Brijesh Patel Kiss video viral: ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಾಗಿ ಎಂತಹ ಮಿತಿಗಳನ್ನು ದಾಟಲು ಕೂಡ ಸಿದ್ಧರಾಗಿರುತ್ತಾರೆ. ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಅಥವಾ ಬ್ಯಾಟಿಂಗ್ ಮಾಡುವಾಗ ಅಭಿಮಾನಿಗಳು ಓಡಿಬಂದು ಆಟಗಾರರ ಕಾಲಿಗೆ ಬಿದ್ದು ಪಾದಗಳನ್ನು ಮುಟ್ಟುವುದನ್ನು ಅಥವಾ ಅವರನ್ನು ಅಪ್ಪಿಕೊಳ್ಳುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ ಆದರೆ, 1975 ರಲ್ಲಿ  ಊಹಿಸಲು ಸಾಧ್ಯವಾಗದ ಘಟನೆಯೊಂದು ಮೈದಾನದಲ್ಲಿ ಸಂಭವಿಸಿತ್ತು.


COMMERCIAL BREAK
SCROLL TO CONTINUE READING

ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಾಗಿ ಎಂತಹ ಮಿತಿಗಳನ್ನು ದಾಟಲು ಕೂಡ ಸಿದ್ಧರಾಗಿರುತ್ತಾರೆ. ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಅಥವಾ ಬ್ಯಾಟಿಂಗ್ ಮಾಡುವಾಗ ಅಭಿಮಾನಿಗಳು ಓಡಿಬಂದು ಆಟಗಾರರ ಕಾಲಿಗೆ ಬಿದ್ದು ಪಾದಗಳನ್ನು ಮುಟ್ಟುವುದನ್ನು ಅಥವಾ ಅವರನ್ನು ಅಪ್ಪಿಕೊಳ್ಳುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ ಆದರೆ, 1975 ರಲ್ಲಿ  ಊಹಿಸಲು ಸಾಧ್ಯವಾಗದ ಘಟನೆಯೊಂದು ಮೈದಾನದಲ್ಲಿ ಸಂಭವಿಸಿತ್ತು. ಭಾರತದ ಮಾಜಿ ಬ್ಯಾಟ್ಸ್‌ಮನ್ ಬ್ರಜೇಶ್ ಪಟೇಲ್ ವೆಸ್ಟ್‌ ಇಂಡೀಸ್‌ ವಿರದ್ಧದ ಪಂದ್ಯದಲ್ಲಿ ಅರ್ಧಶತಕ ಪೂರೈಸುತ್ತಿದ್ದಂತೆಯೇ  ಮೈದಾನಕ್ಕೆ ಓಡಿಬಂದ ಮಹಿಳಾ ಅಭಿಮಾನಿಯೊಬ್ಬರು ಅವರಿಗೆ ಮುತ್ತಿಟ್ಟಿದ್ದರು.


ಇದನ್ನೂ ಓದಿ:  ಹಿಟ್ಲರ್‌ಗೆ ತಲೆಬಾಗಲು ನಿರಾಕರಿಸಿದ್ದ ಭಾರತದ ದಂತಕಥೆ.. ಹಾಕಿಯಲ್ಲಿ ಜರ್ಮನಿ ತಂಡವನ್ನು ಸೋಲಿಸಿದ ಕಥೆಯೇ ರೋಚಕ..!


ಭಾರತೀಯ ಕ್ರಿಕೆಟ್‌ನಲ್ಲಿ, ಆಟಗಾರರು ಮತ್ತು ಅಭಿಮಾನಿಗಳಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನಾವು ಓದಿರುತ್ತೇವೆ ಅಥವಾ ಕೇಳಿತ್ತಿರುತ್ತೇವೆ. ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಅನೇಕ ಬಾರಿ ಅಭಿಮಾನಿಗಳು ಯಾವುದಾದರೊಂದು ರೀತಿಯಲ್ಲಿ ಮೈದಾನವನ್ನು ಪ್ರವೇಶಿಸಿದ ಉದಹಾರಣೆಗಳನ್ನು ನೋಡಿರುತ್ತೇವೆ. ಅಭಿಮಾನಿಗಳು ಈ ದಂತಕಥೆಗಳ ಪಾದಗಳನ್ನು ಮುಟ್ಟಿ ನಮಸ್ಕರಿಸುವುದನ್ನು ಸಹ ನೋಡಿರುತ್ತೇವೆ.1975ರಲ್ಲಿ ಕೂಡ ಇಂಥದ್ದೊಂದು ಸ್ವಾರಸ್ಯಕರ ಘಟನೆ ನಡೆದಿತ್ತು,  ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಫೀಲ್ಡ್‌ಗೆ ಓಡಿ ಬಂದು ಭಾರತೀಯ ಬ್ಯಾಟ್ಸ್‌ಮನ್‌ಗೆ ಮುತ್ತಿಟ್ಟಿದ್ದರು. 


1975 ರಲ್ಲಿ ಮುಂಬೈನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಐದನೇ ಪಂದ್ಯ ನಡೆಯುತ್ತಿತ್ತು. ಬ್ರಜೇಶ್ ಪಟೇಲ್ ಅರ್ಧ ಶತಕ ಸಿಡಿಸಿ ಜನರತ್ತ ಬ್ಯಾಟ್‌ ಎತ್ತಿ ತೋರಿದ್ದರು.  ಎಲ್ಲಿಂದಲೋ ಓಡಿ ಬಂದ ಸೀರೆಯುಟ್ಟ ಮಹಿಳಾ ಅಭಿಮಾನಿಯೊಬ್ಬರು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು, ಸೀದಾ ಬ್ರಜೇಶ್ ಪಟೇಲ್ ಬಳಿಗೆ ಹೋಗಿ ಅವರಿಗೆ ಮುತ್ತಿಟ್ಟಿದ್ದಳು. ಈ ಕುರಿತು ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ಇದನ್ನೂ ಓದಿ: 100 ವರ್ಷಗಳ ಹಿಂದೆ ಒಲಂಪಿಕ್ಸ್‌ ಆತಿಥ್ಯ ವಹಿಸಲು ದೇಶಗಳು ಹೋರಾಟ ನಡೆಸಿದ್ದೇಕೆ ಗೊತ್ತಾ..? ಬೆರಗು ಮೂಡಿಸುವಂತಿದೆ ಒಲಂಪಿಕ್ಸ್‌ ಹಿನ್ನೆಲೆ..!


 

 

 

 



 

 

 

 

 

 

 

 

 

 

 

A post shared by Satya Vyas (@satya__vyas)


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.