30 ವರ್ಷಗಳ ನಂತರ ಈ ಮೈದಾನದಲ್ಲಿ ನಡೆಯುತ್ತಿದೆ ಮ್ಯಾಚ್
ಕಳೆದ ಎರಡು ದಿನಗಳಿಂದ ತಿರುವನಂತಪುರಂ ನಲ್ಲಿ ಬಾರಿ ಮಳೆ ಸುರಿಯುತ್ತಿದೆ. ಮಂಗಳವಾರ ಸಹ ಬೆಳಿಗ್ಗೆ ಮತ್ತು ಸಂಜೆ 5 ಗಂಟೆಯ ನಂತರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ತಿರುವನಂತಪುರಂ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ -20 ಪಂದ್ಯದಲ್ಲಿ ಮಳೆಯ ತೊಂದರೆ ಎದುರಾಗಿದೆ. ಮಳೆಯಿಂದ ಪಂದ್ಯವನ್ನು ಉಳಿಸಲು, ಮಂಗಳವಾರ ಬೆಳಿಗ್ಗೆ ಜನರು ಪಜಾವಂಗಡಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಮೊರೆಹೋಗಿದ್ದಾರೆ. ಈ ದಿನ ಸಂಜೆ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ ಯಶಸ್ವಿ ಆಯೋಜಿತ ಟಿ-20 ಪಂದ್ಯವಾಗಿದೆ. 30ವರ್ಷಗಳ ನಂತರ ಈ ಪ್ರದೇಶದಲ್ಲಿ ನಡೆಯುತ್ತಿರುವ ಪಂದ್ಯ ಇದಾಗಿದೆ.
1988 ರ ನಂತರದ ಮೊದಲ ಬಾರಿಗೆ, ಅಂತಾರಾಷ್ಟ್ರೀಯ ಪಂದ್ಯಗಳು ತಿರುವನಂತಪುರಂನಲ್ಲಿ ನಡೆಯುತ್ತಿವೆ ಮತ್ತು ಎಲ್ಲರೂ ಅದನ್ನು ನೋಡಲು ಉತ್ಸುಕರಾಗಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಅಂತಿಮ ಮತ್ತು ನಿರ್ಣಾಯಕ ಪಂದ್ಯವನ್ನು ಹೊಸದಾಗಿ ನಿರ್ಮಿಸಲಾದ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ಸಂಜೆ 7:00 ಗಂಟೆಗೆ ಆಡಲಾಗುತ್ತದೆ.
ಕಳೆದ ಎರಡು ದಿನಗಳಿಂದ ತಿರುವನಂತಪುರಂ ನಲ್ಲಿ ಬಾರಿ ಮಳೆ ಸುರಿಯುತ್ತಿದೆ. ಮಂಗಳವಾರ ಸಹ ಬೆಳಿಗ್ಗೆ ಮತ್ತು ಸಂಜೆ 5 ಗಂಟೆಯ ನಂತರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಗ್ರೀನ್ಫೀಲ್ಡ್ ಸ್ಟೇಡಿಯಂ ನಲ್ಲಿ ಮಳೆಯ ನೀರನ್ನು ಒಣಗಿಸಲು ಒಳ್ಳೆಯ ವ್ಯವಸ್ಥೆ ಇದೆ. ಆಯೋಜಕರು ಇಲ್ಲಿ ಒಂದು ವೇಳೆ ಮಳೆ ಬಂದರೂ ಸಹ ಮಳೆ ನಿಂತ ಹತ್ತೇ ನಿಮಿಷದಲ್ಲಿ ಮೈದಾನವು ಮ್ಯಾಚ್ಗೆ ತಯಾರಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪಂದ್ಯಕ್ಕಾಗಿ ಹೆಚ್ಚಿನ ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ. 50,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣದಲ್ಲಿ ಸುಮಾರು 40,000 ಟಿಕೆಟ್ಗಳನ್ನು ಮಾರಾಟ ಮಾಡಲಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸಂಜೆ 5 ಗಂಟೆಗೆ ಸ್ಟೇಡಿಯಂ ತಲುಪಿವೆ.