unplaced players in world cup: ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತದ ಅಮೋಘ ಆತಿಥ್ಯದಲ್ಲಿ ಅಕ್ಟೋಬರ್ 5ರಿಂದ ಕ್ರಿಕೆಟ್ ಟೂರ್ನಿ ಪ್ರಾರಂಭವಾಗಲಿದ್ದು, ಪ್ರತೀ ತಂಡಗಳು ಈಗಾಗಲೇ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ 12 ವರ್ಷಗಳ ಬಳಿಕ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಲು ಟೀಂ ಇಂಡಿಯಾ ತುದಿಗಾಲಿನಲ್ಲಿ ಕಾಯುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಈ ವಿಶಿಷ್ಟ ದಾಖಲೆ ಮೂಲಕ ಸಚಿನ್-ಧೋನಿ ಕ್ಲಬ್ ಸೇರಲಿದ್ದಾರೆ ಆರ್. ಅಶ್ವಿನ್


ಈ ಎಲ್ಲದರ ಮಧ್ಯೆ 5 ತಂಡಗಳ 5 ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದಿದ್ದಾರೆ. ಆ ಆಟಗಾರರು ಯಾರೆಂದು ತಿಳಿದುಕೊಳ್ಳೋಣ.


ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಎನ್ರಿಕ್ ನಾರ್ಖಿಯಾ ಬೆನ್ನುನೋವಿನ ಸಮಸ್ಯೆಯಿಂದಾಗಿ ಮೆಗಾ ಟೂರ್ನಿಯಿಂದ ಹೊರಗುಳಿದಿದ್ದಾರೆ. 2019 ರಲ್ಲಿ ದಕ್ಷಿಣ ಆಫ್ರಿಕಾ ಪರ ಪಾದಾರ್ಪಣೆ ಮಾಡಿದ ಅವರು, 22 ODI ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 36 ವಿಕೆಟ್’ಗಳನ್ನು ಕಬಳಿಸಿದ ದಾಖಲೆ ಇವರದ್ದು.


ಇನ್ನೊಬ್ಬ ಸ್ಟಾರ್ ಆಟಗಾರ ಶ್ರೀಲಂಕಾದ ಸ್ಪಿನ್ ಮಾಸ್ಟರ್ ವನಿಂದು ಹಸರಂಗ ಕೂಡ ಆರೋಗ್ಯ ಸಮಸ್ಯೆಯಿಂದ ವಿಶ್ವಕಪ್’ನಿಂದ ಹೊರಗುಳಿದಿದ್ದಾರೆ. ಇನ್ನು ಹಸರಂಗ ಬದಲಿಗೆ ದುನಿತ್ ವೆಳ್ಳಾಲಗೆ ಅವಕಾಶ ನೀಡಲಾಗಿದೆ.


ಮೂರನೇ ಆಟಗಾರ ಕಿವೀಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮೈಕಲ್ ಬ್ರೇಸ್‌ವೆಲ್. ಕಾಲಿನ ಗಾಯದಿಂದಾಗಿ ಮೈಕಲ್ ವಿಶ್ವ ಟೂರ್ನಿಯಿಂದ ಹೊರಬಿದ್ದಿದ್ದಾರೆ.


ಇದನ್ನೂ ಓದಿ: ವ್ಯಾಯಾಮ ಬೇಡವೇ ಬೇಡ… ಈ ಧಾನ್ಯವನ್ನು ಪ್ರತೀದಿನ ಜಗಿದು ತಿಂದರೆ ಹೊಟ್ಟೆಯ ಕೊಬ್ಬು ಒಂದೇ ವಾರದಲ್ಲಿ ಕರಗುತ್ತೆ!


ಪಾಕಿಸ್ತಾನದ ಸ್ಟಾರ್ ಬೌಲರ್ ನಸೀಮ್ ಶಾ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದು, ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಸ್ಪಿನ್ನರ್ ಆಶ್ಟನ್ ಅಗರ್ ಕೂಡ ವಿಶ್ವಕಪ್ ನಿಂದ ಹೊರಗುಳಿದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ