Surya Grahan 2022: ದೀಪಾವಳಿಯ ಮರುದಿನವೇ ವರ್ಷದ ಕೊನೆಯ ಸೂರ್ಯಗ್ರಹಣ, ಈ ರಾಶಿಯವರು ಜಾಗರೂಕರಾಗಿರಿ
Surya Grahan 2022: ಈ ವರ್ಷ ದೀಪಗಳ ಹಬ್ಬ ದೀಪಾವಳಿಯ ಮರುದಿನ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವು ನಾಲ್ಕು ರಾಶಿಯವರಿಗೆ ಅಶುಭ ಫಲಗಳನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಸೂರ್ಯ ಗ್ರಹಣ 2022: ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಅಕ್ಟೋಬರ್ 24 ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಮರುದಿನ ಅಂದರೆ ಅಕ್ಟೋಬರ್ 25 ರಂದು ಗೋವರ್ಧನ ಪೂಜೆ ನಡೆಯಲಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣ ಸಹ ಅದೇ ದಿನ ಸಂಭವಿಸುತ್ತದೆ. ಈ ಗ್ರಹಣದ ಸಮಯದಲ್ಲಿ, ಸೂರ್ಯನು ತುಲಾ ರಾಶಿಯಲ್ಲಿ ಇರಲಿದ್ದಾರೆ. ಸಾಮಾನ್ಯವಾಗಿ ಗ್ರಹಣಗಳನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಗ್ರಹಣಗಳು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಈ ಬಾರಿ ನೀಡಲಿದೆ, ಹಾಗಾಗಿ ಆ ರಾಶಿಯವರು ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತದೆ. ಆ 4 ರಾಶಿಗಳು ಯಾವುವು ಎಂದು ತಿಳಿಯೋಣ...
ಸೂರ್ಯಗ್ರಹಣದ ಸಂದರ್ಭದಲ್ಲಿ ಈ ರಾಶಿಯವರು ಜಾಗರೂಕರಾಗಿರಬೇಕು:
ವೃಷಭ ರಾಶಿ:
ಸೂರ್ಯ ಗ್ರಹಣದ ಪರಿಣಾಮದಿಂದಾಗಿ ವೃಷಭ ರಾಶಿಯವರು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಗ್ರಹಣದ ಸಮಯದಲ್ಲಿ ಎಲ್ಲಿಯೂ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಮಿಥುನ ರಾಶಿ:
ಗ್ರಹಣದ ಸಮಯದಲ್ಲಿ ನಿಮಗೆ ಯಾವುದೇ ಪ್ರಮುಖ ಕೆಲಸಗಳಿಗೆ ಅಡ್ಡಿಯಾಗಬಹುದು. ವೈವಾಹಿಕ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಬಹುದು. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಇಲ್ಲವೇ, ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ.
ಇದನ್ನೂ ಓದಿ- ದೀಪಾವಳಿ ಲಕ್ಷ್ಮೀ ಪೂಜೆಯಂದೇ ಗೋಚರಿಸಲಿದೆ ಸೂರ್ಯ ಗ್ರಹಣ, ಹಾಗಿದ್ದರೆ ಪೂಜೆಯ ಮುಹೂರ್ತ ಯಾವಾಗ ?
ಕನ್ಯಾ ರಾಶಿ:
ಸೂರ್ಯಗ್ರಹಣದ ಸಮಯದಲ್ಲಿ ನಿಮ್ಮ ವ್ಯಾಪಾರ ನಿಧಾನವಾಗಬಹುದು. ಯಾವುದೇ ರೀತಿಯ ಕೆಲಸಗಳನ್ನು ಆರಂಭಿಸಲು ಇದು ಸೂಕ್ತ ಸಮಯವಲ್ಲ. ಇಲ್ಲವೇ, ನೀವು ನಷ್ಟವನ್ನು ಎದುರಿಸಬೇಕಾಗಬಹುದು. ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ ರಾಶಿ:
ತುಲಾ ರಾಶಿಯವರಿಗೂ ಸಹ ಸೂರ್ಯಗ್ರಹಣ ಅಶುಭಕರವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಅನುಸರಿಸಿ. ಇಲ್ಲವೇ, ತೊಂದರೆ ಆಗಬಹುದು.
ಇದನ್ನೂ ಓದಿ- 59 ವರ್ಷಗಳ ಬಳಿಕ ನಾಳೆ ಒಟ್ಟಿಗೆ ರೂಪುಗೊಳ್ಳಲಿದೆ 5 ರಾಜಯೋಗ, ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ
ಸೂರ್ಯಗ್ರಹಣದ ಸೂತಕ ಅವಧಿ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂತಕ ಅವಧಿಯು ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಆರಂಭವಾಗುತ್ತದೆ. ಈ ಬಾರಿಯ ಸೂರ್ಯಗ್ರಹಣವು ಅಕ್ಟೋಬರ್ 25 ರಂದು ಮಧ್ಯಾಹ್ನ 2:29 ಕ್ಕೆ ಪ್ರಾರಂಭವಾಗಲಿದೆ. ಆದ್ದರಿಂದ, ಅಕ್ಟೋಬರ್ 24 ರ ದೀಪಾವಳಿಯ ರಾತ್ರಿ 2.30 ರಿಂದ ಸೂತಕ ಅವಧಿಯು ಪ್ರಾರಂಭವಾಗುತ್ತದೆ. ಈ ಬಾರಿಯ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಈ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.