Pakistan Bowler Mohammad Zeeshan: ವಿಶ್ವಕಪ್’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಬೌಲರ್‌’ಗಳು ಕಳಪೆ ಪ್ರದರ್ಶನ ತೋರಿರಬಹುದು. ಆದರೆ ಕಿರಿಯರು ಇದಕ್ಕೆ ವಿರುದ್ಧವಾಗಿ ಅದ್ಭುತವಾಗಿ ಆಡುತ್ತಿದ್ದಾರೆ. ಏಷ್ಯಾಕಪ್ ಅಂಡರ್-19ರಲ್ಲಿ ಪಾಕ್ ತಂಡದ ಲಂಬು ಬೌಲರ್ ಒಬ್ಬ ಏಕಾಂಗಿಯಾಗಿ ತಂಡದ ಅರ್ಧಕ್ಕೂ ಹೆಚ್ಚು ಮಂದಿ ಅಂದರೆ 6 ವಿಕೆಟ್ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  “20 ಕೆಜಿ ತೂಕ ಇಳಿಸು, ಆಮೇಲೆ ತಂಡಕ್ಕೆ ಸೇರಿಸುತ್ತೇನೆ”- ಈ ಆಟಗಾರನಿಗೆ ಕಂಡೀಷನ್ ಹಾಕಿದ ಧೋನಿ


ಶುಕ್ರವಾರ ನೇಪಾಳ ವಿರುದ್ಧ ಅದ್ಭುತ ಬೌಲಿಂಗ್ ಮಾಡುವ ಮೂಲಕ ಇಡೀ ತಂಡ ಕೇವಲ 152 ರನ್‌’ಗಳಿಗೆ ಆಲೌಟ್ ಆಗಿತ್ತು. 6 ಅಡಿ 8 ಇಂಚು ವೇಗದ ಬೌಲರ್ ಮೊಹಮ್ಮದ್ ಜೀಶಾನ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌’ಗಳ ಮೇಲೆ ತಮ್ಮ ಬೌಲಿಂಗ್ ಮೂಲಕವೇ ದಾಳಿ ನಡೆಸಿದ್ದರು.


19 ವರ್ಷದೊಳಗಿನವರ ಏಷ್ಯಾಕಪ್‌ ಪಂದ್ಯದಲ್ಲಿ ಶುಕ್ರವಾರ ಪಾಕಿಸ್ತಾನ ತಂಡ ನೇಪಾಳವನ್ನು ಎದುರಿಸಿತ್ತು. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. 50 ಓವರ್‌’ಗಳ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಜೀಶಾನ್, ಟಿ20 ರೀತಿಯ ಪ್ರದರ್ಶನ ನೀಡಿದರು. ಈ ಮೂಲಕ ನೇಪಾಳ ತಂಡದ ಅರ್ಧಕ್ಕಿಂತ ಹೆಚ್ಚು ಬ್ಯಾಟ್ಸ್‌ಮನ್‌’ಗಳು ಕೆಲವೇ ರನ್‌ ಗಳಿಸಿ ಪೆವಿಲಿಯನ್’ಗೆ ಮರಳಿದರು.


ಮೊಹಮ್ಮದ್ ಜೀಶಾನ್ ಅಂಡರ್-19 ಕ್ರಿಕೆಟ್‌’ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಏಷ್ಯಾಕಪ್ ನಲ್ಲಿ ನೇಪಾಳ ವಿರುದ್ಧ 9.2 ಓವರ್ ಬೌಲಿಂಗ್ ಮಾಡಿದ ಈ ಯುವ ಆಟಗಾರ ಕೇವಲ 19 ರನ್ ನೀಡಿ ಒಟ್ಟು 6 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನದ 17 ವರ್ಷದ ಜೀಶಾನ್ ಆರಂಭಿಕ ಬ್ಯಾಟ್ಸ್‌ಮನ್ ಅರ್ಜುನ್, ಕ್ಯಾಪ್ಟನ್ ದೇವ್, ದೀಪೇಶ್, ಬಿಶಾಲ್, ಬಿಪಿನ್ ರಾವತ್ ಮತ್ತು ಆಕಾಶ್ ಚಂದ್ ಅವರ ವಿಕೆಟ್ ಪಡೆದರು.


ಇದನ್ನೂ ಓದಿ: ಸಾರಾ ಜೊತೆ ಅಲ್ಲ… ಈ ನಟಿಯೊಂದಿಗೆ ಲಂಡನ್ ಬೀದಿಯಲ್ಲಿ ಸುತ್ತಾಡಿದ ಪ್ರಿನ್ಸ್ ಶುಭ್ಮನ್ ಗಿಲ್!


ಪಾಕಿಸ್ತಾನ ಕ್ರಿಕೆಟ್ ತಂಡದ 6.8 ಅಡಿ ಎತ್ತರದ ಈ ಬೌಲರ್ ನೇಪಾಳ ವಿರುದ್ಧ ಸ್ಮರಣೀಯ ಪ್ರದರ್ಶನ ನೀಡಿದರು. ಆದರೆ, ಆಫ್ರಿಕನ್ ತಂಡದ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆಯನ್ನು ಮುರಿಯಲು ಅವರಿಗೆ ಸಾಧ್ಯವಾಗಲಿಲ್ಲ. ಶಾಹೀನ್ ಅಫ್ರಿದಿ ನಂತರ, ಅವರು ಯೂತ್ ODI ನಲ್ಲಿ ಪಾಕಿಸ್ತಾನದ ಅತ್ಯುತ್ತಮ ಬೌಲಿಂಗ್ ವಿಷಯದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಶಾಹೀನ್ 2018ರಲ್ಲಿ ಕೇವಲ 15 ರನ್ ನೀಡಿ 6 ವಿಕೆಟ್ ಪಡೆದಿದ್ದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ