World Cup 2023 News: 2023 ರ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು,  ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ 2023 ರ ವಿಶ್ವಕಪ್‌ನ ಗುಂಪು ಹಂತದ ಪಂದ್ಯವು ಅಕ್ಟೋಬರ್ 15 ರಂದು ನಡೆಯಲಿದೆ. ಭಾರತ 12 ವರ್ಷಗಳ ಹಿಂದೆ ತವರಿನಲ್ಲಿ ಆಡಿದ 2011 ರ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತ್ತು. ಈ ಬಾರಿ 2023 ರ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಭಾರತವನ್ನು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 7 ಪಂದ್ಯದಲ್ಲಿ 32 ವಿಕೆಟ್ ಕಬಳಿಸಿದ ಈ ಆಟಗಾರನಿಗೆ ಅವಕಾಶ ನೀಡದೆ ವಂಚಿಸಿದ್ರಾ ಧೋನಿ? ಇದೆಂಥಾ ಸೇಡು..!


ಇನ್ನು ನಿವೃತ್ತಿಯ ಅಂಚಿನಲ್ಲಿ ನಿಂತಿರುವ ಈ 3 ಭಾರತೀಯ ಆಟಗಾರರು ಏಕಾಂಗಿಯಾಗಿ ಪಂದ್ಯದ ಸ್ಥಿತಿಯನ್ನೇ ಬದಲಿಸಬಲ್ಲರು. 2023 ರ ವಿಶ್ವಕಪ್ ಗೆಲ್ಲಲು, ಬಿಸಿಸಿಐ ಈ ಆಟಗಾರರನ್ನು ಟೀಮ್ ಇಂಡಿಯಾದಲ್ಲಿ ಇದ್ದಕ್ಕಿದ್ದಂತೆ ಪ್ರವೇಶಿಸುವಂತೆ ಮಾಡಲಿದೆ. ಈ ಆಟಗಾರರನ್ನು ನೋಡೋಣ:


1. ಮೋಹಿತ್ ಶರ್ಮಾ


ಭಾರತೀಯ ಪಿಚ್‌ ಗಳಲ್ಲಿ ಮೋಹಿತ್ ಶರ್ಮಾ ಅವರ ಮಾರಣಾಂತಿಕ ಡೆತ್ ಬೌಲಿಂಗ್ ಅನ್ನು ನೋಡಿದ ಬಿಸಿಸಿಐ ಈ ಮ್ಯಾಚ್ ವಿನ್ನರ್‌ ನ ವಿಶ್ವಕಪ್ 2023ರ ತಂಡಕ್ಕೆ ಪ್ರವೇಶ ನೀಡಬಹುದು. ಭಾರತಕ್ಕೆ 2023 ರ ವಿಶ್ವಕಪ್‌ ನಲ್ಲಿ ಅತ್ಯುತ್ತಮ ಡೆತ್ ಬೌಲರ್‌ ಗಳ ಅಗತ್ಯವಿದೆ. ಹೀಗಾಗಿ ನಿರ್ಣಾಯಕ ಸಂದರ್ಭಗಳಲ್ಲಿ ರನ್‌ ಗಳನ್ನು ತಡೆಯಬಹುದು. ವೇಗದ ಬೌಲರ್ ಮೋಹಿತ್ ಶರ್ಮಾ ಅವರು 2014 ರ ಟಿ 20 ವಿಶ್ವಕಪ್ ಮತ್ತು 2015 ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಸಮಯದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಮೋಹಿತ್ ಶರ್ಮಾ ಐಪಿಎಲ್ 2023ರ ಋತುವಿನಲ್ಲಿ 14 ಪಂದ್ಯಗಳನ್ನು ಆಡುವ ಮೂಲಕ ಒಟ್ಟು 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಗಳ ಪಟ್ಟಿಯಲ್ಲಿ ಮೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಭಾರತದ ನೆಲದಲ್ಲಿ ನಡೆಯಲಿದೆ.


2. ಶಿಖರ್ ಧವನ್:


ICC ಟೂರ್ನಮೆಂಟ್‌ ಗಳಲ್ಲಿ ಶಿಖರ್ ಧವನ್ ಅವರ ಅದ್ಭುತ ದಾಖಲೆಗಳನ್ನು ನೋಡಿದರೆ, BCCI 2023 ರ ವಿಶ್ವಕಪ್ ತಂಡದಲ್ಲಿ ಅವರ ಪ್ರವೇಶ ನೀಡಬಹುದು ಎಂದನಿಸುತ್ತದೆ. ಟೀಂ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ದೊಡ್ಡ ಟೂರ್ನಿಗಳನ್ನು ಗೆದ್ದ ಅನುಭವ ಹೊಂದಿದ್ದಾರೆ. ಭಾರತ ಕೊನೆಯ ಬಾರಿಗೆ 2013 ರಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಇದರಲ್ಲಿ ಶಿಖರ್ ಧವನ್ ದೊಡ್ಡ ಪಾತ್ರವನ್ನು ವಹಿಸಿದ್ದರು. 2013ರಲ್ಲಿ ಶಿಖರ್ ಧವನ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ 363 ರನ್ ಗಳಿಸಿದ್ದರು. ICC ODI ವಿಶ್ವಕಪ್‌ ಗೆ ಶಿಖರ್ ಧವನ್ ಶುಭ್ಮನ್ ಗಿಲ್‌ ಗಿಂತ ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಮೊದಲ ಟೆಸ್ಟ್’ನಲ್ಲೇ 5 ವಿಕೆಟ್ ಕಬಳಿಸಿದ 19 ವರ್ಷದ ಈ ಆಟಗಾರನಿಗೆ ಕೊನೆ ಕ್ಷಣದಲ್ಲಿ ಮಣೆ ಹಾಕಿದ ಸಮಿತಿ!


3. ಪಿಯೂಷ್ ಚಾವ್ಲಾ:


ಸ್ಪಿನ್ ಬೌಲರ್‌ ಗಳು ಭಾರತೀಯ ಪಿಚ್‌ ಗಳಲ್ಲಿ ಅದ್ಭುತ ಸಹಾಯವನ್ನು ಪಡೆಯುತ್ತಾರೆ. ಅಂದಹಾಗೆ ಈ ವರ್ಷ 2023 ರ ವಿಶ್ವಕಪ್ ಕೂಡ ಭಾರತದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ತನ್ನ ಅನುಭವಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಯುಜ್ವೇಂದ್ರ ಚಾಹಲ್ ಬದಲಿಗೆ ಅಚ್ಚರಿಯ ಪ್ರವೇಶವನ್ನು ಮಾಡಬಹುದು. ಐಪಿಎಲ್ 2023ರಲ್ಲಿ 16 ಪಂದ್ಯಗಳನ್ನು ಆಡಿರುವ ಪಿಯೂಷ್ ಚಾವ್ಲಾ ಒಟ್ಟು 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾ ನಾಲ್ಕನೇ ಸ್ಥಾನದಲ್ಲಿದ್ದರು. ಪಿಯೂಷ್ ಚಾವ್ಲಾ 2011ರ ಏಕದಿನ ವಿಶ್ವಕಪ್‌ ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಪಿಯೂಷ್ ಚಾವ್ಲಾ 25 ಏಕದಿನ ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.