ನವದೆಹಲಿ: ಪಾಕಿಸ್ತಾನದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸುವ ಬಗ್ಗೆ ಸಮಯ ಬಂದಾಗ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಏಕೆಂದರೆ ಅಂತರರಾಷ್ಟ್ರೀಯ ತಂಡಗಳು ನೆರೆಯ ದೇಶಕ್ಕೆ ಪ್ರವಾಸ ಮಾಡಲು ಇನ್ನೂ ಭದ್ರತಾ ಸಮಸ್ಯೆಗಳು ಇವೆ.ಐಸಿಸಿ ಮಂಗಳವಾರ 2025 ರ ಚಾಂಪಿಯನ್ಸ್ ಟ್ರೋಫಿಯ ಹೋಸ್ಟಿಂಗ್ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಿತು, ಆ ಮೂಲಕ ಎರಡು ದಶಕಗಳ ನಂತರ ಪಾಕಿಸ್ತಾನಕ್ಕೆ ಆತಿಥ್ಯವಹಿಸುವ ಭಾಗ್ಯ ಲಭಿಸಿದೆ.


ಇದನ್ನೂ ಓದಿ : ರೈತರಿಗೆ ಸಿಹಿ ಸುದ್ದಿ! PM Kisan ಯೋಜನೆಯ10ನೇ ಕಂತಿನಲ್ಲಿ ಸಿಗಲಿದೆ ₹4000, ಈ ಕೆಲಸ ಮಾಡಿ


'ಈ ಹಿಂದೆ, ಭದ್ರತಾ ಕಾಳಜಿಯ ಕಾರಣದಿಂದ ಹಲವು ದೇಶಗಳು ಅಲ್ಲಿಗೆ ಹೋಗುವುದರಿಂದ ಹಿಂದೆ ಸರಿದಿದ್ದವು. ನಿಮಗೆಲ್ಲ ತಿಳಿದಿರುವಂತೆ, ಅಲ್ಲಿ ಆಡುವಾಗ ಆಟಗಾರರ ಮೇಲೆ ದಾಳಿ ನಡೆಸಲಾಯಿತು ಮತ್ತು ಅದು ದೊಡ್ಡ ಸಮಸ್ಯೆಯಾಗಿದೆ' ಎಂದು ಠಾಕೂರ್ ತಿಳಿಸಿದರು.


'ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ನಡೆದಾಗ, ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಸಮಯ ಬಂದಾಗ, ನಾವು ಏನು ಮಾಡಬೇಕೆಂದು ನೋಡುತ್ತೇವೆ.ನಾವು ನಂತರ ಭದ್ರತಾ ಪರಿಸ್ಥಿತಿಯನ್ನು ನಿರ್ಣಯಿಸುತ್ತೇವೆ ಮತ್ತು ನಿರ್ಧರಿಸುತ್ತೇವೆ" ಎಂದು ಅವರು ಹೇಳಿದರು.ಇನ್ನೂ ಮುಂದುವರೆದು ಈ ವಿಚಾರವಾಗಿ ಗೃಹ ಸಚಿವಾಲಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು


ಭಾರತ ಮತ್ತು ಶ್ರೀಲಂಕಾದೊಂದಿಗೆ 1996 ರ ವಿಶ್ವಕಪ್ ಅನ್ನು ಕೊನೆಯದಾಗಿ ಆಯೋಜಿಸಿದ್ದ ಪಾಕಿಸ್ತಾನ, 2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕ ದಾಳಿಯ ನಂತರ ದೇಶದಲ್ಲಿ ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ.ಇತ್ತೀಚೆಗಷ್ಟೇ,ಭದ್ರತಾ ಕಾರಣಗಳಿಂದಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಪಾಕಿಸ್ತಾನಕ್ಕೆ ತಮ್ಮ ದ್ವಿಪಕ್ಷೀಯ ಪ್ರವಾಸದಿಂದ ಹಿಂದೆ ಸರಿದಿದ್ದವು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.