"ಅವನ ಬಗ್ಗೆ ಬರೆಯಲು ಪ್ರಯತ್ನಿಸಬೇಡಿ, ಆದರೆ ಆತನ ಸಾಧನೆಗಳನ್ನು ಒಮ್ಮೆ ನೋಡಿ" ಎಂದು ಮ್ಯಾಂಚೆಸ್ಟರ್ ಸಿಟಿ ಮುಖ್ಯ ಕೋಚ್ ಮತ್ತು ಬಾರ್ಸಿಲೋನಾ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಪೆಪ್ ಗಾರ್ಡಿಯೋಲಾ ಒಮ್ಮೆ ಲಿಯೋನೆಲ್ ಮೆಸ್ಸಿ ಬಗ್ಗೆ ಹೇಳಿಕೆ ನೀಡಿದ್ದರು. ಅರ್ಜೆಂಟೀನಾ ನಾಯಕ ಮತ್ತು ಬಾರ್ಸಿಲೋನಾ ದಂತಕಥೆಯ ಲಿಯೊನೆಲ್‌ ಮೆಸ್ಸಿಯನ್ನು ಯಾವುದೇ ಸಂದೇಹವಿಲ್ಲದೆ ಅತ್ಯುತ್ತಮ ಆಟಗಾರ ಎಂದು ಉಲ್ಲೇಖಿಸಬಹುದು. ಅಂತಹ ಮಹಾನ್‌ ಆಟಗಾರ, ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಸೂಪರ್‌ಸ್ಟಾರ್ ಇಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಎಫ್‌ಸಿ ಬಾರ್ಸಿಲೋನಾ ಜೊತೆಗಿನ 21 ವರ್ಷಗಳ ಒಡನಾಟವನ್ನು ಮೆಸ್ಸಿ ಕೊನೆಗೊಳಿಸಿ ಒಂದು ವರ್ಷಗಳೇ ಕಳೆದಿದೆ. ಆದರೆ ತಂಡದಲ್ಲಿರುವಾಗ ಈ ಲೆಜೆಂಡ್‌ ಆಟಗಾರ ಆಡಿದ ವೈಖರಿ ಎಂತೌರನ್ನೂ ಬೆರಗು ಮೂಡಿಸಿದೆ ಎಂದರೆ ತಪ್ಪಾಗಲ್ಲ. ಇದೀಗ ಫುಟ್ಬಾಲ್ ಪ್ರತಿಭೆ ಸಾಧಿಸಿದ ಕೆಲವು ದಾಖಲೆಗಳು ಮತ್ತು ಮಾಡಿರುವ ಸಾಧನೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. 


ಇದನ್ನೂ ಓದಿ: Mangal Gochar 2022: ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ- ಈ ರಾಶಿಯವರಿಗೆ ಸಂಕಷ್ಟ


ಲಿಯೊನೆಲ್‌ ಮೆಸ್ಸಿ ಮಾಡಿರುವ ಸಾಧನೆಗಳು ಅಭಿಮಾನಿಗಳು ಮಾತ್ರವಲ್ಲ ಜಗತ್ತನ್ನೇ ನಿಬ್ಬೆರಗುಗೊಳಿಸಿದೆ. ಮಾಜಿ ಎಫ್‌ಸಿ ಬಾರ್ಸಿಲೋನಾ ತಾರೆ ಮೆಸ್ಸಿ, ಒಂದು ವರ್ಷದಲ್ಲಿ ಗೋಲ್ಡನ್ ಬೂಟ್, ಪಿಚಿಚಿ ಟ್ರೋಫಿ, FIFA ವರ್ಲ್ಡ್ ಪ್ಲೇಯರ್ ಮತ್ತು ಬ್ಯಾಲನ್ ಡಿ'ಓರ್ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ ಮೆಸ್ಸಿ. 2009-10 ರ ಸೀಸನ್‌ನಲ್ಲಿ ಮೆಸ್ಸಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ/ ಅಷಗಟೇ ಅಲ್ಲದೆ, UEFA ಚಾಂಪಿಯನ್ಸ್ ಲೀಗ್‌ನ ಟಾಪ್ ಸ್ಕೋರರ್ ಆಗಿಯೂ ಹೊರಹೊಮ್ಮಿದ್ದಾರೆ. ಇನ್ನೊಂದು ಕುತೂಹಲ ವಿಷಯವೆಂದರೆ, ಮೂರು ಬ್ಯಾಲನ್ಸ್ ಡಿ'ಓರ್ ಪ್ರಶಸ್ತಿಗಳನ್ನು ಪಡೆದ ಅತ್ಯಂತ ಕಿರಿಯ ಆಟಗಾರ ಮೆಸ್ಸಿ ಎಂಬುದು ನಿಮಗೆ ತಿಳಿದಿರಲೇ ಬೇಕಾದ ಸಂಗತಿ.


ಗೋಲ್‌ ಮೆಷಿನ್‌ ಮೆಸ್ಸಿ: 
ಅರ್ಜೆಂಟೀನಾ ನಾಯಕ ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ ಪ್ರತಿಷ್ಠಿತ ಗೋಲ್ಡನ್ ಶೂ ಗೆದ್ದಿದ್ದಾರೆ. ಕ್ಲಬ್ ಫುಟ್ಬಾಲ್ ಇತಿಹಾಸದಲ್ಲಿ ಮೆಸ್ಸಿಗಿಂತ ಹೆಚ್ಚು ಗೋಲ್ಡನ್ ಶೂಗಳನ್ನು ಗೆದ್ದ ಯಾವುದೇ ಆಟಗಾರ ಇಲ್ಲ. ಮೆಸ್ಸಿಯ ಈ ದಾಖಲೆಗಳು ಬಾರ್ಸಿಲೋನಾ ಗೆಲುವಿಗೆ ಕಾರಣವಾಗಿತ್ತು. ಮೆಸ್ಸಿ ಈ ಹಿಂದೆ 2009-10, 2011-12, 2012-13, 2016-17, 2017-18 ಮತ್ತು 2018-19 ಸೀಸನ್‌ಗಳಲ್ಲಿ ಗೋಲ್ಡನ್ ಶೂ ವಿಜೇತರಾಗಿ ಗುರುತಿಸಲ್ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಪಿಎಸ್‌ಜಿ ಸೂಪರ್‌ಸ್ಟಾರ್ ಮೆಸ್ಸಿ, ಲಾ ಲಿಗಾ 2011-12 ರ ಸೀಸನ್‌ನಲ್ಲಿ ಬರೋಬ್ಬರಿ 50 ಗೋಲುಗಳನ್ನು ಬಾರಿಸುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಮೆಸ್ಸಿಯವರನ್ನು ಗೋಲ್‌ ಮೆಷಿನ್‌ ಎಂದು ಕರೆಯುತ್ತಾರೆ. 


ಸಾರ್ವಕಾಲಿಕ ಟಾಪ್ ಸ್ಕೋರರ್: 
ಮಾಜಿ ಬಾರ್ಸಿಲೋನಾ ನಾಯಕ ಮೆಸ್ಸಿ 2012 ರಲ್ಲಿ 91 ಗೋಲುಗಳನ್ನು ಬಾರಿಸಿ ಇತಿಹಾಸ ಪುಸ್ತಕಗಳಲ್ಲಿ ತನ್ನ ಹೆಸರನ್ನು ಅಚ್ಚಳಿಯದಂತೆ ಬರೆದಿದ್ದಾರೆ. ಬಾರ್ಸಿಲೋನಾ ತಂಡದಲ್ಲಿ ಮೆಸ್ಸಿ 59 ಪಂದ್ಯಗಳನ್ನಾಡಿದ್ದು, ಅದರಲ್ಲಿ 84 ಗೋಲು ಬಾರಿಸಿದ್ದಾರೆ. ಇನ್ನು ಚಾಂಪಿಯನ್ಸ್ ಲೀಗ್‌ನಲ್ಲಿ 13 ಗೋಲುಗಳನ್ನು ಹೊಡೆದಿದ್ದಾರೆ. 


ಮಾಜಿ ಬಾರ್ಸಿಲೋನಾ ನಾಯಕ ಸ್ಪ್ಯಾನಿಷ್ ಟಾಪ್ ಫ್ಲೈಟ್‌ನಲ್ಲಿ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2002 ರಿಂದ 2020 ರವರೆಗೆ, ಮೆಸ್ಸಿ 10 ಲೀಗ್‌ಗಳು, 8 ಸ್ಪ್ಯಾನಿಷ್ ಸೂಪರ್ ಕಪ್‌ಗಳು, 7 ಕೋಪಾಸ್ ಡೆಲ್ ರೇ, 4 ಚಾಂಪಿಯನ್ಸ್ ಲೀಗ್‌ಗಳು, 3 ಕ್ಲಬ್ ವರ್ಲ್ಡ್ ಕಪ್‌ಗಳು ಮತ್ತು 3 ಯುರೋಪಿಯನ್ ಸೂಪರ್ ಕಪ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೆಸ್ಸಿ ಬಾರ್ಸಿಲೋನಾ ಆಟಗಾರನಾಗಿ ಆರು ಬ್ಯಾಲನ್ ಡಿ ಓರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಗೆ ಮೆಸ್ಸಿ ಸ್ಪ್ಯಾನಿಷ್ ಟಾಪ್-ಫ್ಲೈಟ್‌ನಲ್ಲಿ ಅತಿ ಹೆಚ್ಚು ಪಿಚಿಚಿ ಟ್ರೋಫಿಗಳನ್ನು ಪಡೆದಿದ್ದಾರೆ. 


ಇದನ್ನೂ ಓದಿ: Sarkari Naukri: ನೀವು ಈ ಅರ್ಹತೆಯನ್ನು ಹೊಂದಿದ್ದರೆ ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ


ಸ್ಪ್ಯಾನಿಷ್ ಲೀಗ್‌ನಲ್ಲಿ ಅತಿ ಹೆಚ್ಚು ಗೆಲುವುಗಳನ್ನು ಗಳಿಸಿದ ಆಟಗಾರನಾದ ಬಳಿಕ ಮೆಸ್ಸಿ ಬಾರ್ಸಿಲೋನಾ ತಂಡವನ್ನು ತೊರೆದರು. ಆದರೆ ಆ ನಂತರ ಮೆಸ್ಸಿ ದೇಶೀಯ ಮಟ್ಟದಲ್ಲಿ ಬಾರ್ಕಾ ತಂಡಕ್ಕೆ ಕೋಚ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಾರ್ಸಿಲೋನಾ ಐಕಾನ್ ಮೆಸ್ಸಿ 520 ಲಾ ಲಿಗಾ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಂಪ್ ನೌನಲ್ಲಿ 100 ಮತ್ತು 200 ಗೋಲುಗಳನ್ನು ಗಳಿಸಿದ ಅತ್ಯಂತ ಕಿರಿಯ ಆಟಗಾರ. ʼ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.