಳೆಯಬಹುದು. 


ಮಂಗಳವಾರ : ವಿವಾಹಿತ ಮಹಿಳೆಯರಿಗೆ ಮಂಗಳವಾರವೂ ತಲೆ ಸ್ನಾನ ನಿಷಿದ್ದ. ಈ ದಿನ ಕೂದಲು ತೊಳೆಯುವುದೆಂದರೆ ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ.  ಅವಿವಾಹಿತ ಹುಡುಗಿಯರು ಕೂಡಾ ಮಂಗಳವಾರದಂದು ತಮ್ಮ ಕೂದಲನ್ನು ತೊಳೆಯಬಾರದು. 


ಇದನ್ನೂ ಓದಿ : ಈ ವಸ್ತುವನ್ನು ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಮಲಗಿರುವ ಅದೃಷ್ಟವೂ ಎಚ್ಚರಗೊಳ್ಳುತ್ತೆ!


ಬುಧವಾರ : ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಹುಡುಗಿಯರು ಅಥವಾ ಪುರುಷರು ಬುಧವಾರ ತಲೆ ಸ್ನಾನ ಮಾಡಬಹುದು. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ವ್ಯಾಪಾರ ಬೆಳೆಯುತ್ತದೆ. 


ಗುರುವಾರ :  ಗುರುವಾರ ಯಾರೂ ತಲೆಗೆ ಸ್ನಾನ ಮಾಡಲೇಬಾರದು ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಈ ದಿನ ಕೂದಲು ತೊಳೆಯುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ ಆರ್ಥಿಕ ಮುಗ್ಗಟ್ಟು ಕೂಡಾ ಎದುರಿಸಬೇಕಾಗುತ್ತದೆಯಂತೆ. 


ಶುಕ್ರವಾರ : ಶುಕ್ರವಾರದಂದು ತಲೆ ಸ್ನಾನ ಮಾಡುವುದು ಅತ್ಯಂತ  ಮಂಗಳಕರವಾಗಿದೆ.  ಶುಕ್ರವಾರ ತಲೆ ಸ್ನಾನ ಮಾಡುವುದರಿಂದ ಲಕ್ಷ್ಮೀ ದೇವಿ ಮತ್ತು ಮತ್ತು ಶುಕ್ರ ದೇವನ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಶುಕ್ರವಾರದಂದು ಕೂದಲು ತೊಳೆಯುವುದರಿಂದ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ ಎಂದು ಕೂಡಾ ಹೇಳಲಾಗುತ್ತದೆ. 


ಇದನ್ನೂ ಓದಿ : ಕೋಟಿಗಳ ಒಡೆಯರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು! ಅದೃಷ್ಟ ಇವರನ್ನು ಬಿಡದೇ ಕಾಪಾಡುತ್ತದೆ !


ಶನಿವಾರ : ಶನಿವಾರದಂದು ಕೂಡಾ ಮಹಿಳೆಯರು ಕೂದಲು ತೊಳೆಯಬಾರದು ಎನ್ನುವ ನಂಬಿಕೆ ಇದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಶನಿವಾರದಂದು ಕೂದಲನ್ನು ತೊಳೆಯಲೇಬಾರದು. ಇದರಿಂದ ಶನಿದೇವನ ಕೋಪಕ್ಕೆ ಕಾರಣವಾಗುತ್ತದೆ  ಎಂದು ಹೇಳಲಾಗುತ್ತದೆ. 


ಭಾನುವಾರ : ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನವರು ತಲೆ ಸ್ನಾನಕ್ಕೆ ಮುಂದಾಗುತ್ತಾರೆ. ಆದರೆ ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ. 


ಇದಲ್ಲದೆ, ವಿವಾಹಿತ ಮಹಿಳೆಯರು ಅಮವಾಸ್ಯೆ, ಹುಣ್ಣಿಮೆ ಮತ್ತು ಏಕಾದಶಿಯ ದಿನವೂ ತಮ್ಮ ಕೂದಲನ್ನು ತೊಳೆಯಬಾರದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ