Ab De Villiers On Virat Kohli: ಕಳೆದ ಕೆಲ ದಿನಗಳ ಹಿಂದೆ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ವಿರಾಟ್ ಕೊಹ್ಲಿ 2ನೇ ಬಾರಿ ತಂದೆಯಾಗಲಿದ್ದಾರೆ. ಇದೇ ಕಾರಣಕ್ಕೆ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಆಡುತ್ತಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದರು. ಆದರೆ ಇದೀಗ ಡಿವಿಲಿಯರ್ಸ್ ಯು ಟರ್ನ್ ಹೊಡೆದಿದ್ದು, ನಾನು ದೊಡ್ಡ ತಪ್ಪು ಮಾಡಿದ್ದು, ಕೊಹ್ಲಿ ತಂದೆಯಾಗುತ್ತಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Gold Rate:ಭಾರತದಲ್ಲಿ 10 ಗ್ರಾಂ ಚಿನ್ನದ ದರ ಏರಿಕೆ: ನಿಮ್ಮ ನಗರದಲ್ಲಿನ ಬೆಲೆಯನ್ನು ಪರಿಶೀಲಿಸಿ!


5 ದಿನಗಳ ಹಿಂದೆ, ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದರು, ಇದರಿಂದಾಗಿ ಅವರು ಕ್ರಿಕೆಟ್‌’ನಿಂದ ವಿರಾಮ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ತಮ್ಮ ಹೆಸರನ್ನು ಹಿಂಪಡೆಯಲು ಇದುವೇ ಕಾರಣ ಎಂದಿದ್ದರು.


ಆದರೆ ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್‌’ಗೆ ತನ್ನ ತಪ್ಪಿನ ಅರಿವಾಗಿದ್ದು, “ವಿರಾಟ್ ಕೊಹ್ಲಿ ಅವರ ಖಾಸಗಿತನದ ಬಗ್ಗೆ ಮಾತನಾಡಿದ್ದು ತಪ್ಪು, ನಾನು ದೊಡ್ಡ ತಪ್ಪು ಮಾಡಿದ್ದೇನೆ. ಅದೆಲ್ಲಾ ಸುಳ್ಳು” ಎಂದು ಹೇಳಿದ್ದಾರೆ.


ಇದನ್ನೂ ಓದಿ: Virat Kohli: ಮುರಿದುಬಿತ್ತು ವಿರಾಟ್ ಕೊಹ್ಲಿಯ 8 ವರ್ಷಗಳ ಸಂಬಂಧ! ಸುದೀರ್ಘ ಒಡನಾಟ ಅಂತ್ಯಗೊಳಿಸಲು ಕಾರಣ ಇದುವೇ…


ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಈಗಾಗಲೇ ಆಡಲಾಗಿದೆ. ಬಿಸಿಸಿಐ ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿತ್ತು. ಕೊನೆಯ ಮೂರು ಟೆಸ್ಟ್‌’ಗಳಿಗೆ ಭಾರತ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ ವಿರಾಟ್ ಕೊಹ್ಲಿ ಉಳಿದ ಮೂರು ಟೆಸ್ಟ್‌’ಗಳಿಂದಲೂ ಹೊರಗುಳಿಯಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.