ಧರ್ಮದ ಹೇಳಿದಂತೆ ಬದುಕಲು 18ರ ಹರೆಯದಲ್ಲೇ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಬ್ಯಾಟರ್!
Ayesha Naseem Cricket Retirement: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಅತ್ಯುತ್ತಮ ಹಿಟ್ಟರ್ಗಳಲ್ಲಿ ಆಯೇಷಾ ನಸೀಮ್ ಹೆಸರನ್ನು ಪರಿಗಣಿಸಲಾಗಿದೆ, ಆದರೆ ಇನ್ಮುಂದೆ ಈ ಆಟಗಾರ್ತಿ ಮೈದಾನದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ.
Ayesha Naseem Cricket Retirement: ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಆಯೇಶಾ ನಸೀಮ್ ಕ್ರಿಕೆಟ್ ಲೋಕ್ಕೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಕೇವಲ 18 ವರ್ಷ ವಯಸ್ಸಿನ ಆಯೇಶಾ ನಸೀಮ್ ಇಸ್ಲಾಂ ಧರ್ಮದ ಕಾರಣಕ್ಕೆ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ! ರಿಕಿ ಪಾಂಟಿಂಗ್ ನ ಈ ಬೃಹತ್ ದಾಖಲೆ ಮುರಿದ ರೋಹಿತ್ ಶರ್ಮಾ
“ನಾನು ಇಸ್ಲಾಂ ಧರ್ಮದ ಪ್ರಕಾರ ತನ್ನ ಜೀವನವನ್ನು ನಡೆಸಲು ಬಯಸುತ್ತೇನೆ. ಇದರಿಂದಾಗಿ ನಾನು ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದೆ” ಎಂದು ಆಯೇಶಾ ನಸೀಮ್ ಹೇಳಿದ್ದಾರೆ. ಆಯೇಶಾ ನಸೀಮ್ ಪಾಕಿಸ್ತಾನದ ಪರ 4 ODI ಮತ್ತು 30 T20 ಪಂದ್ಯಗಳನ್ನು ಆಡಿದ್ದಾರೆ.
ಬುಮ್ರಾ, ಶಮಿಗಿಂತಲೂ ಅಪಾಯಕಾರಿ ಬೌಲರ್ ಟೀಂ ಇಂಡಿಯಾಗೆ ಎಂಟ್ರಿ ! ಬಡತನದಲ್ಲೇ ಬೆಳೆದು ಬಂದ ಪ್ರತಿಭೆ
ಆಯೇಶಾ ನಸೀಮ್ ಅವರ T20 ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಈ ಆಟಗಾರ್ತಿ 30 T20 ಪಂದ್ಯಗಳಲ್ಲಿ 369 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಆಯೇಷಾ ನಸೀಮ್ ಅವರ ಸರಾಸರಿ 18.45 ಆಗಿದ್ದರೆ, ಸ್ಟ್ರೈಕ್ ರೇಟ್ 128.12 ಆಗಿತ್ತು. ಟಿ20 ಮಾದರಿಯಲ್ಲಿ ಆಯೇಷಾ ನಸೀಮ್ ಅವರ ಗರಿಷ್ಠ ಸ್ಕೋರ್ 45 (ಔಟಾಗದೆ. ಏಕದಿನದಲ್ಲಿ 2 ಮತ್ತು ಟಿ20 ಪಂದ್ಯಗಳಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.