ಮಹಿಳೆಯರು ಇಂಥಹ ಕಾಲುಂಗುರ ಹಾಕಬಾರದು, ಮುನಿಸಿಕೊಳ್ಳುತ್ತಾಳೆ ಧನಲಕ್ಷ್ಮೀ
ಜ್ಯೋತಿಷ್ಯದಲ್ಲಿ, ಕಾಲುಂಗುರಗಳನ್ನು ಧರಿಸುವುದರ ಬಗ್ಗೆ ನಿಯಮಗಳನ್ನು ಹೇಳಲಾಗಿದೆ. ಇದರ ಪ್ರಕಾರ, ಕೆಲವು ರೀತಿಯ ಉಂಗುರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಬೆಂಗಳೂರು : ಹಿಂದೂ ಧರ್ಮದಲ್ಲಿ, ಮದುವೆಯ ನಂತರ ಮಹಿಳೆಯರು ಕಾಲುಂಗುರ ಧರಿಸುವುದು ಕಡ್ಡಾಯವಾಗಿದೆ. ಕಾಲುಂಗರ ಮುತ್ತೈದೆ ಶೃಂಗಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯ ವಿನ್ಯಾಸಗಳ ಕಾಲುಂಗುರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಹಿಳೆಯರು ಸಹ ಆಕರ್ಷಕವಾಗಿ ಕಾಣಲು ಅವುಗಳನ್ನು ಧರಿಸುತ್ತಾರೆ. ಆದರೆ, ಜ್ಯೋತಿಷ್ಯದಲ್ಲಿ, ಕಾಲುಂಗುರಗಳನ್ನು ಧರಿಸುವುದರ ಬಗ್ಗೆ ನಿಯಮಗಳನ್ನು ಹೇಳಲಾಗಿದೆ. ಇದರ ಪ್ರಕಾರ, ಕೆಲವು ರೀತಿಯ ಉಂಗುರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಚಿನ್ನದ ಕಾಲುಂಗುರ :
ಚಿನ್ನವನ್ನು ವಿಷ್ಣುವಿನ ಅಚ್ಚುಮೆಚ್ಚಿನ ಲೋಹವೆಂದು ಪರಿಗಣಿಸಲಾಗಿದೆ. ಚಿನ್ನದ ಸಂಬಂಧ ಲಕ್ಷ್ಮೀಯೊಂದಿಗೆ ಕೂಡಾ ಇದೆ. ಹೀಗಾಗಿ ಮಹಿಳೆಯರು ತಮ್ಮ ಪಾದಗಳಿಗೆ ಚಿನ್ನದ ಉಂಗುರಗಳನ್ನು ಧರಿಸಬಾರದು. ಇದು ತಾಯಿ ಲಕ್ಷ್ಮೀ ಮತ್ತು ಭಗವಾನ್ ವಿಷ್ಣುವಿಗೆ ಮಾಡುವ ಅವಮಾನ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ : ಗೌರಿ ಹಬ್ಬ 2023 ದಿನಾಂಕ, ಪೂಜೆ ಸಮಯ, ಮಹತ್ವ ಇಲ್ಲಿದೆ ನೋಡಿ
ಗೆಜ್ಜೆ ಇರುವ ಕಾಲುಂಗುರ :
ವಿವಾಹಿತ ಮಹಿಳೆಯರು ಡಿಸೈನರ್ ಭರಾಟೆಯಲ್ಲಿ ವಿಧ ವಿಧದ ಕಾಲುಂಗುರಗಳನ್ನೂ ಧರಿಸುತ್ತಾರೆ. ಕಾಲುಂಗುರದಲ್ಲಿ ಎಂಥ ಡಿಸೈನ್ ಇದ್ದರೂ ಪರವಾಗಿಲ್ಲ, ಆದರೆ ಅದರಲ್ಲಿ ಗೆಜ್ಜೆ ಇರಬಾರದು. ಗೆಜ್ಜೆ ಇರುವ ಕಾಲುಂಗುರದಿಂದ ಹೊರ ಬರುವ ಸದ್ದು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುವುದು ಕೂಡಾ ನಂಬಿಕೆ.
ಹಣಕಾಸಿನ ಕೊರತೆ :
ವಿವಾಹಿತ ಮಹಿಳೆಯರು ತಮ್ಮ ಕಾಲುಂಗುರವನ್ನು ಯಾರಿಗೂ ನೀಡಬಾರದು. ಸಾಮಾನ್ಯವಾಗಿ, ಹಳೆಯ ಅಥವಾ ಒಂದಕ್ಕಿಂತ ಹೆಚ್ಚು ಕಾಲುಂಗುರ ಇದ್ದಾಗ, ಮಹಿಳೆಯರು ತಮ್ಮ ಕಾಲುಂಗುರ ಇತರರಿಗೆ ಬಳಸಾಲು ನೀಡುತ್ತಾರೆ. ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಮನೆಯಲ್ಲಿ ಕೊರತೆ ಉಂಟಾಗಿ ಸುಖ-ಸಮೃದ್ಧಿ ದೂರವಾಗುತ್ತದೆ.
ಇದನ್ನೂ ಓದಿ : ಯಾರೇ ಮೋಸ ಮಾಡಿದ್ರೂ ಈ ರಾಶಿಯವರಿಗೆ ಆಂಜನೇಯ ಮೋಸ ಮಾಡಲ್ಲ: ಅದೃಷ್ಟ ಬೆಳಗಿ ಕೋಟ್ಯಾಧಿಪತಿ ಯೋಗವನ್ನೇ ಕರುಣಿಸುವ ಅಂಜನಿಪುತ್ರ
ತುಂಡಾದ ಕಾಲುಂಗುರ :
ಕಾಲುಂಗುರ ಮುರಿದಿದ್ದರೆ, ಅದನ್ನು ತೆಗೆದುಬಿಡಬೇಕು. ಬಲವಂತವಾಗಿ ಧರಿಸಬಾರದು. ಮುರಿದ ಕಾಲುಂಗುರ ಗಂಡನಿಗೆ ದುರದೃಷ್ಟವನ್ನು ತರುತ್ತವೆ. ಇದು ಅವರ ವೃತ್ತಿಜೀವನದ ಮೇಲೆ ನೇರ ಪರಿಣಾಮ ಬೀರಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ