Ashes Series, ENG vs AUS 2nd Test Playing 11: ಕೆಲವೊಮ್ಮೆ ಬಲವಂತದ ಕಾರಣ, ಕೆಲವೊಮ್ಮೆ ಸಂದರ್ಭಗಳಿಂದಾಗಿ ತಂಡದಲ್ಲಿ ಕೊನೆ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನಾಯಕ ಮತ್ತು ತಂಡದ ಮ್ಯಾನೇಜ್ಮೆಂಟ್, ಸಮಾಲೋಚನೆಯ ನಂತರ, ತಂಡಕ್ಕೆ ಆಟಗಾರನನ್ನು ಸೇರಿಸಿಕೊಳ್ಳುತ್ತಾರೆ ಅಥವಾ ಹೊರಗಿಡುತ್ತಾರೆ. ಇದೀಗ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲೂ ಅಂತಹದ್ದೇ ಒಂದು ಪರಿಸ್ಥಿತಿ ಎದುರಾಗಿದ್ದು, ಕೊನೆಯ ಕ್ಷಣದಲ್ಲಿ ತಂಡವನ್ನು ಬದಲಾಯಿಸಬೇಕಾಗಿ ಬಂದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಈ 2 ಪಂದ್ಯಗಳನ್ನು ಆಡಲೇಬೇಕು ಟೀಂ ಇಂಡಿಯಾ! ಯಾವ ಆಟ? ವೇಳಾಪಟ್ಟಿ ಹೀಗಿದೆ


ಬುಧವಾರದಂದು ನಡೆದ ಎರಡನೇ ಆಶಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಎಡ್ಜ್‌ ಬಾಸ್ಟನ್‌ ನಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 2 ವಿಕೆಟ್‌ ಗಳಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ ಕಳೆದ ಪಂದ್ಯದ ಪ್ಲೇಯಿಂಗ್-11 ರಲ್ಲಿ ಬದಲಾವಣೆಯನ್ನು ಮಾಡಿದರು. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಅವರನ್ನು ಸೇರಿಸಿದರು. ಸ್ಟಾರ್ಕ್ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ (WTC Final-2023) ಭಾರತದ ವಿರುದ್ಧ ಆಡಿದ್ದರು, ಅದರಲ್ಲಿ ಆಸ್ಟ್ರೇಲಿಯಾ ಗೆದ್ದಿತು.


19 ವರ್ಷದ ವೇಗಿಗಳಿಗೆ ಸಿಕ್ಕ ಅವಕಾಶ!


ಇಂಗ್ಲೆಂಡ್ ತಂಡದಲ್ಲಿ ಯಾವುದೇ ಪ್ರಮುಖ ಸ್ಪಿನ್ನರ್‌ ಗೆ ಸ್ಥಾನ ನೀಡಲಿಲ್ಲ. ತಂತ್ರದ ಅಡಿಯಲ್ಲಿ, ಬೆನ್ ಸ್ಟೋಕ್ಸ್ ಎಲ್ಲಾ ವೇಗದ ಬೌಲರ್‌ಗಳನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಿಕೊಂಡರು. ಇದರಲ್ಲಿ ಜೋಶ್ ಟಂಗ್ ನಾಲ್ಕನೇ ವೇಗಿಯಾಗಿರುತ್ತಾರೆ. 19ರ ಹರೆಯದ ಟಂಗ್ ಈ ತಿಂಗಳು ಲಾರ್ಡ್ಸ್‌ ನಲ್ಲಿ ಐರ್ಲೆಂಡ್ ವಿರುದ್ಧದ ಆಶಸ್ ಅಭ್ಯಾಸ ಪಂದ್ಯದಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದರು.


ಇದನ್ನೂ ಓದಿ: 6000 ದಿಂದ 50 ಸಾವಿರಕ್ಕೆ… ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದೇ ತಡ ಅಹಮದಾಬಾದ್ ಹೋಟೆಲ್ ರೂಂ ಬೆಲೆ ಇಷ್ಟೊಂದಾ?


ಜೋಶ್ ಟಂಗ್ ಯಾರು?


ಜೋಶ್ ಟಂಗ್ ಇದಕ್ಕೂ ಮುನ್ನ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಆಫ್ ಸ್ಪಿನ್ನರ್ ಮೊಯಿನ್ ಅಲಿ ಬದಲಿಗೆ ಇಂಗ್ಲೆಂಡ್ ತಂಡದ ಪ್ಲೇಯಿಂಗ್-11 ರಲ್ಲಿ ಟಂಗ್ ಅವರನ್ನು ಫೀಲ್ಡಿಂಗ್ ಗೆ ಇಳಿಸಲಾಯಿತು. ಜೋಶ್ ಟಂಗ್ ಇಂಗ್ಲೆಂಡ್ ಪರ 19 ವರ್ಷದೊಳಗಿನವರ ತಂಡದಲ್ಲೂ ಆಡಿದ್ದಾರೆ. ಅವರು ಈ ತಿಂಗಳು ಐರ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಷ್ಟೇ ಅಲ್ಲದೆ, ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ 5 ವಿಕೆಟ್ ಪಡೆದು ಆಯ್ಕೆಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.