ನವದೆಹಲಿ: ಕೊರೊನಾ ಹಿನ್ನಲೆಯಲ್ಲಿ ಈಗ ಏಷ್ಯಾಕಪ್ ನ 2021 ಆವೃತ್ತಿಯು ಈಗ 2023 ರಲ್ಲಿ ನಡೆಯಲಿದೆ ಎನ್ನಲಾಗಿದೆ.ಐಪಿಎಲ್ ಸೇರಿದಂತೆ ಹಲವಾರು ಟೂರ್ನಿಗಳು ಈಗಾಗಾಲೇ ಕೊರೊನಾದಿಂದ ಸ್ಥಗಿತಗೊಂಡು ಮತ್ತೆ ಆರಂಭವಾಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: BCCI ಎಚ್ಚರಿಕೆ : ಕೊರೋನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಸರಣಿಯಿಂದಲೇ ಔಟ್..!


ಅಷ್ಟೇ ಅಲ್ಲದೆ ಬ್ಯುಸಿ ಆಗಿರುವ ಟೈಮ್ ಟೇಬಲ್ ನಿಂದಾಗಿ ಈಗ ಅನಿವಾರ್ಯವಾಗಿ ಈ ವರ್ಷ ನಡೆಯಬೇಕಾಗಿದ್ದ ಏಷ್ಯಾ ಕಪ್ ನ್ನು 2023 ಕ್ಕೆ ನಡೆಸಲಾಗುತ್ತದೆ.ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದ ಟೂರ್ನಿಯು ಕೊರೊನಾ ಪ್ರಕರಣಗಳ ಹೆಚ್ಚಳದಿಂದಾಗಿ ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿತ್ತು, ಆದರೆ ಅಲ್ಲಿಯೂ ಈಗ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದನ್ನು ರದ್ದು ಮಾಡಲಾಗುತ್ತಿದೆ. ಏಷ್ಯಾದ ನಾಲ್ಕು ತಂಡಗಳು ಈಗಾಗಲೇ ವರ್ಷದ ಅಂತ್ಯದವರೆಗೆ ಅವರ ವೇಳಾ ಪಟ್ಟಿ ಇರುವುದರಿಂದ ಈ ವರ್ಷದ ಟೂರ್ನಿಯನ್ನು ನಡೆಸುವುದು ಕಷ್ಟಕರವಾಗಿದೆ.


ಇದನ್ನೂ ಓದಿ: IPL 2021: ಐಪಿಎಲ್‌ನ ಉಳಿದ ಪಂದ್ಯಗಳನ್ನು ಭಾರತದಲ್ಲೇ ನಡೆಸಬಹುದು!


"ಮಂಡಳಿಯು ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದೆ ಮತ್ತು ಈವೆಂಟ್ ಅನ್ನು ಮುಂದೂಡುವುದು ಮುಂದಿನ ಮಾರ್ಗವಾಗಿದೆ ಎಂದು ನಿರ್ಧರಿಸಿದೆ.ಆದ್ದರಿಂದ ಪಂದ್ಯಾವಳಿಯ ಈ ಆವೃತ್ತಿಯು 2023 ರಲ್ಲಿ ನಡೆಯಲು ಸಾಧ್ಯವಿದೆ, ಏಕೆಂದರೆ ಈಗಾಗಲೇ 2022 ರಲ್ಲಿ ಏಷ್ಯಾಕಪ್ ಇದೆ. ಅದರ ದಿನಾಂಕಗಳನ್ನು ಸರಿಯಾದ ಸಮಯದಲ್ಲಿ ದೃಡಿಕರಿಸಲಾಗುವುದು" ಎಂದು ಎಸಿಸಿ ಹೇಳಿಕೆಯಲ್ಲಿ ತಿಳಿಸಿದೆ.


2018 ರಿಂದ ಯಾವುದೇ ಏಷ್ಯಾ ಕಪ್ ನಡೆದಿಲ್ಲ, 2020 ಕ್ಕೆ ಯೋಜಿಸಲಾಗಿರುವ ಪಂದ್ಯಾವಳಿಯು ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿದೆ. ಪಂದ್ಯಾವಳಿಯ ಕೊನೆಯ ಎರಡು ಆವೃತ್ತಿಗಳನ್ನು ಭಾರತ ಗೆದ್ದಿದೆ. ಈ ಪಂದ್ಯಾವಳಿಯನ್ನು ಸಾಮಾನ್ಯವಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.